ಅಸೆಂಬ್ಲಿಯಲ್ಲಿ ಪ್ರತಿಧ್ವನಿಸಿತು ತನ್ವೀರ್ ಸೇಠ್ ಪ್ರಕರಣ: ಸೇಠ್ ರಾಜೀನಾಮೆಗೆ ಬಿಜೆಪಿ ಆಗ್ರಹ

Published : Dec 03, 2016, 03:03 AM ISTUpdated : Apr 11, 2018, 12:47 PM IST
ಅಸೆಂಬ್ಲಿಯಲ್ಲಿ ಪ್ರತಿಧ್ವನಿಸಿತು ತನ್ವೀರ್ ಸೇಠ್ ಪ್ರಕರಣ: ಸೇಠ್ ರಾಜೀನಾಮೆಗೆ ಬಿಜೆಪಿ ಆಗ್ರಹ

ಸಾರಾಂಶ

ಟಿಪ್ಪು ಜಯಂತಿ ವೇಳೆ ಮೊಬೈಲ್​ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಶಿಕ್ಷಣ ಸಚಿವರ ನಸೀಬು ವಿಪಕ್ಷಗಳ ಬಾಯಿಗೆ ಆಹಾರವಾಗಿಬಿಟ್ಟಿದ್ದಾರೆ. ಇದನ್ನೇ ರಾಜಕೀಯ ದಾಳವಾಗಿಸಿಕೊಂಡ ವಿಪಕ್ಷಗಳು ಬೆಳಗಾವಿಯ ಕಲಾಪದಲ್ಲಿ   ಮಾತಿನ ಚಕಮಕಿ, ಧರಣಿ  ನಡೆಸಿ ಆರ್ಭಟಿಸಿದರು. ನಿಲುವಳಿ ಸೂಚನೆಯಡಿಯಲ್ಲಿ ವಿಷಯ ಪ್ರಸ್ತಾಪಿಸಿದ ಶೆಟ್ಟರ್, ಎಲ್ಲ ಆದ್ಯತೆಯ ವಿಚಾರಗಳ ಚರ್ಚೆ ನಂತರವೇ ತನ್ವೀರ್​ ಸೇಠ್​ ವಿಚಾರ ಚರ್ಚೆಗೆ  ತೆಗೆದುಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ(ನ.03): ಸಚಿವ ತನ್ವೀರ್ ಸೇಠ್ ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣ ಬೆಳಗಾವಿಯಲ್ಲಿ  ನಡೆಯುತ್ತಿರುವ ಅಧಿವೇಶನದಲ್ಲಿ ಬಿಸಿ ಬಿಸಿ ಚರ್ಚೆಗೆ ವೇದಿಕೆಯಾಯಿತು. ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಬಿಸಿಬಿಸಿ ಚರ್ಚೆಗಳು ಪ್ರತಿಧ್ವನಿಸಿದವು. ಹಾಗಾದರೆ ಕಲಾಪದಲ್ಲಿ    ತನ್ವೀರ್​ ಪ್ರಕರಣದ ಸದ್ದು ಹೇಗಿತ್ತು? ಇಲ್ಲಿದೆ ವಿವರ.

