
ಬೆಂಗಳೂರು(ಮೇ. 10) ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಇದೆ. ಆದರೆ ಹೊಸ ಸಿಎಂ ಕೂಗು ಆಗಾಗ ಕೇಳಿ ಬರುತ್ತಲೇ ಇದೆ. ಕಾಂಗ್ರೆಸ್ ನ ಅಗ್ರ ನಾಯಕರ ಆದಿಯಾಗಿ ಅನೇಕರು ತಾವೇ ರೇಸ್ ನಲ್ಲಿ ಇದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗಾದರೆ ಯಾರೆಲ್ಲ ಆಕಾಂಕ್ಷಿ ಎಂದಿದ್ದಾರೆ?
ಸಿದ್ದರಾಮಯ್ಯ: ಸಿದ್ದರಾಮಯ್ಯ ತಾವೇ ಸ್ವತಃ ಎಲ್ಲೂ ಸಿಎಂ ಆಗುತ್ತೇನೆ ಎಂಬ ಹೇಳಿಕೆ ನೀಡಿಲ್ಲ. ಆದರೆ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್, ಚೆಲುವರಾಯಸ್ವಾಮಿ ಸೇರಿದಂತೆ ಕೆಲವರು ಸಿದ್ದರಾಮಯ್ಯ ಸಿಎಂ ಆಗಬೇಕು ಎನ್ನುತ್ತಿದ್ದಾರೆ.
ಪರಮೇಶ್ವರ: ರಾಜ್ಯದ ದೋಸ್ತಿ ಸರಕಾರದಲ್ಲಿ ಡಿಸಿಎಂ ಆಗಿರುವ ಪರಮೇಶ್ವರ ಅವರು ಸಿಎಂ ಪೋಸ್ಟ್ ಬಗ್ಗೆ ಮಾತನಾಡಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭ ಮಾತನಾಡುತ್ತ ಪರೋಕ್ಷವಾಗಿ ನಾನು ರೇಸ್ ನಲ್ಲಿ ಇದ್ದೇನೆ ಎಂದಿದ್ದಾರೆ.
ಸತೀಶ್ ಜಾರಕಿಹೊಳಿ: ಈ ಹೆಸರು ಹೊಸ ಸೇರ್ಪಡೆ. ಆದರೆ ನಾನು ಸಿಎಂ ಆಗುವ ಕಾಲವಿದೆ. ವೇಯ್ಟಿಂಗ್ ಲಿಸ್ಟ್ ನಲ್ಲಿ ಇದ್ದೇನೆ ಎಂದು ಹೇಳಿದ್ದು ಕುತೂಹಲಕ್ಕೆ ಕಾರಣವಾಗಿತ್ತು.
ಮಲ್ಲಿಕಾರ್ಜುನ ಖರ್ಗೆ: ಉತ್ತರ ಕರ್ನಾಟಕದ ನಾಯಕರೊಬ್ಬರು ಸಿಎಂ ಆಗಬೇಕು ಎಂಬ ಒತ್ತಾಯ ಕಾಂಗ್ರೆಸ್ ಆಂತರಿಕ ವಲಯದಲ್ಲೇ ಕೇಳಿಬರುತ್ತಿದೆ. ಅವರ ಮೊದಲ ಆಯ್ಕೆ ಮಲ್ಲಿಕಾರ್ಜುನ ಖರ್ಗೆ.
ಡಿಕೆ ಶಿವಕುಮಾರ್ : ಟ್ರಬಲ್ ಶೂಟರ್ ಎಂದು ಕರೆಸುಕೊಂಡಿರುವ ಡಿಕೆಶಿ ಸಹ ಸಿಎಂ ರೇಸ್ ಬಗ್ಗೆ ಮಾತನಾಡಿದ ಉದಾಹರಣೆ ಇದೆ. ಅದರಲ್ಲಿಯೂ ಯಾರೂ ಸನ್ಯಾಸಿಗಳಲ್ಲ ಎಂದು ಡಿಕೆಶಿ ಪದೇ ಪದೇ ಹೇಳುತ್ತಿರುವುದರ ಗೂಡಾರ್ಥ ಮಾತ್ರ ಗೊತ್ತಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.