ರೈಲು, ಅರಣ್ಯ, ಹಣಕಾಸು ಸಚಿವಾಲಯ ವಿರುದ್ಧ ಇವೆ ಅತ್ಯಧಿಕ ಕೇಸುಗಳು

By Internet DeskFirst Published Sep 11, 2016, 4:08 PM IST
Highlights

ನವದೆಹಲಿ (ಸೆ.11): ಕೇಂದ್ರದ ರೈಲ್ವೆ, ಸಂಪರ್ಕ, ಅರಣ್ಯ ಮತ್ತು ಪರಿಸರ, ರಕ್ಷಣೆ, ಹಣಕಾಸು ಸಚಿವಾಲಯಗಳು ಅತ್ಯಂತ ಹೆಚ್ಚು ಕೇಸುಗಳನ್ನು ಹೊಂದಿರುವ ಇಲಾಖೆಗಳಾಗಿವೆ. ಕಾನೂನು ಮಾಹಿತಿ ನಿರ್ವಹಣೆ ಮತ್ತು ವಿವರಣಾ ವ್ಯವಸ್ಥೆ (ಎಲ್‌ಐಎಂಬಿಎಸ್‌) ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಈ ಅಂಶಗಳು ಗೊತ್ತಾಗಿವೆ.

ರೈಲ್ವೆ ಇಲಾಖೆ ಮೇಲೆ 58,735, ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ 7,617, ಪರಿಸರ ಮತ್ತು ಅರಣ್ಯ ಸಚಿವಾಲಯ 2,893, ರಕ್ಷಣೆ ಮತ್ತು ಹಣಕಾಸು ಸಚಿವಾಲಯ ಕ್ರಮವಾಗಿ 1,375 ಮತ್ತು 792 ಕೇಸುಗಳು ಇವೆ. ಆದರೆ ವಿವಿಧ ಸಚಿವಾಲಯಗಳು ತಮ್ಮ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಮಾಹಿತಿಗಳು. ತಾಜಾ ಅಂಕಿ-ಅಂಶಗಳಿಗೆ ಹೋಲಿಕೆ ಮಾಡಿದರೆ ಕೊಂಚ ವ್ಯತ್ಯಾಸ ಇರುವ ಸಾಧ್ಯತೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್‌ಐಎಂಬಿಎಸ್‌ ಪಟ್ಟಿಮಾಡಿರುವ ಒಟ್ಟು 41 ಸಚಿವಾಲಯಗಳ ಪೈಕಿ 13 ಸಚಿವಾಲಯಗಳನ್ನು ಹೆಚ್ಚು ಸಕ್ರಿಯವಾಗಿಲ್ಲದ್ದು ಎಂದು ಗುರುತಿಸಿದೆ. ಅವುಗಳಲ್ಲಿ ಆಯುಷ್‌, ಅಣುಶಕ್ತಿ, ಅಲ್ಪಸಂಖ್ಯಾತ ವ್ಯವಹಾರಗಳು, ಹಡಗು ಮತ್ತು ಪ್ರವಾಸೋದ್ಯಮ ಸಚಿವಾಲಯಗಳು ಸೇರಿವೆ.

click me!