ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಮುಖಂಡರು ನಿರಾಳ

By Web DeskFirst Published Nov 23, 2018, 2:56 PM IST
Highlights

ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಮುಖಂಡರಿಗೆ ಎದುರಾಗಿದ್ದ ಆತಂಕವೊಂದು ಇದೀಗ ದೂರಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ದೊರೆಯದ ಕಾರಣ ಟಿ ಆರ್ ಎಸ್ ಹಾಗೂ ಕಾಂಗ್ರೆಸ್ ನಿಂದ ಬಂಡಾಯವಾಗಿ ಸ್ಪರ್ಧೆ ಮಾಡಿದ್ದ ಮುಖಂಡರು ತಮ್ಮ ನಾಪತ್ರವನ್ನು ಹಿಂಪಡೆದುಕೊಂಡಿದ್ದಾರೆ. 

ಹೈದ್ರಬಾದ್ :  ದೇಶದ ಪಂಚರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು,  ತೆಲಂಗಾಣದಲ್ಲಿ ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್ ಹಾಗೂ ಟಿಆರ್ ಎಸ್ ಮುಖಂಡರಿಗೆ ಎದುರಾಗಿದ್ದ ಆತಂಕವೀಗ ದೂರಾಗಿದೆ. 

ಪಕ್ಷದ ಟಿಕೆಟ್ ದೊರೆಯದ ಕಾರಣ ಬಂಡಾಯವಾಗಿ ಸ್ಪರ್ಧೆ ಮಾಡಿದ ಎರಡೂ ಪಕ್ಷದ ಮುಖಂಡರು ತಮ್ಮ ನಾಮಪತ್ರಗಳನ್ನು ಗುರುವಾರ ಹಿಂಪಡೆದಿದ್ದಾರೆ. 

ಮುಂದಿನ ಡಿಸೆಂಬರ್ 7 ರಂದು ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದು , ನವೆಂಬರ್ 22 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಈ ವೇಳೆ ಪಕ್ಷದಿಂದ ಬಂಡಾಯವಾಗಿ ಸ್ಪರ್ಧೆ ಮಾಡಿದ್ದ ಮುಖಂಡರು ತಮ್ಮ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ.  

ಟಿಆರ್ ಎಸ್ ಪಕ್ಷದ ಇಬ್ಬರು ಮುಖಂಡರು ಬಂಡಾಯ ಶಮನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.  ಸಚಿವ ಕೆ.ಟಿ.ರಾಮರಾವ್ ಹಾಗೂ ಟಿ.ಹರೀಶ್ ರಾವ್ ಬಂಡಾಯವಾಗಿ ಸ್ಪರ್ಧೆ ಮಾಡಲು ಮುಂದಾಗಿದ್ದ ಮುಖಂಡರನ್ನು ತಣ್ಣಗಾಗಿಸಿದ್ದಾರೆ. 

ಟಿಆರ್ ಎಸ್ ನಿಂದ ಬಂಡಾಯವಾಗಿ ಸ್ಪರ್ಧೆ ಮಾಡಿದ್ದ ಶಶಿದರ್ ರೆಡ್ಡಿಗೆ ಎಂಎಲ್ ಸಿ ಸ್ಥಾನ ನೀಡುವ ಭರವಸೆ ನೀಡಿ ತಣ್ಣಗಾಗಿಸಲಾಗಿದೆ. ಇನ್ನು ಖುತುಬುಲ್ ಪುರ ಕ್ಷೇತ್ರದಿಂದ ಬಂಡಾಯವಾಗಿ ಸ್ಪರ್ಧಿಸಿದ್ದ  ಹನುಮಂತ ರೆಡ್ಡಿ ಕೂಡ ನಾಮಪತ್ರ ವಾಪಸ್ ಪಡೆದಿದ್ದಾರೆ. 

ಇನ್ನು ಕಾಂಗ್ರೆಸ್ ನಿಂದಲೂ ಕೂಡ ಅನೇಕ ಮುಖಂಡರು ಬಂಡಾಯವಾಗಿ ಸ್ಪರ್ಧಿಸಿ ಇದೀಗ ನಾಮಪತ್ರ ವಾಪಸ್ ಪಡೆದಿದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಖಂಡರು ಬಂಡಾಯಗಾರರನ್ನು ಶಮನ ಮಾಡುವಲ್ಲಿ ಮುಖ್ಯಪಾತ್ರದಾರಿಗಳಾಗಿದ್ದಾರೆ. 

ಕಾಂಗ್ರೆಸ್ ನಿಂದ ಬಂಡಾಯವಾಗಿ ಸ್ಪರ್ಧೆ ಮಾಡಿದ್ದ ಭಿಕ್ಷಪತಿ ಯಾದವ್, ಸುಭಾಶ್ ರೆಡ್ಡಿ, ಮಲ್ಯಾದ್ರಿ ರೆಡ್ಡಿ ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದುಕೊಂಡಿದ್ದಾರೆ. 

ಡಿಸೆಂಬರ್ 7 ರಂದು ತೆಲಂಗಾಣ 119 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಪ್ರಕಟವಾಗಲಿದೆ.

click me!