ಮದುವೆಯಾಗೋದಾಗಿ ನಂಬಿಸಿ ಅತ್ಯಾಚರ ಎಸಗಿದ ಶಿಕ್ಷಕ ಅರೆಸ್ಟ್

Published : Jun 05, 2018, 11:00 AM IST
ಮದುವೆಯಾಗೋದಾಗಿ ನಂಬಿಸಿ ಅತ್ಯಾಚರ ಎಸಗಿದ ಶಿಕ್ಷಕ ಅರೆಸ್ಟ್

ಸಾರಾಂಶ

ಮದುವೆಯಾಗೋದಾಗಿ ನಂಬಿಸಿ ಅತ್ಯಾಚರ ಎಸಗಿದ ಜಮ್ಮ-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

ಜಮ್ಮು-ಕಾಶ್ಮೀರ (ಜೂನ್.5): ಮದುವೆಯಾಗೋದಾಗಿ ನಂಬಿಸಿ ಅತ್ಯಾಚಾರ ಎಸೆಗಿ, ಬ್ಲಾಕ್‌ಮೇಲ್ ಮಾಡುತ್ತಿದ್ದ ಜಮ್ಮುಕಾಶ್ಮೀರದ ಸರ್ಕಾರಿ ಶಿಕ್ಷಕನ್ನ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ನೀಡಿದ ದೂರಿನ ಮೇಲೆ  ಕಿಶ್ತ್ವಾರ್ ಜಿಲ್ಲೆಯ ಸರ್ಕಾರಿ ಶಿಕ್ಷಕನನ್ನ ಅರೆಸ್ಟ್ ಮಾಡಿದ್ದಾರೆ. 

ಸರ್ಕಾರಿ ಆಸ್ಪತ್ರೆಯಲ್ಲಿ ತರಭೇತಿ ಪಡೆಯುತ್ತಿದ್ದ ಮಹಿಳೆಯನ್ನ ಮದವೆಯಾಗೋದಾಗಿ ಶಿಕ್ಷಕ ಮಾತು ಕೊಟ್ಟಿದ್ದ. ಸಂತ್ರಸ್ಥ ಮಹಿಳೆ, ಪೋಷಕರ ಬಳಿ ಮಾತನಾಡಲು ತಿಳಿಸಿದ್ದಳು. ಆದರೆ ಶಿಕ್ಷಕ ಬಲಂತವಾಗಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಪದೇ ಪದೇ ದೈಹಿಕ ಸಂಪರ್ಕಕ್ಕಾಗಿ ಪೀಡಿಸುತ್ತಿದ್ದ ಶಿಕ್ಷಕ ಆಕೆಯ ಬೆತ್ತಲೇ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದಾನೆ. ಇಷ್ಟೇ ಅಲ್ಲ ಆಕೆಯ ಸಂಬಂಧಿಕರಿಗೆ ಕೆಲ ಫೋಟೋಗಳನ್ನ ಕಳುಹಿಸಿ ಬ್ಲಾಕ್‌ಮೇಲ್ ಮಾಡಿದ್ದಾನೆ.

ಶಿಕ್ಷನಿಂದ ಮಾನಸಿಕವಾಗಿ ನೊಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ವೇಳೆ ಪೋಷಕರು ನೆರವಿಗೆ ಧಾವಿಸಿದ್ದಾರೆ. ಬಳಿಕಕ ಕಿಶ್ತ್ವಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಡಿಎಸ್‌ಪಿ ಮನೋಜ್ ಕುಮಾರ್ ಶಿಕ್ಷಕನನ್ನ ಬಂಧಿಸಿದ್ದಾರೆ.  


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: 70 ವರ್ಷದ ಪತಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ 67 ವರ್ಷದ ನಿವೃತ್ತ ಪ್ರಾಧ್ಯಾಪಕಿ!
ನಾಳೆಯಿಂದಲೇ ಖಾಸಗಿ-ಸರ್ಕಾರಿ ಶೇ.50 ಉದ್ಯೋಗಿಗಳಿಗೆ ರಷ್ಟು ವರ್ಕ್ ಫ್ರಮ್ ಹೋಮ್ ಕಡ್ಡಾಯ