
ನವದೆಹಲಿ (ಜೂ.17): ತೆಲುಗು ದೇಶಂ ಪಾರ್ಟಿ ಶಾಸಕ ಜೆಸಿ ದಿವಾಕರ್ ರೆಡ್ಡಿಯನ್ನ ಇಂಡಿಗೋ, ಏರ್ ಇಂಡಿಯಾ ಮತ್ತು ಜೆಟ್ ಏರ್ವೇಸ್ ಸೇರಿದಂತೆ 7 ಏರ್ಲೈನ್ಸ್ ಕಂಪನಿಗಳು ಬ್ಯಾನ್ ಮಾಡಿವೆ.
ಗುರುವಾರ ಬೆಳಿಗ್ಗೆ ವಿಶಾಖಪಟ್ಟಣಂನಿಂದ ಹೈದರಾಬಾದ್'ಗೆ ದಿವಾಕರ್ ರೆಡ್ಡಿ ಪ್ರಯಾಣಿಸಬೇಕಿತ್ತು. ಬೆಳಿಗ್ಗೆ 8.10 ರೊಳಗೆ ಏರ್ಪೋರ್ಟ್'ಗೆ ಬರಬೇಕಿತ್ತು. ಆದರೆ ದಿವಾಕರ್ ರೆಡ್ಡಿ 28 ನಿಮಿಷ ತಡವಾಗಿ ಬಂದಿದ್ದು, ಏರ್ಪೋರ್ಟ್ ಸಿಬ್ಬಂದಿ ದಿವಾಕರ್ ರೆಡ್ಡಿ ಪ್ರವೇಶಕ್ಕೆ ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಾದ ಶಾಸಕ ದಿವಾಕರ್ ರೆಡ್ಡಿ ಏರ್ಪೋರ್ಟ್ ಕಚೇರಿ ಆವರಣದಲ್ಲಿದ್ದ ಪ್ರಿಂಟರ್ ಬಿಸಾಡಿ, ಕಚೇರಿ ಪೀಠೋಪಕರಣಗಳನ್ನು ಹಾನಿಗೊಳಿಸಿ ಸಿಬ್ಬಂದಿಗಳ ಮೇಲೆ ಕೂಗಾಡಿದ್ದಾರೆ. ಅಷ್ಟೇ ಅಲ್ಲದೇ ಏರ್ಲೈನ್ಸ್ ಬಸ್'ನಂತಾಗಿದೆ. ಹೆಚ್ಚು ಹಣ ನೀಡಿದವರಿಗೆ ಅವರು ಟಿಕೆಟ್ ಸೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರೆಡ್ಡಿ ಅವಾಂತರದಿಂದ ಬೇಸರಗೊಂಡ ಏರ್ಲೈನ್ಸ್, ಇಂಡಿಗೋ, ಏರ್ ಇಂಡಿಯಾ ಮತ್ತು ಜೆಟ್ ಏರ್ವೇಸ್ ರೆಡ್ಡಿ ವಿಮಾನಯಾನವನ್ನೇ ಬ್ಯಾನ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.