
ಲೂಧಿಯಾನಾ(ಫೆ.12): ದೆಹಲಿ ಮೂಲದ ಪ್ರವಾಸೋದ್ಯಮ ಸಂಸ್ಥೆಯೊಂದು ಬಳಕೆಯಲ್ಲಿಲ್ಲದ ಏರ್'ಬಸ್ 320 ಅನ್ನು ಐಶಾರಾಮಿ ರೆಸ್ಟೋರೆಂಟ್ ಆಗಿ ಪರಿವರ್ತಿಸಿ ಗಮನ ಸೆಳೆದಿದೆ.
ಲೂಧಿಯಾನದಲ್ಲಿ ತಮ್ಮ ಗ್ರಾಹಕರಿಗೆ ವಿಶಿಷ್ಟ ಅನುಭವ ನೀಡಲು ಏರ್ ಇಂಡಿಯಾದ ಹಳೆಯ ವಿಮಾನವನ್ನು ಬಳಸಿಕೊಂಡು ‘ಹವಾಯಿ ಅಡ್ಡ (ವಿಮಾನ ನಿಲ್ದಾಣ)’ ಎಂಬ ಹೆಸರಿನ ಈ ರೆಸ್ಟೋರೆಂಟ್ ಅನ್ನು ನಿರ್ಮಿಸಲಾಗಿದೆ.
ಒಂದು ವರ್ಷದಿಂದ ನಿರ್ಮಾಣ ಕಾರ್ಯ ನಡೆದಿದ್ದ ಈ ರೆಸ್ಟೋರೆಂಟ್, ಕಳೆದ ತಿಂಗಳಷ್ಟೇ ತೆರೆಯಲ್ಪಟ್ಟಿದೆ. 72 ಸೀಟುಗಳ ಹವಾಯಿ ಅಡ್ಡಾದಲ್ಲಿ ಸಸ್ಯಾಹಾರಿ ಆಹಾರ ಪೂರೈಕೆಯಾಗುತ್ತದೆ.
ಒಂದು ಕೆಫೆ, ಬೇಕರಿ ಸೇರಿದಂತೆ ಸುಮಾರು 40 ಜನ ಭಾಗವಹಿಸಬಹುದಾದ ಪಾರ್ಟಿಹಾಲ್ ಕೂಡ ಹವಾಯಿ ಅಡ್ಡದಲ್ಲಿದೆ. ಪೀಠೋಪಕರಣಗಳನ್ನು ಹೊರತುಪಡಿಸಿ, ವಿಮಾನದ ಉಳಿದೆಲ್ಲ ಮೂಲ ಲಕ್ಷಣಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.