ಜಿಎಸ್'ಟಿ ಇನ್ನೂ ಅರ್ಥವಾಗಿಲ್ಲವೇ? ಇಲ್ಲಿದೆ ಮೂಲ ಲೆಕ್ಕಾಚಾರ

Published : Jun 30, 2017, 10:43 AM ISTUpdated : Apr 11, 2018, 12:58 PM IST
ಜಿಎಸ್'ಟಿ ಇನ್ನೂ ಅರ್ಥವಾಗಿಲ್ಲವೇ? ಇಲ್ಲಿದೆ ಮೂಲ ಲೆಕ್ಕಾಚಾರ

ಸಾರಾಂಶ

ನಾಳೆಯಿಂದ ದೇಶಾದ್ಯಂತ ಹೊಸ ತೆರಿಗೆ ವ್ಯವಸ್ಥೆ ಜಿಎಸ್‌ಟಿ ಜಾರಿಗೆ ಬರಲಿದೆ. ತೆರಿಗೆ ಪದ್ಧತಿ, ತೆರಿಗೆ ದರಗಳ ಕುರಿತು ವರ್ಷದಿಂದ ದೇಶಾದ್ಯಂತ ವ್ಯಾಪಕ ಚರ್ಚೆ ನಡೆದಿದ್ದರೂ, ಇಂದಿಗೂ ಬಹುತೇಕ ಮಂದಿಗೆ ಈ ತೆರಿಗೆ ಏನು? ಹೇಗೆ ಜಾರಿಗೆ ಬರಲಿದೆ? ಯಾವ ಬಗೆಯಲ್ಲಿ ತೆರಿಗೆ ಹಾಕಲಾಗುತ್ತದೆ ಎಂಬ ಮಾಹಿತಿ​​ಯ ಕೊರತೆ ಇದೆ. ಜನಸಾಮಾನ್ಯರಿರಲಿ, ಕೆಲವು ವಹಿವಾಟುದಾರರು, ಉದ್ಯಮಿಗಳು, ವ್ಯಾಪಾರಿಗಳಿಗೂ ಗೊಂದಲಗಳಿವೆ. ಆ ಹಿನ್ನೆಲೆಯಲ್ಲಿ ಜಿಎಸ್‌ಟಿಯನ್ನು ಸರಳ ರೀತಿಯಲ್ಲಿ ವಿವರಿಸುವ ಪ್ರಯತ್ನ ಇದು.

ನಾಳೆಯಿಂದ ದೇಶಾದ್ಯಂತ ಹೊಸ ತೆರಿಗೆ ವ್ಯವಸ್ಥೆ ಜಿಎಸ್ಟಿ ಜಾರಿಗೆ ಬರಲಿದೆ. ತೆರಿಗೆ ಪದ್ಧತಿ, ತೆರಿಗೆ ದರಗಳ ಕುರಿತು ವರ್ಷದಿಂದ ದೇಶಾದ್ಯಂತ ವ್ಯಾಪಕ ಚರ್ಚೆ ನಡೆದಿದ್ದರೂ, ಇಂದಿಗೂ ಬಹುತೇಕ ಮಂದಿಗೆ ತೆರಿಗೆ ಏನು? ಹೇಗೆ ಜಾರಿಗೆ ಬರಲಿದೆ? ಯಾವ ಬಗೆಯಲ್ಲಿ ತೆರಿಗೆ ಹಾಕಲಾಗುತ್ತದೆ ಎಂಬ ಮಾಹಿತಿ​​ ಕೊರತೆ ಇದೆ. ಜನಸಾಮಾನ್ಯರಿರಲಿ, ಕೆಲವು ವಹಿವಾಟುದಾರರು, ಉದ್ಯಮಿಗಳು, ವ್ಯಾಪಾರಿಗಳಿಗೂ ಗೊಂದಲಗಳಿವೆ. ಹಿನ್ನೆಲೆಯಲ್ಲಿ ಜಿಎಸ್ಟಿಯನ್ನು ಸರಳ ರೀತಿಯಲ್ಲಿ ವಿವರಿಸುವ ಪ್ರಯತ್ನ ಇದು.

