Latest Videos

#MeToo : ರಾಖಿ ಸಾವಂತ್ ವಿರುದ್ಧ ಕೇಸ್

By Web DeskFirst Published Oct 22, 2018, 3:15 PM IST
Highlights

ನಟಿ ರಾಖಿ ಸಾವಂತ್ ಮೇಲೆ ಇದೀಗ ಗಂಭೀರ ಆರೋಪ ಎದುರಾಗಿದ್ದು 10 ಕೋಟಿ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲು ಮಾಡಲಾಗಿದೆ.

ಮುಂಬೈ : ಮೀ ಟೂ ಬಿರುಗಾಳಿ ಎಲ್ಲೆಡೆ ಬೀಸುತ್ತಿದ್ದು, ಬಾಲಿವುಡ್, ಸ್ಯಾಂಡಲ್ ವುಡ್ ಅಂಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. 

ಮೀ ಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಾಲಿವುಡ್ ನಟಿ ತನುಶ್ರೀ ದತ್ತಾ ನಟಿ ರಾಖಿ ಸಾವಂತ್ ವಿರುದ್ಧ ಮಾನನಷ್ಟ  ಮೊಕದ್ದಮೆ ದಾಖಲಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಆರೋಪ ಮಾಡಿದ್ದು, ಈ ವೇಳೆ ಬೋಲ್ಡ್ ನಟಿ ರಾಖಿ ಸಾವಂತ್ ನಾನಾ ಪಾಟೇಕರ್ ಗೆ ಬೆಂಬಲ ಸೂಚಿಸಿದ್ದರು. 

2008ರ ಹಾರ್ನ್ ಒಕೆ ಪ್ಲೀಸ್ ಚಿತ್ರೀಕರಣದ ವೇಳೆ ತಮ್ಮನ್ನು ನಾನಾ ಪಾಟೇಕರ್ ಅವರಿಂದ ದೌರ್ಜನ್ಯಕ್ಕೆ ಒಳಗಾಗಿದ್ದಾಗಿ ತನುಶ್ರೀ ಹೇಳಿಕೊಂಡಿದ್ದರು.  ಇದಕ್ಕೆ ಪ್ರತಿಕ್ರಿಯೆಯಾಗಿ ನಾನಾಗೆ ಬೆಂಬಲ ನೀಡಿದ್ದ ರಾಖಿ 10 ವರ್ಷಗಳ ಕಾಲ ಆಕೆ ಕೋಮಾದಲ್ಲಿ ಇದ್ದಳಾ ಎಂದು ಹೇಳಿದ್ದರು. ಇದೀಗ ಈ ಸಂಬಂಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗಿದೆ. 
 

click me!