ಟಾಟಾ ಸಮೂಹದ ತೆಕ್ಕೆಗೆ ಏರ್ ಇಂಡಿಯಾ?

By Suvarna Web DeskFirst Published Jun 21, 2017, 4:52 PM IST
Highlights

ಸರಕಾರಿ ಸ್ವಾಮ್ಯದಲ್ಲಿರುವ ಏರ್ ಇಂಡಿಯಾ ಸಂಸ್ಥೆಯನ್ನು  ಟಾಟಾ ಸಮೂಹವು, ಸಿಂಗಾಪುರ್ ಏರ್’ಲೈನ್ಸ್ ಸಹಭಾಗಿತ್ವದಲ್ಲಿ ಖರೀದಿಸಲಿದೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಒಂದು ವೇಳೆ ಇದು ನಿಜವಾದರೆ ಏರ್ ಇಂಡಿಯಾ ಮತ್ತೆ ಮನೆಗೆ ಪುನರಾಗಮನವಾದಂತಾಗುತ್ತದೆ.  1953 ರಲ್ಲಿ ಏರ್ ಇಂಡಿಯಾ ರಾಷ್ಟ್ರೀಕೃತವಾಗುವ ಮುನ್ನ ಟಾಟಾ ಸಮೂಹದ ಒಡೆತನದಲ್ಲಿತ್ತು.

ನವದೆಹಲಿ (ಜೂ.21): ಸರಕಾರಿ ಸ್ವಾಮ್ಯದಲ್ಲಿರುವ ಏರ್ ಇಂಡಿಯಾ ಸಂಸ್ಥೆಯನ್ನು  ಟಾಟಾ ಸಮೂಹವು, ಸಿಂಗಾಪುರ್ ಏರ್’ಲೈನ್ಸ್ ಸಹಭಾಗಿತ್ವದಲ್ಲಿ ಖರೀದಿಸಲಿದೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಒಂದು ವೇಳೆ ಇದು ನಿಜವಾದರೆ ಏರ್ ಇಂಡಿಯಾ ಮತ್ತೆ ಮನೆಗೆ ಪುನರಾಗಮನವಾದಂತಾಗುತ್ತದೆ.  1953 ರಲ್ಲಿ ಏರ್ ಇಂಡಿಯಾ ರಾಷ್ಟ್ರೀಕೃತವಾಗುವ ಮುನ್ನ ಟಾಟಾ ಸಮೂಹದ ಒಡೆತನದಲ್ಲಿತ್ತು.

ಟಾಟಾ ಸಮೂಹದ ಚೇರ್’ಮನ್ ಎನ್. ಚಂದ್ರಶೇಖರನ್ ಸರ್ಕಾರದ ಜೊತೆ ಮಾತುಕತೆ ನಡೆಸಿದ್ದು, ಏರ್’ಲೈನ್ಸ್ ಖರೀದಿಸಲು ಉತ್ಸುಕರಾಗಿದ್ದಾರೆ. ಶೇ.51 ರಷ್ಟು ಪಾಲನ್ನು ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಕಳೆದ ದಶಕಗಳಿಂದಲೂ ನಷ್ಟದಲ್ಲಿರುವ ಏರ್’ಲೈನ್ಸನ್ನು ಖಾಸಗೀಕರಣಗೊಳಿಸುವ ಬಗ್ಗೆ ಸರ್ಕಾರ ಮಾತುಕತೆ ನಡೆಸಿತ್ತು. ವಿತ್ತ ಸಚಿವ ಻ರುಣ್ ಜೇಟ್ಲಿ ಇತ್ತೀಚಿಗೆ ವಿಮಾನಯಾನ ಸಚಿವಾಲಯವನ್ನು ಏರ್ ಇಂಡಿಯಾವನ್ನು ಖಾಸಗೀಕರಣ ಮಾಡುವ  ಎಲ್ಲಾ ಸಾಧ್ಯತೆಗಳನ್ನು ತೆರೆದಿಡಬೇಕು ಎಂದು ಹೇಳಿದ್ದರು.

ಏರ್ ಇಂಡಿಯಾ ಖಾಸಗೀಕರಣವಾಗುವುದು ಸಂತೋಷದ ವಿಚಾರ ಎಂದು ಹಿಂದೊಮ್ಮೆ ರತನ್ ಟಾಟಾ ಹೇಳಿದ್ದರು.

 

click me!