ಟಿಪ್ಪು ಜಯಂತಿ ವೇಳೆ ಮೊಬೈಲ್​ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಶಿಕ್ಷಣ ಸಚಿವರ ನಸೀಬು ವಿಪಕ್ಷಗಳ ಬಾಯಿಗೆ ಆಹಾರವಾಗಿಬಿಟ್ಟಿದ್ದಾರೆ. ಇದನ್ನೇ ರಾಜಕೀಯ ದಾಳವಾಗಿಸಿಕೊಂಡ ವಿಪಕ್ಷಗಳು ಬೆಳಗಾವಿಯ ಕಲಾಪದಲ್ಲಿ   ಮಾತಿನ ಚಕಮಕಿ, ಧರಣಿ  ನಡೆಸಿ ಆರ್ಭಟಿಸಿದರು. ನಿಲುವಳಿ ಸೂಚನೆಯಡಿಯಲ್ಲಿ ವಿಷಯ ಪ್ರಸ್ತಾಪಿಸಿದ ಶೆಟ್ಟರ್, ಎಲ್ಲ ಆದ್ಯತೆಯ ವಿಚಾರಗಳ ಚರ್ಚೆ ನಂತರವೇ ತನ್ವೀರ್​ ಸೇಠ್​ ವಿಚಾರ ಚರ್ಚೆಗೆ  ತೆಗೆದುಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರ ಆರೋಪಗಳಿಗೆ ಉತ್ತರಿಸಿದ ಕಾನೂನು ಸಚಿವ ಜಯಚಂದ್ರ, ಬೇರೆಲ್ಲಾ ಜಯಂತಿ ಆಚರಿಸುತ್ತೇವೆ. ಅದ್ಯಾವುದಕ್ಕೂ ಆಕ್ಷೇಪಿಸದೇ ಕೇವಲ ಟಿಪ್ಪು ಜಯಂತಿಗೆ ವಿರೋಧಿಸುವುದು ರಾಜಕೀಯ ಅಂತ ಜಯಚಂದ್ರ ವಾಗ್ದಾಳಿ ನಡೆಸಿದರು.

ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ವಾಕ್ಸಮರ ನಡೆದು ಗದ್ದಲ ಏರ್ಪಟ್ಟಿತ್ತು. ಸ್ಪೀಕರ್ ಸದನವನ್ನು ೧೫ ನಿಮಿಷ ಮುಂದೂಡಿದರು. ನಂತರ ಕಲಾಪ ಮತ್ತೆ ಆರಂಭವಾದರೂ ಬಿಜೆಪಿ ಸದಸ್ಯರು, ತನ್ವೀರ್ ಸೇಠ್ ವಜಾ ಮಾಡಲು ಒತ್ತಾಯಿಸಿ ಧರಣಿ ಮುಂದುವರಿಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ  ಸ್ಪೀಕರ್  ಕಲಾಪವನ್ನು  ಇವತ್ತು  ೧೧ ಗಂಟೆಗೆ ಮುಂದೂಡಿದರು.

ಇತ್ತ ರಾಯಚೂರಿನಲ್ಲಿ  ನಡೆಯುತ್ತಿರುವ  ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  ಮಹಿಳೆಯೊಬ್ಬರು ವೇದಿಕೆ ಮೇಲಿದ್ದ ಸಚಿವ ತನ್ವೀರ್​ ಸೇಠ್​'ಗೆ ಛೀಮಾರಿಯ ಭಿತ್ತಿ ಪತ್ರ ಪ್ರದರ್ಶಿಸಿದರು. ಒಟ್ಟಿನಲ್ಲಿ ಅಶ್ಲೀಲ ಚಿತ್ರ ವೀಕ್ಷಣೆಯಿಂದಾಗಿ  ಸದನ ಹಾಗೂ ಸಮ್ಮೇಳನದಲ್ಲೂ  ಸಚಿವ ತಸನ್ವೀರ್ ಸೇಠ್​ ಮಾನ ಹೋಗ್ತಿರೋದು ಇನ್ನಿಲ್ಲದ ಮುಜುಗರಕ್ಕೀಡು ಮಾಡಿರುವುದು ಮಾತ್ರ  ಸುಳ್ಳಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೆಲ್ಮೆಟ್ ಇಲ್ಲದ ಬೈಕ್ ಸವಾರನ ಹಿಡಿದ ಪೊಲೀಸ್, ಒಂದೇ ಮಾತಿಗೆ ದಂಡ ವಿಧಿಸದೆ ಬಿಟ್ಟುಕಳುಹಿಸಿದ್ರು
ಗ್ರೀನ್ ಕಾರ್ಡ್ ಸಂದರ್ಶನದ ವೇಳೆ 30 ವರ್ಷಗಳಿಂದ ಅಮೆರಿಕಾದಲ್ಲಿ ವಾಸವಿದ್ದ ಭಾರತೀಯ ಮಹಿಳೆಯ ಬಂಧನ