
ಮುಂಬೈ(ಜೂ.19): ರಸ್ತೆಯಲ್ಲಿ ಪ್ಲಾಸ್ಟಿಕ್ ಕಸ ಚೆಲ್ಲಿದ ಯುವಕನಿಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮ ಬೈದಿದ್ದು ಎಲ್ಲರಿಗೂ ಗೊತ್ತೇ ಇದೆ. ಪತಿ ವಿರಾಟ್ ಕೊಹ್ಲಿ ಈ ವಿಡಿಯೋವನ್ನು ಶೆರ್ ಮಾಡಿದ್ದೇ ತಡ ವಾದ ವಿವಾದಗಳು ನಿರಂತರವಾಗಿ ಜರುಗುತ್ತಲೇ ಇವೆ. ಇನ್ನು ಅನುಷ್ಕಾ ಅವರಿಂದ ಸ್ವಚ್ಛತೆಯ ಪಾಠ ಹೇಳಿಸಿಕೊಂಡಿದ್ದ ಯುವಕ ಬಾಲನಟ ಎಂಬುದು ಇದೀಗ ಗೊತ್ತಾಗಿರುವ ಸಂಗತಿ.
ಹೌದು, ಕಾರಿನಿಂದ ಪ್ಲಾಸ್ಟಿಕ್ ಕಸ ಹೊರ ಚೆಲ್ಲಿ ಅನುಷ್ಕಾ ಶರ್ಮ ಕೆಂಗೆಣ್ಣಿಗೆ ಗುರಿಯಾಗಿದ್ದ ಯುವಕ ಅರ್ಹಾನ್ ಸಿಂಗ್, ಈ ಹಿಂದೆ ಬಾಲನಟರಾಗಿದ್ದರು. ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್ ಜೊತೆ ಅರ್ಹಾನ್ ಬಾಲನಟರಾಗಿ ನಟಿಸಿದ್ದಾರೆ. 1996 ರಲ್ಲಿ ತೆರೆ ಕಂಡಿದ್ದ ‘ಇಂಗ್ಲಿಷ್ ಬಾಬು ದೇಸಿ ಮೇಮ್’ ಎಂಬ ಚಿತ್ರದಲ್ಲಿ ಅರ್ಹಾನ್ ಬಾಲ ನಟರಾಗಿ ನಟಿಸಿದ್ದಾರೆ.
ಇಷ್ಟೇ ಅಲ್ಲದೇ 90 ರ ದಶಕದ ಪ್ರಸಿದ್ದ ಟಿವಿ ಶೋ ‘ದೇಖ್ ಭಾಯಿ ದೇಖ್’ ನಲ್ಲೂ ಅರ್ಹಾನ್ ನಟಿಸಿದ್ದಾರಂತೆ. ತೀರ ಇತ್ತಿಚೀಗೆ ನಟ ಶಾಹೀದ್ ಕಪೂರ್ ಅವರ ‘ಪಾಠಶಾಲಾ’ ಚಿತ್ರದಲ್ಲೂ ಅರ್ಹಾನ್ ಸಹ ಕಲಾವಿದನಾಗಿ ಅಭಿನಯಿಸಿದ್ದಾರೆ ಎಂಬುದು ವಿಶೇಷ.
ಈ ಕುರಿತು ಖುದ್ದು ಮಾಹಿತಿ ನೀಡಿರುವ ಅರ್ಹಾನ್, ತಾವು ಬಾಲ ನಟರಾಗಿ ನಟಿಸಿದ ಚಿತ್ರಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.