ಟ್ರಂಪ್ ನೀತಿ ಅಮೆರಿಕಕ್ಕೆ ತರಲಿದೆ ಆಪತ್ತು: ಸುಂದರ್ ಪಿಚ್ಚೈ

Published : Jan 28, 2017, 04:47 PM ISTUpdated : Apr 11, 2018, 12:58 PM IST
ಟ್ರಂಪ್ ನೀತಿ ಅಮೆರಿಕಕ್ಕೆ ತರಲಿದೆ ಆಪತ್ತು: ಸುಂದರ್ ಪಿಚ್ಚೈ

ಸಾರಾಂಶ

ಈ ನಡುವೆ ಫೇಸ್'ಬುಕ್ ಸಂಸ್ಥೆಯ ಅಧ್ಯಕ್ಷ ಮಾರ್ಕ್ ಜುಕರ್'ಬರ್ಗ್ ಕೂಡ ಟ್ರಂಪ್'ನ ನೂತನ ವಲಸೆ ನೀತಿಯನ್ನು ಖಂಡಿಸಿದ್ದಾರೆ.

ಸ್ಯಾನ್ ಪ್ರಾನ್ಸಿಸ್ಕೊ(ಜ.28): ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೂತನ ವಲಸೆ ನೀತಿಯಿಂದ ಮುಂದಿನ ದಿನಗಳಲ್ಲಿ ಅಮೆರಿಕಾ ದೇಶಕ್ಕೆ ತೊಂದರೆಯುಂಟಾಗಲಿದೆ ಎಂದು ಭಾರತದ ಮೂಲದ ಸಿಇಒ ಸುಂದರ್ ಪಿಚ್ಚೈ ಆತಂಕ ವ್ಯಕ್ತಪಡಿಸಿದ್ದಾರೆ.

ಟ್ರಂಪ್  7 ಮುಸ್ಲಿಂ ರಾಷ್ಟ್ರಗಳ ನಾಗರಿಕರ ವಿರುದ್ಧ ಅಮೆರಿಕಾ ದೇಶಕ್ಕೆ ನಿಷೇಧದ ನಿರ್ಧಾರ ಕೈಗೊಂಡ ನಂತರ  ಮಾತನಾಡಿದ ಅವರು,ಅಮೆರಿಕಾ ಅಭಿವೃದ್ಧಿ ಹೊಂದಿರುವುದೇ ವಿಶ್ವದ ಎಲ್ಲ ದೇಶಗಳ ಬುದ್ಧಿವಂತರಿಂದ. ಟ್ರಂಪ್ ಅವರ ವಲಸೆ ನೀತಿಯ ನಿರ್ಧಾರ ನಮಗೆ ಬೇಸರ ತಂದಿದೆ. ಈ ರೀತಿಯ ನಿರ್ಧಾರಗಳಿಂದ ದೇಶಕ್ಕೆ ಒಳಿತಾಗುವುದಿಲ್ಲ ಎಂದಿದ್ದಾರೆ.

ಟ್ರಂಪ್'ನ ಈ ಆದೇಶದಿಂದ ಗೂಗಲ್ ಸಂಸ್ಥೆಯ 100 ಸಿಬ್ಬಂದಿಗೆ ತೊಂದರೆಯಾಗಲಿದೆ. ಅಲ್ಲದೆ ನಿಷೇಧಿಸುವ 7 ಮುಸ್ಲಿಂ ದೇಶಗಳಿಂದ ಸಂಸ್ಥೆಯು 187 ಮಂದಿಯನ್ನು ವಾಪಸ್ ಕರೆಸಿಕೊಂಡಿದೆ.

ಈ ನಡುವೆ ಫೇಸ್'ಬುಕ್ ಸಂಸ್ಥೆಯ ಅಧ್ಯಕ್ಷ ಮಾರ್ಕ್ ಜುಕರ್'ಬರ್ಗ್ ಕೂಡ ಟ್ರಂಪ್'ನ ನೂತನ ವಲಸೆ ನೀತಿಯನ್ನು ಖಂಡಿಸಿದ್ದಾರೆ.

ಹೊಸ ನಿಯಮದ ಪ್ರಕಾರ ನಿರಾಶ್ರಿತರು ಹಾಗೂ ಮುಸ್ಲಿಮ್ ದೇಶಗಳಾಗಿರುವ ರಾನ್, ಇರಾಕ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ ಹಾಗೂ ಯೆಮೆನ್ ದೇಶಗಳ ನಾಗರಿಕರಿಗೆ ಮುಂದಿನ 90 ದಿನಗಳ ಅವಧಿಯಲ್ಲಿ ವೀಸಾ ನೀಡಲಾಗದೆಂದು ವರದಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

NIMHANS MindNote app: ಮಾನಸಿಕ ಆರೋಗ್ಯಕ್ಕೆ ನಿಮ್ಹಾನ್ಸ್ ಮೈಂಡ್‌ ನೋಟ್‌ ಆ್ಯಪ್: ಈಗ ಕನ್ನಡದಲ್ಲಿ!
ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಮಳವಳ್ಳಿಗೆ ಆಗಮನ ನಿರೀಕ್ಷೆ