99 ಅಂಕ ಗಳಿಸಿದ್ದ ಬಾಲಕಿಗೆ ಶೂನ್ಯ ನೀಡಿದ ಶಿಕ್ಷಕಿ ಸಸ್ಪೆಂಡ್‌!

Published : Apr 30, 2019, 10:20 AM IST
99 ಅಂಕ ಗಳಿಸಿದ್ದ ಬಾಲಕಿಗೆ ಶೂನ್ಯ ನೀಡಿದ ಶಿಕ್ಷಕಿ ಸಸ್ಪೆಂಡ್‌!

ಸಾರಾಂಶ

99 ಅಂಕ ಗಳಿಸಿದ್ದ ಬಾಲಕಿಗೆ 0 ನೀಡಿದ ಶಿಕ್ಷಕಿ ಸಸ್ಪೆಂಡ್‌| ಇಬ್ಬರು ಮೌಲ್ಯಮಾಪಕರು ಅಮಾನತು

ಹೈದರಾಬಾದ್‌[ಏ.30]: ತೆಲಂಗಾಣದ ಇಂಟರ್‌ಮೀಡಿಯಟ್‌ (12ನೇ ತರಗತಿ) ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ಕಳೆದ 10 ದಿನಗಳಲ್ಲಿ 25 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ, ಮೌಲ್ಯಮಾಪನ ಎಡವಟ್ಟೊಂದು ಬೆಳಕಿಗೆ ಬಂದಿದೆ.

ತೆಲುಗು ಭಾಷೆ ಪರೀಕ್ಷೆಯಲ್ಲಿ 99 ಅಂಕ ಗಳಿಸಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಮೌಲ್ಯಮಾಪಕಿ ಶೂನ್ಯ ಅಂಕ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಲೋಪದ ಬಗ್ಗೆ ಮತ್ತೊಬ್ಬ ಮೌಲ್ಯಮಾಪಕ ಪರಿಶೀಲನೆ ನಡೆಸಬೇಕಿತ್ತು. ಆದರೆ ಆತ ಕೂಡ ನಿರ್ಲಕ್ಷ್ಯ ತೋರಿದ್ದಾನೆ.

ಈ ಹಿನ್ನೆಲೆಯಲ್ಲಿ ಇಬ್ಬರೂ ಮೌಲ್ಯಮಾಪಕರನ್ನು ಅಮಾನತುಗೊಳಿಸಿದೆ. ಶೂನ್ಯ ನೀಡಿದ ಶಿಕ್ಷಕಿಗೆ 5 ಸಾವಿರ ರು. ದಂಡ ವಿಧಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಲೆಕ್ಟ್ರಾನಿಕ್‌ ಯುದ್ಧ ನಡೆಸಬಲ್ಲ ಸಮರ್ಥಕ್‌ 16ಕ್ಕೆ ಕಾರವಾರದಲ್ಲಿ ನೌಕಾಪಡೆಗೆ ಸೇರ್ಪಡೆ
Sting Operation in Karnataka: ಸ್ಟಿಂಗ್ ಆಪರೇಷನ್ ನಡೆಸಿದವರು ಯಾರು? ಈಗ ಎಲ್ಲಿದ್ದಾರೆ? ಆರ್ ಅಶೋಕ್ ಹೇಳಿಕೆ ಸಂಚಲನ!