ಮೋದಿಯಿಂದಾಗಿ ಉಗ್ರ ದಾಳಿ ಎಂದ ರಾಹುಲ್ ಗಾಂಧಿ ನೀಡಿದ ಸಮೀಕರಣ ಏನು ಗೊತ್ತಾ?

By Suvarna Web DeskFirst Published Jul 13, 2017, 9:47 AM IST
Highlights

ಪ್ರಧಾನಿ ನರೇಂದ್ರ ಮೋದಿ, ಅಲ್ಪಾವಧಿ ರಾಜಕೀಯ ಲಾಭದ ದುರಾಸೆಗಾಗಿ ರೂಪಿಸುತ್ತಿರುವ ನೀತಿಗಳು, ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಅವಕಾಶ ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆಪಾದನೆ ಮಾಡಿದ್ದಾರೆ.

ಶ್ರೀನಗರ(ಜು.13): ಪ್ರಧಾನಿ ನರೇಂದ್ರ ಮೋದಿ, ಅಲ್ಪಾವಧಿ ರಾಜಕೀಯ ಲಾಭದ ದುರಾಸೆಗಾಗಿ ರೂಪಿಸುತ್ತಿರುವ ನೀತಿಗಳು, ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಅವಕಾಶ ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆಪಾದನೆ ಮಾಡಿದ್ದಾರೆ.

ಅಮರನಾಥ ಯಾತ್ರಾರ್ಥಿಗಳ ಮೇಲಿನ ಉಗ್ರರ ದಾಳಿಯ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಈ ಆಪಾದನೆ ಮಾಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ, ಪಿಡಿಪಿಯೊಂದಿಗೆ ಮೈತ್ರಿ ಸರ್ಕಾರ ನಡೆಸುತ್ತಿರುವುದನ್ನೂ ರಾಹುಲ್ ಟೀಕಿಸಿದ್ದಾರೆ. ಬಿಜೆಪಿ-ಪಿಡಿಪಿ ಮೈತ್ರಿಗೆ ಭಾರತ ದೊಡ್ಡ ಬೆಲೆ ತೆರಬೇಕಾಗಿದೆ. ಪ್ರಧಾನಿಯವರ ವೈಯಕ್ತಿಕ ಲಾಭಕ್ಕಾಗಿ, ಅಮಾಯಕ ಭಾರತೀಯರ ರಕ್ತ ಹರಿದಿದೆ, ಅಲ್ಲದೆ ಭಾರತಕ್ಕೆ ತಂತ್ರಗಾರಿಕೆಯ ನಷ್ಟವಾಗಿದೆ ಎಂದು ರಾಹುಲ್ ಹೇಳಿದ್ದಾರೆ. ಭಾರತ ಯಾವತ್ತೂ ಭಯೋತ್ಪಾದಕರಿಗೆ ಬೆದರುವುದಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಇದೇ ವೇಳೆ ‘ಮೋದಿ ವೈಯಕ್ತಿಕ ಲಾಭ= ಭಾರತದ ವ್ಯೆಹಾತ್ಮಕ ನಷ್ಟ + ಅಮಾಯಕರ ಭಾರತೀಯರ ಬಲಿದಾನ’ ಎಂಬ ಸಮೀಕರಣದ ಮೂಲಕ ಮೋದಿ ಅವರನ್ನು ರಾಹುಲ್ ವ್ಯಂಗ್ಯವಾಡಿದ್ದಾರೆ.

ಹುಡುಕಾಟ:

ಈ ನಡುವೆ 7 ಅಮರನಾಥ ಯಾತ್ರಿಕರ ಹತ್ಯೆ ಪ್ರಕರಣದ ಪ್ರಮುಖ ರೂವಾರಿ, ಲಷ್ಕರ್ ಎ ತೊಯ್ಬಾ ಉಗ್ರ ಅಬು ಇಸ್ಮಾಯಿಲ್‌ನನ್ನು ವಶಕ್ಕೆ ಪಡೆಯಲು ಭದ್ರತಾ ಪಡೆಗಳು ತೀವ್ರ ಕಾರ್ಯಾಚರಣೆ ಕೈಗೊಂಡಿವೆ.

 

click me!