ಪಾಕಿಸ್ತಾನ ವಿರುದ್ಧ ಗುಡುಗಿದ ಅಫ್ಘಾನ್  ಅಧ್ಯಕ್ಷ

Published : Dec 04, 2016, 03:18 PM ISTUpdated : Apr 11, 2018, 12:53 PM IST
ಪಾಕಿಸ್ತಾನ ವಿರುದ್ಧ ಗುಡುಗಿದ ಅಫ್ಘಾನ್  ಅಧ್ಯಕ್ಷ

ಸಾರಾಂಶ

ನಾವು ಭಯೋತ್ಪಾದನೆಯ ವಿರುದ್ಧ ಹೋರಾಡಬೇಕಾಗಿದೆ. ಗಡಿಯಿಂದಾಚೆಗಿರುವ ಭಯೋತ್ಪಾದನೆಯನ್ನು ಪತ್ತೆ ಹಚ್ಚಿ, ಉಗ್ರ ನಿಗ್ರಹಕ್ಕಾಗಿ ಹೋರಾಡಬೇಕಿದೆ.  ಮಾನ್ಯ ಅಜೀಜ್ ಅವರೇ, ಆ ಹಣವನ್ನು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಬಳಸಿ ಎಂದು ಘನಿ ಹೇಳಿದರು.

ಅಮೃತಸರ (ಡಿ.04): ಹಾರ್ಟ್ ಆಪ್ ಏಷ್ಯಾ ಸಮ್ಮೇಳನದಲ್ಲಿ ಮಾತನಾಡಿದ ಅಫ್ಘಾನಿಸ್ತಾನದ ಅಧ್ಯಕ್ಷ  ಅಶ್ರಫ್ ಘನಿ,  ಅಫ್ಘಾನಿಸ್ತಾನದ ಅಭಿವೃದ್ಧಿಗಾಗಿ 500 ಮಿಲಿಯನ್ ಡಾಲರ್ ನೀಡುತ್ತೇವೆ ಎಂದು ಪಾಕಿಸ್ತಾನ ಭರವಸೆ ನೀಡಿತ್ತು. ಉಗ್ರರಿಗೆ ಆಶ್ರಯ ನೀಡುವ ಪಾಕ್, ಆ ಹಣವನ್ನು ಭಯೋತ್ಪಾದನೆಯ ವಿರುದ್ಧ ಹೋರಾಡುವುದಕ್ಕಾಗಿ ಬಳಸಲಿ  ಎಂದು ಪಾಕ್ ವಿರುದ್ಧ ಗುಡುಗಿದರು. 

ನಾವು ಭಯೋತ್ಪಾದನೆಯ ವಿರುದ್ಧ ಹೋರಾಡಬೇಕಾಗಿದೆ. ಗಡಿಯಿಂದಾಚೆಗಿರುವ ಭಯೋತ್ಪಾದನೆಯನ್ನು ಪತ್ತೆ ಹಚ್ಚಿ, ಉಗ್ರ ನಿಗ್ರಹಕ್ಕಾಗಿ ಹೋರಾಡಬೇಕಿದೆ.  ಮಾನ್ಯ ಅಜೀಜ್ ಅವರೇ, ಆ ಹಣವನ್ನು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಬಳಸಿ ಎಂದು ಘನಿ ಹೇಳಿದರು.

 ಸಮ್ಮೇಳನದಲ್ಲಿ ಪಾಕಿಸ್ತಾನದ ಪ್ರಧಾನಿಯ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್ ಕೂಡಾ ಭಾಗವಹಿಸಿದ್ದು, ಅವರ ಮುಂದೆಯೇ ಘನಿ, ಪಾಕ್‍’ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದ ವರ್ಷ ಅಫ್ಘಾನಿಸ್ತಾನದಲ್ಲಿ ಹೆಚ್ಚಿನ ಸಾವು ನೋವು ಸಂಭವಿಸಿತ್ತು. ಇದು ಸಹಿಸಲಸಾಧ್ಯ. ಕೆಲವರು ಉಗ್ರರಿಗೆ ಅಭಯ ನೀಡುತ್ತಾರೆ. ನಾನು ಯಾರ ಮೇಲೂ ಆರೋಪ ಮಾಡುತ್ತಿಲ್ಲ. ನನಗೆ ಸ್ಪಷ್ಟನೆ ಬೇಕು ಎಂದು  ಘನಿ ಗುಡುಗಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅತೀ ದೊಡ್ಡ ಪರಾರಿಗಳು ನಾವೇ, ಮಲ್ಯ ಜೊತೆಗೆ ವಿಡಿಯೋ ಮೂಲಕ ಭಾರತ ಅಣಕಿಸಿದ ಲಲಿತ್ ಮೋದಿ
ಟಿಕೆಟ್ ಇಲ್ಲದ ಪ್ರಯಾಣಿಕರಿಂದ ಈ ವರ್ಷ ಭಾರತೀಯ ರೈಲ್ವೇ ವಸೂಲಿ ಮಾಡಿದ ದಂಡ ಎಷ್ಟು?