‘ವಸ್ತುವಿನ ಒಟ್ಟಾರೆ ಮೌಲ್ಯ' ವೃದ್ಧಿಯಲ್ಲಿ ವ್ಯಾಪಾರಿಯ ಅಥವಾ ವಹಿವಾಟು ದಾರನ ಕೊಡುಗೆ ಏನು ಎಂಬುದನ್ನು ನಿರ್ಧರಿಸಿ ಅದರ ಮೇಲೆ ಮಾತ್ರ ತೆರಿಗೆ ಹಾಕುವ ಸಿದ್ಧಾಂತದ ಮೇಲೆ ಜಿಎಸ್‌ಟಿ ರೂಪಿಸಲಾಗಿದೆ. ಅಲ್ಲದೆ, ಪಾವತಿಸಲಾದ ತೆರಿಗೆಯ ಪ್ರಮಾಣವನ್ನು ಕೊಳ್ಳುವವರ ಮತ್ತು ಮಾರುವವರ ಸರಪಳಿಯಲ್ಲಿ ಆ ವಸ್ತುವನ್ನು ಖರೀದಿಮಾಡುವ ಮುಂದಿನ ಗ್ರಾಹಕನಿಗೆ ಹಾಕುವ ದರದಲ್ಲಿ ಸೇರಿಸುವಂತಿಲ್ಲ. ಹಾಗಾಗಿ ವಸ್ತುವಿನ ಚಲನೆಯುದ್ದಕ್ಕೂ ಆ ವಸ್ತುವಿನ ಮೌಲ್ಯವೃದ್ಧಿಗೆ ನೀಡುವ ಕೊಡುಗೆಯ ಆಧಾರದ ಮೇಲೆ ಎಲ್ಲಾ ವಹಿವಾಟುದಾರರಿಗೂ ನಿರ್ದಿಷ್ಟತೆರಿಗೆ ಹೊರೆ ಬೀಳುತ್ತದೆ. ಹಾಗಾಗಿ ಯಾವುದೇ ಒಬ್ಬ ವಹಿವಾಟುದಾರ ತೆರಿಗೆ ಭಾರ ಹೊರುವ ಪ್ರಮೇಯ ಉದ್ಭವಿಸದು. ಅಲ್ಲದೆ, ಒಂದು ವಸ್ತುವಿನ ಮೇಲಿನ ತೆರಿಗೆ ದರ ದೇಶಾದ್ಯಂತ ಏಕರೀತಿ ಇರುವುದರಿಂದ ಸರಕುಗಳನ್ನು ಕಡಿಮೆ ದರಕ್ಕೆ ಕೊಂಡು ಮತ್ತೊಂದೆಡೆ ಅಧಿಕ ದರಕ್ಕೆ ಮಾರಾಟ ಮಾಡುವ ಪ್ರವೃತ್ತಿಗೆ ಕಡಿವಾಣ ಬೀಳಲಿದೆ.

ಹಿಂದಿನ ತೆರಿಗೆ ಮತ್ತು ಜಿಎಸ್‌ಟಿಯ ವ್ಯತ್ಯಾಸ ಹೇಳುವ ಈ ಕೋಷ್ಠಕದಲ್ಲಿ ಬೆಲೆ ಎಂಬುದು ಸರಕಿನ ಮೂಲದ ವಹಿವಾಟು​ದಾ​ರ​ನಿ​ಗೆ ತಗಲುವ ವೆಚ್ಚ. ಮಾರಾಟಗಾರ, ಗ್ರಾಹಕನಿಂದ ತೆರಿಗೆ ಸಂಗ್ರ​ಹಿಸಿ ಸರ್ಕಾರಕ್ಕೆ ಪಾವತಿಸುತ್ತಾನೆ. ಆದರೆ, ಜಿಎಸ್‌ಟಿಯಲ್ಲಿ ಮಾರಾಟ​ಗಾರ ತೆರುವ ಇನ್‌ಪುಟ್‌ ತೆರಿಗೆಯಷ್ಟೇ ಅಲ್ಲ, ಸರಕಿನ ಚಲನೆ​ಯುದ್ದಕ್ಕೂ ಅದು ಅಂತಿಮ ಗ್ರಾಹಕನನ್ನು ತಲುಪುವರೆಗಿನ ಒಟ್ಟಾರೆ ಭರಿಸಬೇಕಾದ ತೆರಿಗೆಯನ್ನು ಗ್ರಾಹಕನಿಂದ ನೇರ​​ವಾಗಿ ಪಡೆಯಲಾಗುತ್ತದೆ. ಆದರೆ, ಸಾಂಪ್ರದಾಯಿಕ ತೆರಿಗೆಯಲ್ಲಿ ವಸ್ತು​​ವಿಗೆ ತೆರಲಾದ ತೆರಿಗೆಯನ್ನು ಆ ವಸ್ತು ಕೊಳ್ಳುವ ಮುಂದಿನ ಗ್ರಾಹಕ​​ನಿಂದಲೇ ಪಡೆಯಲಾಗುತ್ತಿತ್ತು. ಎರಡೂ ವ್ಯವಸ್ಥೆಯಲ್ಲಿ ವಹಿವಾಟು​ದಾ​ರರು ವಸ್ತುವಿನ ಮೌಲ್ಯಕ್ಕೆ ನೀಡುವ ಕೊಡುಗೆಯಲ್ಲಿ ವ್ಯತ್ಯಾಸವಿಲ್ಲದಿದ್ದರೂ ಸಾಂಪ್ರದಾಯಿಕ ತೆರಿಗೆಯಲ್ಲಿ ಆ ವಸ್ತುವಿಗೆ ಗ್ರಾಹಕ ತೆರುವ ಬೆಲೆ ಜಿಎಸ್‌ಟಿಗಿಂತ ಶೇ.43ರಷ್ಟುಅಧಿಕ(.252 ವರ್ಸಸ್‌ .176). ಹಾಗಾಗಿ ಜಿಎಸ್‌ಟಿಯಲ್ಲಿ ಮಾರಾಟಗಾರ ಮತ್ತು ಗ್ರಾಹಕರಿಬ್ಬರಿಗೂ ತೆರಿಗೆಯ ಹೊರೆ ಕಡಿಮೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!