ಮೋದಿ ಸರ್ಕಾರಕ್ಕೆ ಎದುರಾಯ್ತಾ ಸಂಕಷ್ಟ..?

First Published Jun 17, 2018, 9:26 AM IST
Highlights

ಭಾನುವಾರ ಬೆಳಗ್ಗೆ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಸಭೆ ನಡೆಯಲಿದೆ. ಇದರ ಮುನ್ನಾ ದಿವಸವಾದ ಶನಿವಾರವೇ ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ದಿಲ್ಲಿಗೆ ಬಂದಿಳಿದಿದ್ದಾರೆ.

ನವದೆಹಲಿ :  ಭಾನುವಾರ ಬೆಳಗ್ಗೆ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಸಭೆ ನಡೆಯಲಿದೆ. ಇದರ ಮುನ್ನಾ ದಿವಸವಾದ ಶನಿವಾರವೇ ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ದಿಲ್ಲಿಗೆ ಬಂದಿಳಿದಿದ್ದಾರೆ.

ಮಹತ್ವದ ವಿಷಯವೆಂದರೆ ಕುಮಾರಸ್ವಾಮಿ ಅವರು ದಿಲ್ಲಿಗೆ ಬಂದಿಳಿದ ಕೂಡಲೇ, ರಾಜಧಾನಿಗೆ ಆಗಮಿಸಿರುವ ಇತರ ಮುಖ್ಯಮಂತ್ರಿಗಳಾದ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಕೇರಳದ ಪಿಣರಾಯಿ ವಿಜಯನ್‌ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಜತೆ ದಿಢೀರ್‌ ಸಭೆ ನಡೆಸಿದ್ದಾರೆ.

ಆಂಧ್ರ ಭವನದಲ್ಲಿ ಸಂಜೆ ನಡೆದ ಸಭೆಯಲ್ಲಿ, ನೀತಿ ಆಯೋಗದ ಸಭೆ ವೇಳೆ ಮೋದಿ ಸರ್ಕಾರವನ್ನು ಒಟ್ಟಾಗಿ ಹೇಗೆ ವಿರೋಧಿಸಬೇಕು? ಕಾರ್ಯಸೂಚಿ ಏನು ಎಂಬ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ. ಇದಲ್ಲದೆ, ಬಿಜೆಪಿಯನ್ನು ಎದುರಿಸಲು ತೃತೀಯ ರಂಗ ರಚನೆ ಬಗ್ಗೆ ಕೂಡ ಸಭೆಯಲ್ಲಿ ಮಾತುಕತೆ ನಡೆಯಿತು ಎಂದು ಹೇಳಲಾಗಿದೆ.

ಇದೇ ವೇಳೆ ಕುಮಾರಸ್ವಾಮಿ ಅವರು, ತಮ್ಮ ಪ್ರಮಾಣ ವಚನ ಸಮಾರಂಭಕ್ಕೆ ಬೆಂಗಳೂರಿಗೆ ಬಂದಿದ್ದ ಈ ಎಲ್ಲ ನಾಯಕರಿಗೆ ಕೃತಜ್ಞತೆ ಸಲ್ಲಿಸಿದರು ಎಂದು ತಿಳಿದುಬಂದಿದೆ. ಎಡ-ಬಲ ಸಂಗಮ:  ಇದೇ ವೇಳೆ ರಾಜಕೀಯದಲ್ಲಿ ಎಣ್ಣೆ-ಸೀಗೆಕಾಯಿ ನಂಟು ಹೊಂದಿರುವ ಎಡರಂಗದ ಪಿಣರಾಯಿ ವಿಜಯನ್‌ ಹಾಗೂ ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿ ಎದುರು ಬದುರು ಕುಳಿತು ಮಾತುಕತೆ ನಡೆಸಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

click me!