ಜುಲೈ 27ಕ್ಕೆ ಘಟಿಸಲಿದೆ ಬಾಹ್ಯಾಕಾಶ ವಿಸ್ಮಯ: ಮಿಸ್ ಮಾಡ್ಕೊಬೇಡಿ..!

 |  First Published Jun 19, 2018, 4:39 PM IST

ಜುಲೈ 27 ರಂದು ಘಟಿಸಲಿದೆ ಖಗೋಳ ವಿಸ್ಮಯ

ಭೂಮಿಗೆ ಅತ್ಯಂತ ಸಮೀಪ ಬರಲಿದೆ ಮಂಗಳ ಗ್ರಹ

ವಿಶಿಷ್ಟ ಬಾಹ್ಯಾಕಾಶ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ಜಗತ್ತು.

ಏನಿದು ಪೆರಿಥಿಲಿಕ್ ಅಪೋಸಿಷನ್ ಸ್ಥಿತಿ?

ಮಂಗಳ-ಭೂಮಿಯ ಸಾಮಿಪ್ಯದ ದರ್ಶನ ಭಾಗ್ಯ 
 


ವಾಷಿಂಗ್ಟನ್(ಜೂ.19): ಬಾಹ್ಯಾಕಾಶದ ವಿಸ್ಮಯಗಳಲ್ಲಿ ಒಂದಾದ ಮಂಗಳ-ಭೂಮಿಯ ಸಾಮಿಪ್ಯ ಇದೇ ಜುಲೈನಲ್ಲಿ ಜರುಗಲಿದೆ. ಹೌದು, ಜುಲೈ 27 ರಂದು ಈ ವಿಶಿಷ್ಟ ಬಾಹ್ಯಾಕಾಶ ವಿಸ್ಮಯಕ್ಕೆ ಜಗತ್ತು ಸಾಕ್ಷಿಯಾಗಲಿದೆ.

ಈ ಕುರಿತು ಮಾಹಿತಿ ನೀಡಿರುವ ನಾಸಾ, 2003 ರ ಬಳಿಕ ಇದೇ ಮೊದಲ ಬಾರಿಗೆ ಮಂಗಳ ಗ್ರಹ ಭೂಮಿಗೆ ಇಷ್ಟು ಸಮೀಪ ಆಗಮಿಸುತ್ತಿದೆ ಎಂದು ಹೇಳಿದೆ. ಮಂಗಳ ಗ್ರಹವು ಸೂರ್ಯನಿಗೆ ಎದುರಾಗಿ ಬರುವಾಗ ಭೂಮಿಯಿಂದ ಕೆಂಪು ಗ್ರಹವನ್ನು ಸಮೀಪದಿಂದ ನೋಡುವ ಅವಕಾಶ ಲಭಿಸುತ್ತದೆ.

Latest Videos

undefined

ಈ ಸಮಯದಲ್ಲಿ ಮಂಗಳನ ಛಾಯಾಚಿತ್ರ ತೆಗೆದುಕೊಳ್ಳಲು ಉತ್ತಮ ಅವಕಾಶ ಒದಗಲಿದ್ದು, ಸೂರ್ಯನ ಬೆಳಕಿನ ಪ್ರತಿಫಲನ ಮಂಗಳನ ಮೇಲೆ ಆಗುವ ಕಾರಣ ಭೂಮಿಯಿಂದ ಗ್ರಹದ ಸ್ಪಷ್ಟ ರೂಪ ಗೋಚರಿಸಲಿದೆ.

ಪ್ರತಿ  15 ಅಥವಾ 17 ವರ್ಷಗಳಿಗೊಮ್ಮೆ ಮಂಗಳ ಗ್ರಹ ಸೂರ್ಯನ ನೇರಕ್ಕೆ ಬರುತ್ತದೆ. ಆಗ ಕೆಂಪು ಗ್ರಹದ ಕಕ್ಷೆಯ ಬಿಂದುವು ಭೂಮಿಯ ಸಮೀಪದಲ್ಲಿರಲಿದೆ. ಈ ಸಮಯ ಕೆಂಪು ಗ್ರಹವು ಸೂರ್ಯನಿಗೆ ಅತ್ಯಂತ ಸಮೀಪವಾಗಿರಲಿದೆ. ಇದನ್ನು ’ಪೆರಿಥಿಲಿಕ್ ಆಪೊಸಿಷನ್’ ಎಂದು ಕರೆಯಲಾಗುತ್ತದೆ.

ಜುಲೈ 27 ರಂದು ಮಂಗಳ ಗ್ರಹ  ’ಪೆರಿಥಿಲಿಕ್ ಆಪೊಸಿಷನ್ ಸ್ಥಿತಿಯಲ್ಲಿರಲಿದೆ ಎಂದು  Express.co.uk ವರದಿ ಮಾಡಿದೆ. ಸುಮಾರು 60,000 ವರ್ಷಗಳ ಕಾಲಾವಧಿಯಲ್ಲಿ 2003ರಲ್ಲಿ ಮಂಗಳ ಭೂಮಿಗೆ ಅತೀ ಸಮೀಪ ಬಂದಿತ್ತು ಎಂದು ನಾಸಾ ತಿಳಿಸಿದೆ.

click me!