‘ರಾಜೀನಾಮೆಗೆ ನಿರ್ಧರಿಸಿದ ಗೋವಾ ಸಿಎಂ ಪರಿಕ್ಕರ್’

By Web DeskFirst Published Nov 23, 2018, 11:35 AM IST
Highlights

ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ರಾಜೀನಾಮೆ ನೀಡಲು ನಿರ್ಧರಿಸಿದ್ದು ಆದರೆ ಇದಕ್ಕೆ ಬಿಜೆಪಿ ಹೈ ಕಮಾಂಡ್ ನಿರಾಕರಿಸುತ್ತಿದೆ ಎಂದು ಸಚಿವ ವಿಜಯ್ ಸರ್ದೇಸಾಯಿ ಹೇಳಿದ್ದಾರೆ. 

ಪಣಜಿ : ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಬಯಸುತ್ತಿದ್ದಾರೆ. ಆದರೆ  ಬಿಜೆಪಿ ಹೈ ಕಮಾಂಡ್ ಇದನ್ನು ನಿರಾಕರಿಸುತ್ತಿದೆ ಎಂದು ಗೋವಾ ಕೃಷಿ ಸಚಿವರಾದ  ವಿಜಯ್ ಸರ್ದೇಸಾಯಿ ಹೇಳಿದ್ದಾರೆ. 

ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸುವ ಯೋಚನೆ ಅವರಲ್ಲಿದೆ. ಅಲ್ಲದೇ ಅವರ ಬಳಿ ಇರುವ ಇತರ ಖಾತೆಗಳನ್ನು ಬಿಟ್ಟುಕೊಡುವುದು ಅವರ ನಿರ್ಧಾರವಾಗಿದೆ. ಆಸ್ಪತ್ರೆಗೆ ಸೇರಿದಾಗಲೆ ಈ ಬಗ್ಗೆ ನಿರ್ಧರಿಸಿದ್ದರು ಎಂದು ಸರ್ದೇಸಾಯಿ ಹೇಳಿದ್ದಾರೆ. 

ಸದ್ಯ ಗೋವಾ ರಾಜಕೀಯದಲ್ಲಿ ಅನೇಕ ರೀತಿಯ ಘಟನೆಗಳು ಸಂಭವಿಸುತ್ತಿದೆ. ಆದರೆ ನಿರ್ಧಾರ ತೆಗೆದುಕೊಂಡು ಅದನ್ನು ಕಾರ್ಯರೂಪಕ್ಕೆ ತರುವುದು ಅವರ ಕೈಯಲ್ಲಿ ಇಲ್ಲ. ಇದಕ್ಕೆ ಬಿಜೆಪಿ ಹೈಕಮಾಂಡ್ ನಿಂದ ಒಪ್ಪಿಗೆ ದೊರೆಯುತ್ತಿಲ್ಲ ಎಂದಿದ್ದಾರೆ.

ಇನ್ನು ಸ್ವತಂತ್ರ ಶಾಸಕ ಹಾಗೂ ಕಂದಾಯ ಸಚಿವ ರೋಹನ್ ಕೌಂಟಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಪರಿಕ್ಕರ್ ಅವರ ಅನಾರೋಗ್ಯದಿಂದಾದ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಂಠಿತಗಗೊಂಡಿದೆ ಎಂದಿದ್ದಾರೆ. 

62 ವರ್ಷದ ಪರಿಕ್ಕರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಏಮ್ಸ್ ಗೆ ದಾಖಲಾಗಿ ಅಲ್ಲಿಂದ ಅಕ್ಟೋಬರ್ 14ರಂದು ಡಿಶ್ಚಾರ್ಜ್ ಆಗಿದ್ದರು. 

click me!