ಪಾಕಿಸ್ತಾನದ ಖ್ವೆಟ್ಟಾದಲ್ಲಿ ಉಗ್ರರ ದಾಳಿ: 60ಕ್ಕೂ ಹೆಚ್ಚು ಜನರ ಹತ್ಯೆ

By web deskFirst Published Oct 25, 2016, 2:53 AM IST
Highlights

ಕಳೆದ ರಾತ್ರಿ 12.30ರ ಸುಮಾರಿಗೆ ಕಾಂಪೌಂಡ್ ಹಾರಿ  ಪೊಲೀಸ್ ತರಬೇತಿ ಹಾಸ್ಟೆಲ್ ಗೆ ನುಗ್ಗಿದ 5 ರಿಂದ 6 ಮಂದಿಯಿದ್ದ ಶಸ್ತ್ರಸಜ್ಜಿತ ಉಗ್ರರು ಮನಬಂದಂತೆ ಗುಂಡಿ ದಾಳಿ ನಡೆಸಿದ್ದಾರೆ. 

ಇಸ್ಲಾಮಾಬಾದ್ (ಅ.25): ಪಾಕಿಸ್ತಾನದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಬಲೂಚಿಸ್ತಾನದ ಖ್ವೆಟ್ಟಾದಲ್ಲಿರೋ ಪೊಲೀಸ್ ತರಬೇತಿ ಶಾಲೆ ಮೇಲೆ ದಾಳಿ ನಡೆಸಿ 60ಕ್ಕೂ ಹೆಚ್ಚು ಮಂದಿಯನ್ನು ಹತ್ಯೆಗೈದಿದ್ದಾರೆ.

ದಾಳಿಯಲ್ಲಿ 250ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. 

ಇನ್ನು  ಪೊಲೀಸ್ ತರಬೇತಿ ಶಾಲೆಯ ಸುತ್ತ ಪಾಕ್ ಸೇನೆ ಸುತ್ತುವರಿದಿದ್ದು, ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಸುಮಾರು 700ಕ್ಕೂ ಅಧಿಕ ಸೇನಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ನಿರತವಾಗಿದ್ದು,  250 ಮಂದಿಯನ್ನು ರಕ್ಷಣೆ ಮಾಡಿದೆ. 

ಕಳೆದ ರಾತ್ರಿ 12.30ರ ಸುಮಾರಿಗೆ ಕಾಂಪೌಂಡ್ ಹಾರಿ  ಪೊಲೀಸ್ ತರಬೇತಿ ಹಾಸ್ಟೆಲ್ ಗೆ ನುಗ್ಗಿದ 5 ರಿಂದ 6 ಮಂದಿಯಿದ್ದ ಶಸ್ತ್ರಸಜ್ಜಿತ ಉಗ್ರರು ಮನಬಂದಂತೆ ಗುಂಡಿ ದಾಳಿ ನಡೆಸಿದ್ದಾರೆ. 

click me!