
ಚೆನ್ನೈ(ಫೆ.05): ಶಶಿಕಲಾ ಸಾಮಾನ್ಯವಾದ ಹೆಣ್ಣಲ್ಲ, ತುಂಬಾನೇ ಟ್ಯಾಲೆಂಟೆಡ್. ಗೇಮ್ ಪ್ಲಾನ್ ಮಾಡುವುದರಲ್ಲಿ ಎಕ್ಸ್'ಪರ್ಟ್. ಜಯಲಲಿತಾ ಸಾವನ್ನು ಮುಚ್ಚಿಟ್ಟು ರಾಜಕೀಯ ಚದುರಂಗದಾಟ ಆಡಿದ ಶಶಿಕಲಾ ಇದೀಗ ಪನ್ನೀರ್ ಸೇಲ್ವರಂನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸುವುದರ ಹಿಂದೆ ದುರುದ್ದೇಶವೂ ಇದೆ. ಅದೇನು ಅಂತೀರಾ ಈ ಸ್ಟೋರಿ ಓದಿ
ಶಶಿಕಲಾ ತಮಿಳುನಾಡಿನ ಸಿಎಂ ಆಗುತ್ತಾರೆ ಎಂದು ಅಂತ ಯಾರೂ ಅಂದುಕೊಂಡಿರಲಿಲ್ಲ. ಯಾಕಂದ್ರೆ ಜಯಲಲಿತಾ ವಿಧಿವಶರಾಗಿದ್ದು ಯಾವಾಗ ಎನ್ನುವುದೇ ಇವತ್ತಿಗೂ ಗೊಂದಲ. ಅಮ್ಮನ ಶವ ಇಟ್ಟುಕೊಂಡೇ ಶಶಿಕಲಾ ರಾಜಕೀಯ ಚದುರಾಗ ಆಟವಾಡಿದ್ದವರು ಹೀಗಿರುವಾಗ ಪನ್ನೀರ್ ಸೆಲ್ವಂರನ್ನು ಬಿಡುತ್ತಾರಾ? ಅಷ್ಟಕ್ಕೂ ಅಮ್ಮನ ಬಂಟನಾಗಿದ್ದ ಪನ್ನೀರ್ ಸೆಲ್ವಂರನ್ನು ಸಿಎಂ ಸ್ಥಾನದಿಂದ ಕೆಳಗಿಸಲು ಕಾರಣವೂ ಇದೆ.
ಪನ್ನೀರ್ ಸೆಲ್ವಂರನ್ನು ಕೆಳಗಿಳಿಸುವ ಹಿಂದೆ ಶಶಿಕಲಾ ಗೇಮ್ ಪ್ಲಾನ್ ಇದೆ. ಜಯಲಲಿತಾ ನಿಧನ ನಂತರ ಪನ್ನೀರ್ ಸೆಲ್ವಂ ಮೋದಿಗೆ ಹತ್ತಿರವಾಗುತ್ತಿದ್ದಾರೆ. ಮೋದಿಗೂ ಅವರ ಮೇಲೆ ಅಷ್ಟೇ ಪ್ರೀತಿ. ದಿಲ್ಲಿಗೆ ಹೋದಾಗಲೆಲ್ಲಾ ಪನ್ನೀರ್ ಸೆಲ್ವಂಗೆ ಭೇಟಿಯಾಗಲು ಅವಕಾಶ ಕೊಡುತ್ತಾರೆ. ಪನ್ನೀರ್ ಸೆಲ್ವಂ ಮನವಿಗೆ ಸ್ಪಂದಿಸಿ ತಮಿಳುನಾಡಿಗೆ ಬರ ಪರಿಹಾರ ಬಿಡುಗಡೆ ಮಾಡಿದ್ದರು. ಜೊತೆಗೆ ಇತ್ತೀಚೆಗೆ ನಡೆದ ಜಲ್ಲಿಕಟ್ಟು ಕ್ರೀಡೆಯ ವಿರುದ್ಧ ಹೇರಲಾಗಿರುವ ನಿಷೇಧ ತೆರವುಗೊಳಿಸಲು ಸ್ಪಂದಿಸಿದ್ದರು. ಇದು ಶಶಿಕಲಾ ಕೆಂಗಣ್ಣಿಗೆ ಗುರಿಯಾಯಿತು.
ಇದೇ ರೀತಿ ಪ್ರಧಾನಿಗೆ ಪನ್ನೀರ್ ಸೆಲ್ವಂ ಹತ್ರವಾದ್ರೆ, ತನ್ನ ಮಾತು ಕೇಳೋದಿಲ್ಲ ಎಂಬ ಭಯ ಶುರುವಾಗಿದ್ದು, ತಾನು ಪಕ್ಷದಲ್ಲಿ ಮೂಲೆಗುಂಪು ಆಗುತ್ತೇನೆ ಎಂಬ ಆತಂಕ ಕಾಡತೊಡಗಿತ್ತು. ಇದಕ್ಕಾಗಿಯೇ ತನ್ನನ್ನು ವಿರೋಧಿಸುತ್ತಿದ್ದವರ ಸೀಕ್ರೆಟನ್ನೇ ಮುಂದಿಟ್ಟುಕೊಂಡು ಹತ್ತಿರ ಮಾಡಿಕೊಂಡರು. ಪನ್ನೀರ್ ಸೆಲ್ವಂರನ್ನು ಕೆಳಗಿಳಿಸುವಂತೆ ಪಕ್ಷದ ಶಾಸಕರ ಕಿವಿ ಊದಿದ್ದರು.
ರಾಜಕೀಯವಾಗಿ ಮುಗಿಸಲು ಹಾಕಿದರಾ ಸ್ಕೆಚ್?
ರಾಜಕೀಯವಾಗಿ ಪನ್ನೀರ್ ಸೆಲ್ವಂರನ್ನು ಮುಗಿಸಲು ಶಶಿಕಲಾಗೆ ಹಳೇ ದ್ವೇಷ. ಜಯಲಲಿತಾ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾಗ, ಅವರನ್ನು ನೋಡಲು ಶಶಿಕಲಾ ಯಾರನ್ನೂ ಬಿಟ್ಟಿರಲಿಲ್ಲ. ಈ ಸಂಬಂಧ ಶಶಿಕಲಾ ಮತ್ತು ಪನೀರ್ ಸೆಲ್ವಂ ನಡುವೆ ಜಗಳವಾಗಿತ್ತು ಅಂತ ಹೇಳಲಾಗುತ್ತಿದೆ. ಆ ಜಗಳದ ಕಹಿ ನೆನಪನ್ನು ಶಶಿಕಲಾ ಇನ್ನೂ ಮರೆತಿಲ್ಲ. ಈ ಎಲ್ಲಾ ಕಾರಣಗಳಿಂದ ಪನ್ನೀರ್ ಸೆಲ್ವಂರನ್ನು ರಾಜಕೀಯವಾಗಿ ಮುಗಿಸಲು ಶಶಿಕಲಾ ಮುಂದಾಗಿದ್ದಾರೆ ಅಂತಾ ಹೇಳಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.