
ಹೈದರಾಬಾದ್: ಶ್ರೀರಾಮನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿವಾದಿತ ತೆಲುಗು ಚಿತ್ರ ವಿಮರ್ಶಕ ಕಾರ್ತಿ ಮಹೇಶ್‌ರನ್ನು ಹೈದರಾಬಾದ್‌ನಿಂದ ಆರು ತಿಂಗಳು ಗಡಿಪಾರು ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ಪೊಲೀಸರು ಕಾರ್ತಿ ಅವರನ್ನು ಪಕ್ಕದ ಆಂಧ್ರಪ್ರದೇಶದ ತಮ್ಮ ತವರು ಜಿಲ್ಲೆ ಚಿತ್ತೂರುಗೆ ಸ್ಥಳಾಂತರಿಸಿದ್ದಾರೆ. ಶ್ರೀರಾಮ ವಂಚಕ.
ಸೀತೆ ಶ್ರೀರಾಮನನ್ನು ಮದುವೆಯಾಗುವ ಬದಲು ರಾವಣನನ್ನು ವರಿಸಿದ್ದರೆ ಚೆನ್ನಾಗಿತ್ತು ಎಂದು ಹಲವು ಸಂದರ್ಶನಗಳಲ್ಲಿ ಮಹೇಶ್ ಹೇಳಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಕಾರ್ತಿಯನ್ನು ಹೈದ್ರಾಬಾದ್ ಮಿತಿಯಿಂದ 6 ತಿಂಗಳು ಗಡಿಪಾರು ಮಾಡಿದ್ದಾರೆ.
ಆದರೆ ಆಂಧ್ರಪ್ರದೇಶದಲ್ಲೂ ಕಾರ್ತಿ ವಿರುದ್ಧ ಪ್ರತಿಭಟನೆ ನಡೆಯುವ ಸಾಧ್ಯತೆಯಿರುವುದರಿಂದ ಅವರನ್ನು ಅಲ್ಲಿಂದಲೂ ಬೇರೆ ರಾಜ್ಯಕ್ಕೆ ವರ್ಗಾಯಿಸುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.