
ಹೊಸದಾಗಿ ತೆಲಂಗಾಣ ರಾಜ್ಯ ರಚನೆಯಾದಾಗ ಯಾತ್ರಾಸ್ಥಳ ತಿರುಪತಿ ಆಂಧ್ರದಲ್ಲಿಯೇ ಉಳಿಯಿತು. ಅದಕ್ಕೆ ಸಮನಾದ ಆಕರ್ಷಣೆ ಹೊಂದಿರುವ ಯಾತ್ರಾ ಸ್ಥಳ ತೆಲಂಗಾಣದಲ್ಲಿಲ್ಲವಲ್ಲ ಎಂಬ ನೋವು ಹಲವರನ್ನು ಕಾಡಿತ್ತು. ಅದಕ್ಕೊಂದು ಪರ್ಯಾಯ ವ್ಯವಸ್ಥೆಯನ್ನು ತೆಲಂಗಾಣ ಸರಕಾರ ಕಂಡುಕೊಂಡಿದೆ.
ಯಾದಾದ್ರಿ ಜಿಲ್ಲೆಯಲ್ಲಿರುವ ಶತಮಾನಗಳಷ್ಟು ಹಳೆಯದಾಗಿರುವ ಲಕ್ಷ್ಮೀ ನರಸಿಂಹ ದೇವರ ದೇಗುಲವನ್ನು ತಿರುಮಲ ದೇಗುಲದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿದೆ. ಅಲ್ಲಿ ವಿಶ್ವದರ್ಜೆಯ ಸೌಲಭ್ಯ ಗಳನ್ನು ಒದಗಿಸಲು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ನೇತೃತ್ವದ ಸರಕಾರ ಹೆಜ್ಜೆ ಇಟ್ಟಿದೆ. ಈ ಉದ್ದೇಶಕ್ಕಾಗಿ ಈಗಾಗಲೇ 1,800 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಆರಂಭಿಕ ಕೆಲಸಗಳು ಭರದಿಂದ ಸಾಗುತ್ತಿವೆ. ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ದೇಗುಲದ ಮಾದರಿಯಲ್ಲೇ ಯಾದಾದ್ರಿಯಲ್ಲಿ ನಿರ್ಮಾಣ ವಾಗುತ್ತಿರುವ ದೇಗುಲದ ಸುತ್ತ 9 ಬೆಟ್ಟಗಳಿವೆ. ಜತೆಗೆ ನಿತ್ಯಹರಿದ್ವರ್ಣಮಯ ಕಾಡಿನಿಂದ ಈ ಪರಿಸರ ಒಡಗೂಡಿದೆ. 1,400 ಎಕರೆ ಪ್ರದೇಶದಲ್ಲಿ ದೇಗುಲದ ಅರ್ಚಕರು, ಸಿಬ್ಬಂದಿ, ಪ್ರವಾಸಿಗಳಿಗೆ ತಂಗಲು ಕಾಟೇಜುಗಳ ನಿರ್ಮಾಣ ಶುರುವಾಗಿದೆ.
2019ರ ಒಳಗಾಗಿ ಪೂರ್ಣ ಕಾಮಗಾರಿ ಮುಗಿಯಬೇಕೆಂಬುದು ಗುರಿ. 2018ರ ಮೇ ಒಳಗಾಗಿ ಮೊದಲ ಹಂತದ ಕಾಮಗಾರಿ ಮುಗಿಸಲು ಉದ್ದೇಶಿಸಲಾಗಿದೆ. ಅದಕ್ಕಾ ಗಿಯೇ ಯಾದಾದ್ರಿ ದೇಗುಲ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗಿದೆ. ದೇಗುಲಕ್ಕೆ ಸುಲಲಿತ ಸಂಚಾರ ವ್ಯವಸ್ಥೆಗಾಗಿ ನಾಲ್ಕು ಪಥಗಳ ಹೆದ್ದಾರಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ತೆಲಂಗಾಣದ ಜನರಿಗೆ ಲಕ್ಷ್ಮೀ ನರಸಿಂಹ ಎಂದರೆ ಬಹಳ ಭಕ್ತಿ ಇದೆ. ಮಾನಸಿಕ ಕಾಯಿಲೆಗಳು, ಭೂತ- ಪ್ರೇತಗಳ ನಿವಾರಣೆ, ದೇಹ ದುರಿತಗಳನ್ನು ನಿವಾರಿ ಸುವ ಶಕ್ತಿ ಇದೆ ಎಂದು ನಂಬಿದ್ದಾರೆ.
ಹೀಗಾಗಿಯೇ ಸಿಎಂ ಚಂದ್ರಶೇಖರ ರಾವ್ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡು ದೇಗುಲ ನಿರ್ಮಾಣಕ್ಕೆ ಮುಂದಾಗಿದ್ದಾರೆ ಅಂತ ಹೇಳಲಾಗ್ತಿದೆ. ಇನ್ನು ಈ ಇನ್ನೊಂದು ತಿರುಪತಿಯ ದೇಗುಲ ನಿರ್ಮಾಣ ಕಾರ್ಯಕ್ಕೆ ಕಲ್ಲುಗಳ ಬಳಕೆ ಮಾಡಲಾಗುತ್ತಿಲ್ಲ ಎನ್ನುವುದು ವಿಶೇಷ. ಕಾಕತೀಯ ರಾಜವಂಶ ಕಾಲದ ದೇಗುಲ ಇದಾಗಿದೆ. ಹೀಗಾಗಿ, ಅದೇ ಕಾಲದ ಶಿಲ್ಪಕಲೆಯಲ್ಲಿ ನಿರ್ಮಾಣವಾಗಿತ್ತು ದೇಗುಲ. ಹೀಗಾಗಿ ಕಪ್ಪು ಬಣ್ಣದ ಗ್ರಾನೈಟ್ ಅನ್ನು ನಿರ್ಮಾಣಕ್ಕೆ ಬಳಸಲಾಗುತ್ತದೆ. ಇದರ ಜತೆಗೆ 2.7 ಕಿಮೀ ಉದ್ದದ ಪ್ರದಕ್ಷಿಣೆ ರಸ್ತೆಯ ನಿರ್ಮಾಣವನ್ನೂ ಮಾಡಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.