‘ನಾವು ಮೂತ್ರ ಮಾಡಿದ್ರೆ ವೀರಶೈವರು ಕೊಚ್ಚಿ ಹೋಗ್ತಾರೆ’ ಮತ್ತೆ ವಿವಾದಕ್ಕೆ ಸಿಲುಕಿದ ಕೂಡಲಸಂಗಮ ಶ್ರೀಗಳು

Published : Nov 10, 2017, 12:32 PM ISTUpdated : Apr 11, 2018, 01:07 PM IST
‘ನಾವು ಮೂತ್ರ ಮಾಡಿದ್ರೆ ವೀರಶೈವರು ಕೊಚ್ಚಿ ಹೋಗ್ತಾರೆ’ ಮತ್ತೆ ವಿವಾದಕ್ಕೆ ಸಿಲುಕಿದ ಕೂಡಲಸಂಗಮ ಶ್ರೀಗಳು

ಸಾರಾಂಶ

ಹುಬ್ಬಳ್ಳಿಯಲ್ಲಿ ಕಳೆದ ವಾರ ನಡೆದ ಲಿಂಗಾಯತ ಸಮಾವೇಶದಲ್ಲಿ ವಿವಾದಿತ ಹೇಳಿಕೆ ನೀಡಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಈಗ ಹೊಸದೊಂದು ವಿವಾದದಲ್ಲಿ ಸಿಲುಕಿದ್ದಾರೆ.

ಬಾಗಲಕೋಟೆ: ಹುಬ್ಬಳ್ಳಿಯಲ್ಲಿ ಕಳೆದ ವಾರ ನಡೆದ ಲಿಂಗಾಯತ ಸಮಾವೇಶದಲ್ಲಿ ವಿವಾದಿತ ಹೇಳಿಕೆ ನೀಡಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಈಗ ಹೊಸದೊಂದು ವಿವಾದದಲ್ಲಿ ಸಿಲುಕಿದ್ದಾರೆ.

‘ಲಿಂಗಾಯತರು ಮೂತ್ರ ಮಾಡಿದರೆ ವೀರಶೈವರು ಕೊಚ್ಚಿ ಹೋಗುತ್ತಾರೆ’ ಎಂದು ಶ್ರೀಗಳು ಆಡಿದ್ದಾರೆನ್ನಲಾದ ಮಾತುಗಳು ಈಗ ವೈರಲ್ ಆಗಿವೆ. ಆದರೆ ಆ ಧ್ವನಿ ತಮ್ಮದಲ್ಲ. ಆ ಆಡಿಯೋಗೂ ತಮಗೂ ಸಂಬಂಧವಿಲ್ಲ ಎಂದು ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.

ಎರಡು ವರ್ಷಗಳ ಹಿಂದೆ ಮಹದಾಯಿ ಹೋರಾಟದ ಸಂದರ್ಭದಲ್ಲಿ ನರಗುಂದದ ಸೊಬರದ ಮಠ ಶ್ರೀಗಳು ‘ಕೂಡಲಸಂಗಮ ಶ್ರೀಗಳು ಜಾತಿ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದರು. ಈ ಬಗ್ಗೆ ಕೊಪ್ಪಳದ ಭಕ್ತರೊಬ್ಬರೊಂದಿಗೆ ಕೂಡಲಸಂಗಮ ಶ್ರೀಗಳು ಮೊಬೈಲ್‌ನಲ್ಲಿ ಮಾತನಾಡಿದ್ದಾರೆನ್ನಲಾದ ಆಡಿಯೋದಲ್ಲಿ ‘ಬಹುಸಂಖ್ಯಾತರಾದ ನಾವೆಲ್ಲ ಮೂತ್ರ ಮಾಡಿದರೆ ಅವರೆಲ್ಲ ಕೊಚ್ಚಿ ಹೋಗುತ್ತಾರೆ. ಅವರಿಗೆ ನಾವು ಹೆದರಬೇಕಾಗಿಲ್ಲ’ ಎನ್ನುವ ಸಂಭಾಷಣೆ ಇತ್ತು. ಈ ಆಡಿಯೋ ವೈರಲ್ ಆಗಿತ್ತು.

ಈ ಆರೋಪವನ್ನು ಅಂದೇ ಶ್ರೀಗಳು ಅಲ್ಲಗಳೆದಿದ್ದರು. ಆದರೆ ನ.5ರ ಲಿಂಗಾಯತ ಸಮಾವೇಶದ ಬಳಿಕ ಮತ್ತೆ ಆಡಿಯೋ ವೈರಲ್ ಆಗಿದೆ. ಈ ಬಗ್ಗೆ ದೂರು ದಾಖಲಿಸಲಾಗುವುದು ಎಂದು ಶ್ರೀಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರ್ಜುನ್ ಜನ್ಯಾ ನಿರ್ದೇಶನ, ಶಿವಣ್ಣ-ಉಪೇಂದ್ರ ಜೋಡಿಯ '45' ಟ್ರೈಲರ್ ನೋಡಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹೇಳಿದ್ದೇನು?
ಟ್ರಾಫಿಕ್ ಸಮಸ್ಯೆ ಮಾತ್ರವಲ್ಲ, ಇಂಗಾಲ ಹೊರಸೂಸುವಿಕೆಯಲ್ಲಿ ಕೂಡ ದೇಶದಲ್ಲೇ ಅಗ್ರ ಸ್ಥಾನ ಪಡೆದ ಬೆಂಗಳೂರು!