ಒಂದೇ ದಿನದಲ್ಲಿ ಫೇಸ್ಬುಕ್ ಹೀರೋ ಆದ ಯೋಧ ತೇಜ್

By Suvarna Web DeskFirst Published Jan 10, 2017, 2:39 PM IST
Highlights

ನಿನ್ನೆಯವರೆಗೂ 7 ಸಾವಿರ ಫಾಲೋವರ್ಸ್ ಇದ್ದವರು ಒಂದೇ ದಿನಕ್ಕೆ 80 ಸಾವಿರಕ್ಕೂ ಅಧಿಕ ಮಂದಿ ಸೇರಿಕೊಂಡಿದ್ದಾರೆ.

ನವದೆಹಲಿ(ಜ.10): ಬಿಎಸ್'ಎಫ್ ಅಧಿಕಾರಿಗಳು ಸೈನಿಕರಿಗೆ ಆಹಾರ ಸೇರಿದಂತೆ ಕಳಪೆ ಸೌಲಭ್ಯ ನೀಡುತ್ತಿದ್ದಾರೆ ಎಂದು ಆರೋಪಿಸಿ ಫೇಸ್'ಬುಕ್'ನಲ್ಲಿ ಪೋಸ್ಟ್ ಮಾಡಿದ್ದ ಯೋಧ ತೇಜ್ ಬಹುದ್ದೂರ್ ಯಾದವ್ ದಿನ ಬೆಳಗಾಗುವುದರಲ್ಲಿ ಫೇಸ್'ಬುಕ್'ನಲ್ಲಿ ರಾಷ್ಟ್ರೀಯ ಹೀರೋ ಆಗಿದ್ದಾನೆ.

ನಿನ್ನೆಯವರೆಗೂ 7 ಸಾವಿರ ಫಾಲೋವರ್ಸ್ ಇದ್ದವರು ಒಂದೇ ದಿನಕ್ಕೆ 80 ಸಾವಿರಕ್ಕೂ ಅಧಿಕ ಮಂದಿ  ಸೇರಿಕೊಂಡಿದ್ದಾರೆ. ಅಲ್ಲದೆ ಈತನ ಹೆಸರಿನಲ್ಲಿ ಅಭಿಮಾನಿಗಳು 6ಕ್ಕೂ ಹೆಚ್ಚು ನಕಲಿ ಪೇಜ್'ಗಳನ್ನು ಕೂಡ ತೆರದಿದ್ದಾರೆ. ತೇಜ್ ಹಾಕಿರುವ ಪೋಸ್ಟ್'ಗಳನ್ನು ಅಭಿಮಾನಿಗಳು ರೀಪೋಸ್ಟ್ ಮಾಡುತ್ತಿದ್ದಾರೆ.

29 ವರ್ಷದ ತೇಜ್ ಬಹುದ್ದೂರ್ ಯಾದವ್ 29ನೇ ಬೆಟಾಲಿಯನ್ ಸಶಸ್ತ್ರ ಸೀಮಾ ದಳ'ನಲ್ಲಿ ಕೆಲಸ ಮಾಡುತ್ತಿದ್ದು, ಯೋಧರಿಗೆ ಕಳಪೆ ಆಹಾರ ನೀಡುತ್ತಿರುವ ಬಗ್ಗೆ ಫೇಸ್'ಬುಕ್'ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ. ಈ ವಿಡಿಯೋ ರಾಷ್ಟ್ರದಾದ್ಯಂತ ಸುದ್ದಿಯಾಗಿ ಗೃಹಸಚಿವರು ಈ ಸುದ್ದಿಯ ಬಗ್ಗೆ ಬಿಎಸ್'ಎಫ್ ಅಧಿಕಾರಿಗಳನ್ನು ಸ್ಪಷ್ಟನೆ ಕೇಳಿದ್ದರು. ಬಿಎಸ್'ಎಫ್ ಈತನ ಆರೋಪವನ್ನು ನಿರಾಕರಿಸಿ ಇವನೊಬ್ಬ ಮದ್ಯ ವ್ಯಸನಿಯಾಗಿದ್ದು, ಸೇನೆಗೆ ಸೇರಿದಾಗಿನಿಂದಲೂ ಆತನಿಗೆ ನಿರಂತರ ಕೌನ್ಸಿಲಿಂಗ್ ಮಾಡಲಾಗುತ್ತಿದೆ. ಅಲ್ಲದೇ, ಪೂರ್ವಾನುಮತಿಯಿಲ್ಲದೇ ಆತ ಸೇವೆಗೆ ಗೈರು ಹಾಜರಾಗುತ್ತಾನೆ.  ಹಿರಿಯ ಅಧಿಕಾರಿಗಳೊಂದಿಗೂ ಅಸಭ್ಯವಾಗಿ ವರ್ತಿಸುತ್ತಿದ್ದಾನೆ' ಎಂದು ತಿಳಿಸಿತ್ತು.

click me!