ಪ್ರವಾಹದ ಭೀತಿಯಲ್ಲಿ ತುಮಿಳುನಾಡಿನ ಜನತೆ: ಹವಾಮಾನ ಇಲಾಖೆ ಹೇಳಿದದ್ದೇನು?

By Suvarna Web DeskFirst Published Dec 1, 2016, 3:05 AM IST
Highlights

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು , ತಮಿಳುನಾಡು ಮತ್ತು ಪಾಂಡಿಚೇರಿಯ ಕಡಲೂರು,  ವೇದಾರಣ್ಯಂ ನಡುವೆ ಚಂಡಮಾರುತ ಹಾದು ಹೋಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ನಾಡ ಚಂಡಮಾರುತದಿಂದ  ಚೆನ್ನೈನಲ್ಲಿ  ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪಾಂಡಿಚೇರಿ ಮತ್ತು ತಮಿಳುನಾಡು ಕರಾವಳಿ ಪ್ರದೇಶದಲ್ಲಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಮುನ್ಸೂಚನೆ ನೀಡಲಾಗಿದೆ.

ಚೆನ್ನೈ(ನ.01): ಕಳೆದ ವರ್ಷದ ಅಂತ್ಯಕ್ಕೆ ಉಂಟಾದ ಪ್ರವಾಹದ ಬಡಿತಕ್ಕೆ ಇನ್ನು ಸುಧಾರಿಸಿಕೊಳ್ಳುತ್ತಿರುವ ತಮಿಳುನಾಡು ಜನತೆ ಮತ್ತೆ ಪ್ರವಾಹದ ಭೀತಿಯಲ್ಲಿದ್ದಾರೆ. ಪ್ರವಾಹದ ಮುನ್ಸೂಚನೆ ನೀಡಿರುವ ಹವಮಾನ ಇಲಾಖೆ ನಗರದಲ್ಲಿ 48 ಗಂಟಿಗಳಲ್ಲಿ ಭಾರಿ ಮಳೆಯ ಸೂಚನೆಯನ್ನು ಕೊಟ್ಟಿದ್ದು ಸದ್ಯ ತಮಿಳು ನಾಡಿನ ಪರಿಸ್ಥಿತಿ ಯಾವ ರೀತಿ ಇದೆ ಇಲ್ಲಿದೆ ವಿವರ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡಿನಲ್ಲಿ ನಾಡಾ ಚಂಡಮಾರುತದ ಭೀತಿ

Latest Videos

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು , ತಮಿಳುನಾಡು ಮತ್ತು ಪಾಂಡಿಚೇರಿಯ ಕಡಲೂರು,  ವೇದಾರಣ್ಯಂ ನಡುವೆ ಚಂಡಮಾರುತ ಹಾದು ಹೋಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ನಾಡ ಚಂಡಮಾರುತದಿಂದ  ಚೆನ್ನೈನಲ್ಲಿ  ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪಾಂಡಿಚೇರಿ ಮತ್ತು ತಮಿಳುನಾಡು ಕರಾವಳಿ ಪ್ರದೇಶದಲ್ಲಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಮುನ್ಸೂಚನೆ ನೀಡಲಾಗಿದೆ.

ಸದ್ಯ, ಆಗ್ನೇಯ ದಿಕ್ಕಿನಿಂದ ಪಶ್ಚಿಮಕ್ಕೆ ಗಂಟೆಗೆ ಸುಮಾರು 710 ಕಿಲೋಮೀಟರ್ ವೇಗದಲ್ಲಿ  ಭಾರಿ ಬಿರುಗಾಳಿ ಬೀಸುತ್ತಿದ್ದು , ಅದು ತಮಿಳುನಾಡಿನ ಕಡಲೂರು ಮತ್ತು ವೇದಾರಣ್ಯಂ ನಡುವೆ ಹಾದು ಹೋಗುವಾಗ ಭೂಕುಸಿತವಾಗುವ ಸಂಭವವಿದೆ ಎಂದು ಹವಮಾನ ಇಲಾಖೆ ಎಚ್ಚರಿಸಿದ್ದು ತಿರುನ್ವೇಲಿ, ಕಡಲೂರು ಸೇರಿದಂತೆ ಕೆಲವೆಡೆ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಒಟ್ನಲ್ಲಿ ನೀರಿಗಾಗಿ ಯಾವಗಲೂ ಕೋರ್ಟ್​ ಮೆಟ್ಟಿಲು ಹತ್ತುತ್ತಿದ್ದ ತಮಿಳುನಾಡಿನ ಹಾಹಾಕಾರಕ್ಕೆ ವರುಣ ದೇವ ವರ್ಷದಲ್ಲಿ ಎರಡನೇ ಬಾರಿಗೆ ಪ್ರವಾಹದ ಮೂಲಕ ನೀರನ್ನು ಹರಿಬಿಟ್ಟಿದ್ದಾನೆ . ಇನ್ನಾದರು ನೀರಿನ ಬವಣೆಯಿಂದ ಜನತೆ ಹೊರ ಬರುತ್ತದೆಯೆ ಎಂಬುದು ಒಂದೆಡೆ ಯಕ್ಷ ಪ್ರಶ್ನೆಯಾದರೆ, ಮತ್ತೊಂದೆಡೆ  ಮತ್ತೆ  ಪ್ರವಾಹದಂತ  ಪ್ರಾಕೃತಿಕ ವಿಕೋಪಗಳು  ಆಗದಿದ್ದರೆ ಸಾಕು.

click me!