ಕೈ ಕೊಟ್ಟ ಸ್ನೇಹಿತರ ನಂಬಿ ಲೋಕಸಭೆಗೆ ಸ್ಪರ್ಧಿಸಿ ಸಾಲಗಾರನಾದೆ: ಕೃಷ್ಣ

By Web DeskFirst Published Jul 24, 2019, 8:25 AM IST
Highlights

ಕೈ ಕೊಟ್ಟ ಸ್ನೇಹಿತರ ನಂಬಿ ಲೋಕಸಭೆಗೆ ಸ್ಪರ್ಧಿಸಿ ಸಾಲಗಾರನಾದೆ| ಸ್ನೇಹಿತರನ್ನು ನಂಬಿದವನು ನಾನು. ಇಂತವರು ನನ್ನ ನಂಬಿಕೆಗೆ ಆಘಾತ, ದ್ರೋಹ ಮಾಡಿದ್ದು ನಂಬಲು ತಮಗೆ ಆಗುತ್ತಿಲ್ಲ : ಕೃಷ್ಣ 

ವಿಧಾನಸಭೆ[ಜು.24]: ಈಗ ಮುಂಬೈನಲ್ಲಿ ಇರುವ ನಮ್ಮ ಶಾಸಕ ಸ್ನೇಹಿತರಾದ ಗೋಪಾಲಯ್ಯ, ಎಸ್‌.ಟಿ. ಸೋಮಶೇಖರ್‌, ಬೈರತಿ ಬಸವರಾಜ್‌ ಅವರು ಮಾಡಿದ ಒತ್ತಡಕ್ಕೆ ಮಣಿದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಈಗ ಸಾಲಗಾರನಾಗಿದ್ದೇನೆ. ಸ್ನೇಹಿತರನ್ನು ನಂಬಿದವನು ನಾನು. ಇಂತವರು ನನ್ನ ನಂಬಿಕೆಗೆ ಆಘಾತ, ದ್ರೋಹ ಮಾಡಿದ್ದು ನಂಬಲು ತಮಗೆ ಆಗುತ್ತಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಮುಖ್ಯಮಂತ್ರಿಗಳ ವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣೆ ವೇಳೆ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಮಗೆ ಆಸಕ್ತಿ ಇರಲಿಲ್ಲ, ತಮ್ಮ ಕುಟುಂಬದ ಸದಸ್ಯರು ಸಹ ವಿರೋಧ ವ್ಯಕ್ತಪಡಿಸಿದ್ದರು. ಹಿರಿಯ ಮುಖಂಡರಾದ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌, ಡಾ. ಪರಮೇಶ್ವರ್‌ ಅವರು ಸಹ ಒತ್ತಾಯ ಮಾಡಿದರೂ ನಾನು ಒಪ್ಪಲಿಲ್ಲ. ಆದರೆ ಗೋಪಾಲಯ್ಯ, ಸೋಮಶೇಖರ್‌, ಬೈರತಿ ಬಸವರಾಜ್‌ ಅವರು ನೀವೇ ನಿಲ್ಲಬೇಕು ಎಂದು ಬಹಳ ಒತ್ತಡ ಮಾಡಿದ್ದಕ್ಕೆ ನಿಲ್ಲಬೇಕಾಯಿತು. ಅವರು ನನ್ನ ಸೋದರರು ಎಂದು ನಂಬಿದೆ. ಆದರೆ ಅವರ ಕ್ಷೇತ್ರದಲ್ಲಿ 40-45 ಸಾವಿರ ಮತಗಳು ಕಡಿಮೆ ಬಂದವು ಎಂದು ವಿವರಿಸಿದರು.

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಕಳೆದ ಮೂರು ವಾರಗಳಿಂದ ಏನೇನಾಯ್ತು?

ಸುಡುಗಾಡಿನಲ್ಲಿ ಅಲೆದಾಡುವ ಸ್ಥಿತಿ:

ನಾವ್ಯಾರೂ ನಮ್ಮ ಅಧಿಕಾರ ಹೋಗುತ್ತದೆ ಎಂದಾಗಲಿ ಅಥವಾ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಲೀ ಹೋರಾಟ ಮಾಡುತ್ತಿಲ್ಲ. ನಮ್ಮ ಕುಟುಂಬದ ಸದಸ್ಯರು ಮುನಿಸಿಕೊಂಡು ಹೋಗಿದ್ದಾರೆ, ಅವರನ್ನು ಕರೆತರುವ ಪ್ರಯತ್ನ ಮಾಡಿದ್ದೇವೆ. ಮುಂಬೈನಲ್ಲಿ ಇರುವ ನಮ್ಮ ಸ್ನೇಹಿತರನ್ನು ಬಿಜೆಪಿ ಸುಡುಗಾಡಿನಲ್ಲಿ ಅಲೆದಾಡುವ ಪರಿಸ್ಥಿತಿಗೆ ತಂದಿದೆ ಎಂದು ಟೀಕಿಸಿದರು.

click me!