ಪ್ರವಾಸಿ ಕೈಪಿಡಿಯಲ್ಲಿ ತಾಜ್ ಕೈಬಿಟ್ಟ ಯೋಗಿ!

By Suvarna Web DeskFirst Published Oct 3, 2017, 2:48 PM IST
Highlights

ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಬಿಡುಗಡೆಗೊಳಿಸಿರುವ ನೂತನ ಪ್ರವಾಸಿ ಕೈಪಿಡಿಯಲ್ಲಿ, ತಾಜ್‌ಮಹಲ್ ಅನ್ನು ಕೈಬಿಟ್ಟಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಲಖನೌ(ಅ.03): ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಬಿಡುಗಡೆಗೊಳಿಸಿರುವ ನೂತನ ಪ್ರವಾಸಿ ಕೈಪಿಡಿಯಲ್ಲಿ, ತಾಜ್‌ಮಹಲ್ ಅನ್ನು ಕೈಬಿಟ್ಟಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಪ್ರವಾಸೋದ್ಯಮ ಸಚಿವೆ ರೀಟಾ ಬಹುಗುಣ ಹೊಸ ಕೈಪಿಡಿ ಬಿಡುಗಡೆಗೊಳಿಸಿದ್ದಾರೆ. ಇದರಲ್ಲಿ ಸಿಎಂ ಯೋಗಿ ಆದಿತ್ಯನಾಥ ಅರ್ಚಕರಾಗಿರುವ ಗೋರಖ್‌'ಪುರ ದೇವಸ್ಥಾನ ಸೇರಿದಂತೆ, ರಾಮಾಯಣದಲ್ಲಿ ಪ್ರಸ್ತಾಪ ವಿರುವ ಹಲವು ಪ್ರದೇಶಗಳ ವಿವರವಿದೆ.

Latest Videos

ಆದರೆ, ತಾಜನ್ನು ನಿರ್ಲಕ್ಷಿಸಿಲ್ಲ, ಇದು ತಮ್ಮ ಇಲಾಖೆಯಿಂದ ನಡೆಯಲಿರುವ ಯೋಜನೆಗಳ ಮಾಹಿತಿ ಮಾತ್ರ ಎಂದು ಪ್ರವಾಸೋದ್ಯಮ ಇಲಾಖೆ ಸ್ಪಷ್ಟಪಡಿಸಿದೆ.

 

click me!