ಬೇಯಿಸದೇ ತಿನ್ನಬಹುದಾದ ನಮ್ಮ ದೇಶದ ಅಕ್ಕಿಗೆ ಸಿಕ್ಕಿತು ಮಾನ್ಯತೆ

By Web DeskFirst Published Aug 10, 2018, 9:48 AM IST
Highlights

ಅಸ್ಸಾಂನ ಮುಗಾ ಸಿಲ್ಕ್, ಜೊಹಾ ಅಕ್ಕಿ, ತೇಜ್ಪುರ ಲಿಚಿ ಬಳಿಕ ಇದೀಗ ಬೊಕಾ ಸಾಲ್ ಅಕ್ಕಿಗೆ ಭೌಗೋಳಿಕ ಹೆಗ್ಗುರುತಿನ ಸ್ಥಾನಮಾನ ಪ್ರಾಪ್ತವಾಗಿದೆ. 

ನವದೆಹಲಿ(ಆ.10): ಬೇಯಿಸದೆಯೂ ತಿನ್ನಬಹುದಾದ ಅಸ್ಸಾಂನ ಬೊಕಾ ಸಾಲ್ ಅಕ್ಕಿ ಅಥವಾ ಮಡ್ ರೈಸ್, ಭೌಗೋಳಿಕ ಹೆಗ್ಗುರುತು ಸ್ಥಾನಮಾನ (ಜಿಐ) ಪಡೆದುಕೊಂಡಿದೆ. 

ಅಸ್ಸಾಂನ ತಗ್ಗು ಪ್ರದೇಶಗಳಾದ ನಲ್ಬಾರಿ, ಬಾರ್‌ಪೇಟಾ, ಗೋಯಲ್‌ಪಾರಾ, ಕಮರೂಪ್, ಡರ‌್ರಾಂಗ್, ಡಿಬ್ರಿ ಮತ್ತಿರತರ ಪ್ರದೇಶಗಳಲ್ಲಿ ಮಾತ್ರ ಬೆಳೆಯುವ
ಈ ವಿಶೇಷ ಮೃದು ಅಕ್ಕಿಯನ್ನು ನೀರಿನಲ್ಲಿ ನೆನೆಸಿಟ್ಟು ಸ್ಪಲ್ಪಹೊತ್ತಿನ ಬಳಿಕ ಊಟ ಮಾಡಬಹುದಾಗಿದೆ.

ಅಸ್ಸಾಂನ ಮುಗಾ ಸಿಲ್ಕ್, ಜೊಹಾ ಅಕ್ಕಿ, ತೇಜ್ಪುರ ಲಿಚಿ ಬಳಿಕ ಇದೀಗ ಬೊಕಾ ಸಾಲ್ ಅಕ್ಕಿಗೆ ಭೌಗೋಳಿಕ ಹೆಗ್ಗುರುತಿನ ಸ್ಥಾನಮಾನ ಪ್ರಾಪ್ತವಾಗಿದೆ. ನಲ್ಬಾರಿ ಮೂಲದ ಎನ್‌ಜಿಒ ಲೋಟಸ್ ಪ್ರೊಗ್ರೆಸ್ಸಿವ್ ಸೆಂಟರ್ ಹಾಗೂ ಗುವಾಹಟಿಯ ಪರಿಸರ ಅಧ್ಯಯನ ಕೇಂದ್ರ ಇತ್ತೀಚೆಗೆ ಬೊಕಾ ಸಾಲ್ ಅಕ್ಕಿಗೆ ಭೌಗೋಳಿಕ ಹೆಗ್ಗುರುತಿನ ಸ್ಥಾನಮಾನ ನೀಡುವ ಸಂಬಂಧ ಚೆನ್ನೈನಲ್ಲಿರುವ ಭಾರತೀಯ ಬೌದ್ಧಿಕ ಆಸ್ತಿ (ಐಪಿಐ) ಕಚೇರಿಗೆ ದಾಖಲೆಗಳನ್ನು ಸಲ್ಲಿಸಿದ್ದವು. ಜು.30ರಂದು ಭಾರತೀಯ ಬೌದ್ಧಿಕ ಆಸ್ತಿ ವೆಬ್ ಸೈಟ್‌ನಲ್ಲಿ ಬೋಕಾ ಸಾಲ್ ಅಕ್ಕಿಗೆ ಜಿಐ ಸ್ಥಾನಮಾನ ನೀಡಿ ಪ್ರಕಟಣೆ ಹೊರಡಿಸಲಾಗಿದೆ.

click me!