ಬಿಎಸ್'ವೈ ವಿರುದ್ಧ ಎಫ್'ಐಆರ್ ದಾಖಲಾಗಿರುವುದರಲ್ಲಿ ಸರ್ಕಾರದ ಪಾತ್ರವಿಲ್ಲ: ಸಿಎಂ ಸ್ಪಷ್ಟನೆ

Published : Aug 20, 2017, 08:39 PM ISTUpdated : Apr 11, 2018, 12:47 PM IST
ಬಿಎಸ್'ವೈ ವಿರುದ್ಧ ಎಫ್'ಐಆರ್ ದಾಖಲಾಗಿರುವುದರಲ್ಲಿ ಸರ್ಕಾರದ ಪಾತ್ರವಿಲ್ಲ: ಸಿಎಂ ಸ್ಪಷ್ಟನೆ

ಸಾರಾಂಶ

ಡಿನೋಟಿಫಿಕೇಶನ್​ ಪ್ರಕರಣ ಸಂಬಂಧ ಬಿ.ಎಸ್​. ಯಡಿಯೂರಪ್ಪ ವಿರುದ್ಧ  ಎಸಿಬಿಯಲ್ಲಿ  ಎಫ್​ಐಆರ್​  ದಾಖಲಾಗಿರುವುದರಲ್ಲಿ ರಾಜ್ಯ ಸರ್ಕಾರದ ಪಾತ್ರ ಇಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಡಿಸಿದ್ದಾರೆ. ಈ ಮಧ್ಯೆ ಸರ್ಕಾರದ ವಿರುದ್ಧ ನಾಳೆ ರಾಜ್ಯಪಾಲರಿಗೆ ಬಿಜೆಪಿ ದೂರು ಒಯ್ಯಲಿದೆ. ಈ ಮಧ್ಯೆ ಪ್ರಕರಣ ಸಂಬಂಧ ಎರಡು ದಿನಗಳಿಂದ ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದಾರೆ.

ಬೆಂಗಳೂರು (ಆ.20): ಡಿನೋಟಿಫಿಕೇಶನ್​ ಪ್ರಕರಣ ಸಂಬಂಧ ಬಿ.ಎಸ್​. ಯಡಿಯೂರಪ್ಪ ವಿರುದ್ಧ  ಎಸಿಬಿಯಲ್ಲಿ  ಎಫ್​ಐಆರ್​  ದಾಖಲಾಗಿರುವುದರಲ್ಲಿ ರಾಜ್ಯ ಸರ್ಕಾರದ ಪಾತ್ರ ಇಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಡಿಸಿದ್ದಾರೆ. ಈ ಮಧ್ಯೆ ಸರ್ಕಾರದ ವಿರುದ್ಧ ನಾಳೆ ರಾಜ್ಯಪಾಲರಿಗೆ ಬಿಜೆಪಿ ದೂರು ಒಯ್ಯಲಿದೆ. ಈ ಮಧ್ಯೆ ಪ್ರಕರಣ ಸಂಬಂಧ ಎರಡು ದಿನಗಳಿಂದ ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದಾರೆ.

ಸರ್ಕಾರದಿಂದ ಎಸಿಬಿ ದುರ್ಬಳಕೆ ಆಗಿಲ್ಲವಂತೆ!

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಶನ್​ ಕುರಿತಾದ ಎಸಿಬಿ ಎಫ್​ಐಆರ್​ ಈಗಾಗಲೇ ರಾಜಕೀಯ ತಿರುವು ಪಡೆದುಕೊಂಡುಬಿಟ್ಟಿದೆ. ಕೆಎಎಸ್​ ಅಧಿಕಾರಿ ಬಸವರಾಜೇಂದ್ರ ನೀಡಿರುವ ದೂರು ಆಧರಿಸಿ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಬಿಜೆಪಿ ಸರ್ಕಾರದ ಜೊತೆ ನೇರ ಕುಸ್ತಿಗೆ ಇಳಿದಿದೆ. ಆದರೆ ಬಿಜೆಪಿ ಆರೋಪವನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯ ಸರ್ಕಾರದಿಂದ ಎಸಿಬಿ ದುರುಪಯೋಗವಾಗಿದೆ ಎಂಬ ಆರೋಪವನ್ನು ಖಡಾಖಂಡಿತವಾಗಿ ತಳ್ಳಿಹಾಕಿದ್ದಾರೆ. ಆದರೆ ಯಡಿಯೂರಪ್ಪ ಬೆನ್ನಿಗೆ ನಿಂತಿರುವ ಬಿಜೆಪಿ ಗಣಿ ಇಲಾಖೆ ಉಪ ಕಾರ್ಯದರ್ಶಿ ಬಸವರಾಜೇಂದ್ರ ನೀಡಿರುವ ದೂರನ್ನೇ ಆಧರಿಸಿ ಈಗ ರಾಜ್ಯಪಾಲರ ಬಳಿ ಹೊರಟಿದೆ. ನಾಳೆ ಬೆಳಗ್ಗೆ ವಿಧಾನಸಭೆ ವಿಪಕ್ಷ ನಾಯಕ ಜಗದೀಶ್​ ಶೆಟ್ಟರ್​ ನೇತೃತ್ವದ ನಿಯೋಗ  ರಾಜ್ಯಪಾಲರನ್ನು ಭೇಟಿ ಮಾಡಲಿದ್ದು, ರಾಜ್ಯ ಸರ್ಕಾರವನ್ನು ವಜಾ ಮಾಡುವಂತೆ ಆಗ್ರಹಿಸಲಿದೆ.

ಈ ಮಧ್ಯೆ ಪ್ರಕರಣ ಸಂಬಂಧ ಎರಡು ದಿನಗಳಿಂದ ಯಡಿಯೂರಪ್ಪ ಮೌನ ಕಾಯ್ದುಕೊಂಡಿದ್ದು,  ಅವರ ಬೆಂಬಲಿಗರಿಂದ ಮಾತ್ರ ಸರ್ಕಾರದ ವಿರುದ್ಧ ಪ್ರತಿಭಟನೆಗಳು, ಟೀಕೆಗಳು ಮುಂದುವರಿಯುತ್ತಿವೆ. ಬಸವರಾಜೇಂದ್ರ ನೀಡಿರುವ ದೂರು ರಾಜ್ಯ ಸರ್ಕಾರದ ವಿರುದ್ಧದ ಹೋರಾಟಕ್ಕೆ ಬಿಜೆಪಿಗೆ ಬಲ ತುಂಬಿದ್ದು, ಸಾಧ್ಯವಾದಷ್ಟೂ ಲಾಭ ಪಡೆಯುವ ಉಮೇದಿನಲ್ಲಿ ಕಮಲ ಪಕ್ಷ ಇದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್! ಖಾತೆಗೆ ಯಾವಾಗ ಬರುತ್ತೆ ಹಣ? ಇಲ್ಲಿದೆ ವಿವರ
ಪ್ರೀತಿ ವಿರೋಧಿಸಿದ ತಂದೆಯನ್ನು ಗೆಳೆಯನ ಜೊತೆ ಸೇರಿ ಮಸಣಕ್ಕೆ ಅಟ್ಟಿದ ಪಾಪಿ ಮಗಳು