ಅನಾಥ ವೃದ್ಧೆಗೆ ಆಶ್ರಯ ದೊರಕಿಸಿದ ಕನ್ನಡಪ್ರಭ, ಸುವರ್ಣ ನ್ಯೂಸ್‌

By Web Desk  |  First Published Jul 29, 2019, 9:08 AM IST

ಬಾಗಲಕೋಟೆ ಹಳೇ ಬಸ್‌ ನಿಲ್ದಾಣದಲ್ಲಿ ಅನಾಥವಾಗಿ ಕಾಲ ಕಳೆಯುತ್ತಿರುವ ವೃದ್ಧೆಯೊಬ್ಬಳನ್ನು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ನಿಂದ ಆಶ್ರಯ ಒದಗಿಸಲಾಗಿದೆ. 


ಬಾಗಲಕೋಟೆ [ಜು.29]: ನಾಲ್ಕೈದು ದಿನಗಳಿಂದ ಬಾಗಲಕೋಟೆ ಹಳೇ ಬಸ್‌ ನಿಲ್ದಾಣದಲ್ಲಿ ಅನಾಥವಾಗಿ ಕಾಲ ಕಳೆಯುತ್ತಿರುವ ವೃದ್ಧೆಯೊಬ್ಬಳನ್ನು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಮುದಾಳತ್ವದಲ್ಲಿ ನಗರದ ವಸತಿ ರಹಿತರಿಗೆ ಇರುವ ಆಶ್ರಯಧಾಮಕ್ಕೆ ಸೇರಿಸಲಾಗಿದೆ.

"

Tap to resize

Latest Videos

ಮೂಲತಃ ವಿಜಯಪುರದವಳು ಎಂದು ಹೇಳಿಕೊಳ್ಳುವ ಕಾಜಾಬಿ ಸುಮಾರು 65 ಆಸುಪಾಸು ವಯಸ್ಸಿನವರು. ಈಕೆ ಕಳೆದ ನಾಲ್ಕೈದು ದಿನಗಳಿಂದ ನಗರದ ಹಳೇ ಬಸ್‌ ನಿಲ್ದಾಣದಲ್ಲೇ ಇದ್ದಳು. ಈಕೆಯನ್ನು ಯಾರೂ ಕೂಡ ಕೇಳೋರಿರಲಿಲ್ಲ. ನಿತ್ಯ ಬಸ್‌ನಿಲ್ದಾಣಕ್ಕೆ ಬಂದು ಹೋಗುವ ಪ್ರಯಾಣಿಕರೇ ಈಕೆಯ ಸ್ಥಿತಿ ಕಂಡು ಮಮ್ಮಲ ಮರುಗಿ ತಮ್ಮಲ್ಲಿದ್ದ ಆಹಾರ ಕೊಟ್ಟು ಹೋಗುತ್ತಿದ್ದರು.

"

ಈ ವಿಷಯ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಗಮನಕ್ಕೆ ಬಂದಿದೆ. ತಕ್ಷಣ ಆಕೆಯನ್ನು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಸ್ಥಾಪಿತವಾಗಿರುವ ನಗರ ವಸತಿ ರಹಿತರಿಗೆ ಇರುವಂತಹ ಆಶ್ರಯಧಾಮಕ್ಕೆ ಅಜ್ಜಿಯನ್ನು ತಂದು ಬಿಡಲಾಗಿದೆ. ಆಕೆಗೆ ವಸತಿ ಸಹಿತ ಊಟೋಪಚಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆಶ್ರಯಧಾಮದವರು ಅಜ್ಜಿಯನ್ನು ಪೋಷಕರಿಗೆ ಒಪ್ಪಿಸುವ ಭರವಸೆ ನೀಡಿದ್ದಾರೆ.

click me!