ಮಾರುಕಟ್ಟೆಗೆ ಬಂದಿದೆ ಪ್ಲಾಸ್ಟಿಕ್‌ ಕೋಸು!

Published : May 09, 2017, 07:24 AM ISTUpdated : Apr 11, 2018, 01:08 PM IST
ಮಾರುಕಟ್ಟೆಗೆ ಬಂದಿದೆ ಪ್ಲಾಸ್ಟಿಕ್‌ ಕೋಸು!

ಸಾರಾಂಶ

ಯೂ ಟ್ಯೂಬ್‌ನಲ್ಲಿ ನಕಲಿ ವಸ್ತುಗಳ ಬಗ್ಗೆ ನೋಡುತ್ತಿದ್ದ ವೇಳೆ ಮಹಿಳೆಯೊಬ್ಬರಿಗೆ ಪ್ಲಾಸ್ಟಿಕ್‌ನಿಂದ ತಯಾರಿಸಿದ ದಿನನಿತ್ಯದ ವಸ್ತುಗಳ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ವೇಳೆ ಮನೆಗೆ ತಂದಿದ್ದ ಕೋಸುಗಡ್ಡೆಯನ್ನು ಪರೀಕ್ಷಿಸಲೆಂದು ಮಹಿಳೆ, ಕೋಸುಗಡ್ಡೆಯನ್ನು ಸುಮ್ಮನೆ ಕತ್ತರಿಸಿದಾಗ, ಅದು ನೈಸರ್ಗಿಕ ಕೋಸುಗಡ್ಡೆಯಂತೆ ಸುಲಭವಾಗಿ ಕತ್ತರಿಸಲು ಬಂದಿಲ್ಲ.!

ನವದೆಹಲಿ: ಪ್ಲಾಸ್ಟಿಕ್‌ ಸಕ್ಕರೆ, ಅಕ್ಕಿ ಮಾರುಕಟ್ಟೆಗೆ ಬಂದಿದ್ದಾಯ್ತು. ಇದೀಗ ಪ್ಲಾಸ್ಟಿಕ್‌ ತರಕಾರಿಯ ಸರದಿ. ನಿಜ. ದೆಹಲಿಯಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ತರಕಾರಿ ಮಾರುಕಟ್ಟೆಯಲ್ಲಿ ಎಗ್ಗಿಲ್ಲದೇ ಮಾರಾಟವಾಗುತ್ತಿದೆ ಎಂದು ಮಹಿಳೆಯೊಬ್ಬರು ದೂರಿದ್ದಾರೆ.

ಯೂ ಟ್ಯೂಬ್‌ನಲ್ಲಿ ನಕಲಿ ವಸ್ತುಗಳ ಬಗ್ಗೆ ನೋಡುತ್ತಿದ್ದ ವೇಳೆ ಮಹಿಳೆಯೊಬ್ಬರಿಗೆ ಪ್ಲಾಸ್ಟಿಕ್‌ನಿಂದ ತಯಾರಿಸಿದ ದಿನನಿತ್ಯದ ವಸ್ತುಗಳ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ವೇಳೆ ಮನೆಗೆ ತಂದಿದ್ದ ಕೋಸುಗಡ್ಡೆಯನ್ನು ಪರೀಕ್ಷಿಸಲೆಂದು ಮಹಿಳೆ, ಕೋಸುಗಡ್ಡೆಯನ್ನು ಸುಮ್ಮನೆ ಕತ್ತರಿಸಿದಾಗ, ಅದು ನೈಸರ್ಗಿಕ ಕೋಸುಗಡ್ಡೆಯಂತೆ ಸುಲಭವಾಗಿ ಕತ್ತರಿಸಲು ಬಂದಿಲ್ಲ. ನಂತರ ಎಲೆಯನ್ನು ಗ್ಯಾಸ್‌ಸ್ಟೌವ್‌ನಲ್ಲಿ ಬೆಂಕಿಗೆ ಹಿಡಿದಾಗ, ಹಲವು ಸೆಕೆಂಡ್‌ಗಳ ಬಳಿಕವೂ ಯಾವುದೇ ವ್ಯತ್ಯಾಸ ಕಾಣದೇ ಹಾಗೆಯೇ ಉಳಿದುಕೊಂಡಿದೆ.

ಇದು ಮಹಿಳೆಯನ್ನು ಗಾಬರಿಗೆ ಗುರಿ ಮಾಡಿದ್ದು, ಈ ಕುರಿತು ವಿಡಿಯೋವನ್ನು ಆಕೆ ಯೂ ಟ್ಯೂಬ್‌ನಲ್ಲಿ ಹಾಕಿದ್ದಾರೆ. ಮನೆಯ ಬಳಿಯೇ ಇದ್ದ ಖ್ಯಾತನಾಮ ಮಳಿಗೆಯೊಂದರಿಂದ ಈ ಕೋಸು ಖರೀದಿಸಿ ತಂದಿದ್ದೆ. ಪರೀಕ್ಷೆ ಬಳಿಕ ಅದು, ಪ್ಲಾಸ್ಟಿಕ್‌ನಿಂದ ತಯಾರಿಸಿದ್ದು ಎಂದು ಕಂಡುಬಂದಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡೀಮ್ಡ್ ಫಾರೆಸ್ಟ್ ಪರಿವರ್ತಿಸಿದರೆ ರಾಜ್ಯದಲ್ಲಿ 6 ಲಕ್ಷ ರೈತರಿಗೆ ಅನುಕೂಲ: ಸಂಸದ ಬೊಮ್ಮಾಯಿ
ಗಂಗಾವತಿಯಲ್ಲಿ ಹಿರಿಯ ವಕೀಲರ ಮೇಲೆ ಮುಸ್ಲಿಂ ಯುವಕನಿಂದ ಹಲ್ಲೆ: ಠಾಣೆಗೆ ಮುತ್ತಿಗೆ ಹಾಕಿದ ವಕೀಲರು