ಹಾಲಿ ಕನ್ನಡ ಧ್ವಜವನ್ನೇಕೆ ಅಧಿಕೃತ ನಾಡಧ್ವಜವಾಗಿ ಘೋಷಿಸಲಿಲ್ಲ? ಇಲ್ಲಿದೆ ಪ್ರಮುಖ ಕಾರಣ

By Suvarna Web DeskFirst Published Mar 10, 2018, 4:05 PM IST
Highlights
  • ಕೆಂಪು, ಹಳದಿಯೊಂದಿಗೆ ಬಿಳಿ ಬಣ್ಣವೂ ಇರುವ ನಾಡಧ್ವಜವನ್ನು ಸರಕಾರ ಕಳೆದ ಗುರುವಾರ ಅಂಗೀಕರಿಸಿದೆ
  • ಹಾಲಿ ಚಾಲ್ತಿಯಲ್ಲಿರುವ ಧ್ವಜವನ್ನೇಕೆ ಸರ್ಕಾರ ಅಂಗೀಕರಿಸಿಲ್ಲವೆಂಬುವುದಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ

ಬೆಂಗಳೂರು: ಕೆಂಪು, ಹಳದಿಯೊಂದಿಗೆ ಬಿಳಿ ಬಣ್ಣವೂ ಇರುವ ನಾಡಧ್ವಜವನ್ನು ಸರಕಾರ ಕಳೆದ ಗುರುವಾರ ಅಂಗೀಕರಿಸಿದೆ.  ನೂತನ ಧ್ವಜ ಸ್ವರೂಪ, ವಿನ್ಯಾಸ ಹೇಗಿರಬೇಕು ಎಂಬಿತ್ಯಾದಿಗಳ ವಿಷಯಗಳ ಬಗ್ಗೆ ಸಾಕಾಷ್ಟು ಚರ್ಚೆ ನಡೆದಿತ್ತು.

ಕನ್ನಡಪರ ಸಂಘಟನೆಗಳು ಈಗಿರುವ (ಹಳದಿ ಮತ್ತು ಕೆಂಪು) ಧ್ವಜವನ್ನೇ ಅಧಿಕೃತ ನಾಡಧ್ವಜವಾಗಿ  ಘೋಷಿಸಬೇಕೆಂದು ಪಟ್ಟು ಹಿಡಿದ್ದವು. ಆದರೆ ಸಾಕಷ್ಟು ಚರ್ಚೆಗಳ ಬಳಿ ಸರ್ಕಾರವು ಕೆಂಪು, ಬಿಳಿ, ಹಳದಿ ಬಣ್ಣವಿರುವ, ಹಾಗೂ ಸರ್ಕಾರದ ಲಾಂಛನವಿರುವ ವಿನ್ಯಾಸವನ್ನೇ ಅಂತಿಮಗೊಳಿಸಿದೆ.

ಹಾಲಿ ಚಾಲ್ತಿಯಲ್ಲಿರುವ ಧ್ವಜವನ್ನೇಕೆ ಸರ್ಕಾರ ಅಂಗೀಕರಿಸಿಲ್ಲವೆಂಬುವುದಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ.

ನಾಡಧ್ವಜವನ್ನು ಅಂತಿಮಗೊಳಿಸಲು ರಚಿಸಲಾಗಿದ್ದ ಸಮಿತಿಯು ನೂತನ ವಿನ್ಯಾಸವನ್ನು ಅಂತಿಮಗೊಳಿಸಲು ಪ್ರಮುಖ ಕಾರಣವಿದೆ.

ಮೊದಲನೆದಾಗಿ, ಹಾಲಿ ಧ್ವಜದ ಮೇಲೆ ರಾಜಕೀಯ ಪಕ್ಷವೊಂದು ಹಕ್ಕುಸ್ವಾಮ್ಯ ಹೊಂದಿದೆ. ನಾಡಧ್ವಜವು ರಾಜಕೀಯ ಪಕ್ಷಗಳ ಧ್ವಜಗಳಿಗಿಂತ ಭಿನ್ನವಾಗಿರಬೇಕು. ಬಿಳಿ ಬಣ್ಣ ಬಳಸುವುದರಿಂದ ಲಾಂಛನ ಹಾಕಿಕೊಳ್ಳಲು ಸಹಕಾರಿಯಾಗಿದೆ, ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Kannada Organizations did ask why we can’t use the current Kannada Flag. The Committee recommended a new design because:
1. A political party holds the rights to current flag
2. A white band helps us use an emblem
3. A state flag should be distinct from the one used by parties. pic.twitter.com/dPjp3ucahW

— Siddaramaiah (@siddaramaiah)
click me!