
ಚೆನೈ (ಫೆ.06): ತಮಿಳುನಾಡು ಕರ್ನಾಟಕದಿಂದ ಕಾವೇರಿ ನೀರು ಪಡೆಯಲು ಸಾಧ್ಯವೇ ಇಲ್ಲ ಎಂದು ರಾಜ್ಯಸಭಾ ಸದಸ್ಯ ಡಾ.ಸುಬ್ರಮಣಿಯನ್ ಸ್ವಾಮಿ ಪ್ರತಿಪಾದಿಸಿದ್ದಾರೆ.
ತಮಿಳಿಗರು ತಾವು ಬೆಳೆದ ಸಾಂಬಾ ಬೆಳೆ ಉಳಿಸಿಕೊಳ್ಳಲು ಕರ್ನಾಟಕದ ಕದ ತಟ್ಟುತ್ತಿದ್ದಾರೆ. ಬದಲಾಗಿ ಉಪ್ಪುನೀರನ್ನು ಸಿಹಿನೀರನ್ನಾಗಿ ಪರಿವರ್ತಿಸುವ ಸ್ಥಾವರಗಳನ್ನು ಕರಾವಳಿ ತೀರದುದ್ದಕ್ಕೂ ಸ್ಥಾಪಿಸುವುದರಿಂದ ರಾಜ್ಯ-ರಾಜ್ಯಗಳ ನೀರಿನ ವ್ಯಾಜ್ಯ ಬಗೆಹರಿಸಬಹುದು. ಜನರು ತಮಗೆ ಕಾವೇರಿ ಬೇಕೇ, ಅಥವಾ ನೀರು ಬೇಕೇ ಎಂಬುದನ್ನು ಮೊದಲು ನಿರ್ಧರಿಸಬೇಕು. ಅವರು ಕಾವೇರಿಯನ್ನೇ ಬಯಸುತ್ತಿದ್ದರೆ ಖಂಡಿತ ಅವರು ನೀರು ಪಡೆಯಲು ಸಾಧ್ಯವಿಲ್ಲ. ಒಂದು ವೇಳೆ ಅವರು ನೀರನ್ನು ಮಾತ್ರ ಬಯಸುತ್ತಿದ್ದರೆ, ಭಾರತದಲ್ಲಿರುವ ಅಪರಿಮಿತ ಪ್ರಮಾಣದ ಉಪ್ಪುನೀರನ್ನು ಸಿಹಿನೀರನ್ನಾಗಿ ಪರಿವರ್ತಿಸಬಹುದು. ಉಪ್ಪುನೀರನ್ನು ಸಿಹಿನೀರನ್ನಾಗಿ ಪರಿವರ್ತಿಸುವ ಇಸ್ರೇಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ನೀರಿನ ವಿವಾದವೇ ಇರುವುದಿಲ್ಲ ಎಂದು ಕಾವೇರಿ ವಿವಾದದ ಕುರಿತು ಪ್ರತಿಕ್ರಿಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.