ಪರೀಕ್ಷಾ ಕೊಠಡಿಗೆ ಹೋಗುವ ಮುನ್ನ ಮೊಬೈಲ್ ಕೊಟ್ಟ, ಆಮೇಲೇನಾಯ್ತು ಗೊತ್ತಾ ?

By Web DeskFirst Published Sep 4, 2018, 4:25 PM IST
Highlights

ಪರೀಕ್ಷೆ ಮುಗಿಸಿ ವಾಪಸ್ ಬಂದ್ ಮೊಬೈಲ್ ಫೋನ್ ಆನ್ ಮಾಡಿದಾಗ ಪೇಟಿಎಂ ಮೂಲಕ 21,500 ರೂ. ವರ್ಗಾವಣೆಯಾಗಿರುವ ಸಂದೇಶ ಬಂದಿದೆ.

ನೋಯ್ಡಾ[ಸೆ.04]: ಇಪ್ಪತ್ತು ವರ್ಷದ ವಿದ್ಯಾರ್ಥಿಯೊಬ್ಬ ಪರೀಕ್ಷಾ ಕೊಠಡಿಗೆ ಹೋಗುವ ಮುನ್ನಾ ಸಿಗರೇಟ್ ಮಾರಾಟ ಮಾಡುವ ವ್ಯಾಪಾರಿಯೊಬ್ಬನಿಗೆ ಮೊಬೈಲ್ ಕೊಟ್ಟು 21,500 ರೂ. ಕಳೆದುಕೊಂಡಿದ್ದಾನೆ.

ರಸಲ್'ಪುರ್ ಗ್ರಾಮದ ಮೋಹಿತ್ ಚೌಹಾನ್ ಎಂಬಾತ  ಕಂಪ್ಯೂಟರ್ ಪರೀಕ್ಷೆ ಬರೆಯಲು ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿ ಸಿಗರೇಟ್ ಮಾರಾಟ ಮಾಡುವ ಅಂಗಡಿಗೆ ಕೊಟ್ಟಿದ್ದಾನೆ. ಪರೀಕ್ಷೆ ಮುಗಿಸಿ ವಾಪಸ್ ಬಂದ್ ಮೊಬೈಲ್ ಫೋನ್ ಆನ್ ಮಾಡಿದಾಗ ಪೇಟಿಎಂ ಮೂಲಕ 21,500 ರೂ. ವರ್ಗಾವಣೆಯಾಗಿರುವ ಸಂದೇಶ ಬಂದಿದೆ.

ಅನಂತರ ಅಂಗಡಿ ಮಾಲೀಕನನ್ನು ಪ್ರಶ್ನಿಸಿದಾಗ ಆತ ತನಗೇನು ಗೊತ್ತಿಲ್ಲ ಎಂದು ನುಣಚಿಕೊಂಡಿದ್ದಾನೆ. ವಿದ್ಯಾರ್ಥಿ ಪೇಟಿಎಂ ಗ್ರಾಹಕ ಸೇವೆ ಹಾಗೂ ಸೈಬರ್ ಪೊಲೀಸರಿಗೆ ದೂರನ್ನು ನೀಡಿದ್ದಾನೆ. ಹಣ ವಾಪಸ್ ನೀಡುವ ಬಗ್ಗೆ ಪೀಟಿಎಂ ಕೂಡ ಭರವಸೆ ನೀಡಿದೆ. ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

 

click me!