ಕೊಡಗಿನಲ್ಲಿ 890 ಮರ ಕಡಿತಕ್ಕೆ ಬ್ರೇಕ್: ಸುವರ್ಣ ನ್ಯೂಸ್ ಇಂಪ್ಯಾಕ್ಟ್

Published : Jun 07, 2019, 02:56 PM ISTUpdated : Jun 07, 2019, 02:58 PM IST
ಕೊಡಗಿನಲ್ಲಿ 890 ಮರ ಕಡಿತಕ್ಕೆ ಬ್ರೇಕ್: ಸುವರ್ಣ ನ್ಯೂಸ್ ಇಂಪ್ಯಾಕ್ಟ್

ಸಾರಾಂಶ

ಪ್ರವಾಹದಿಂದ ನಲುಗಿದ್ದ ಕೊಡಗು, ಆದರೂ ಪಾಠ ಕಲಿಯದ ಜಿಲ್ಲಾಡಳಿತ| ದುರಂತ ಸಂಭವಿಸಿ ವರ್ಷ ಕಳೆದಿಲ್ಲ ಮತ್ತೆ 890 ಮರಗಳನ್ನು ಕಡಿಯಲು ಅನುಮತಿ| ಮರ ಕಡಿಯಿರಿ, ರೆಸಾರ್ಟ್ ನಿರ್ಮಿಸಿ| ಜಿಲ್ಲಾಡಳಿತದ ಆದೇಶಕ್ಕೆ ಸಿಎಂ ಕುಮಾರಸ್ವಾಮಿ ಬ್ರೇಕ್| ಮರ ಕಡಿಯುವುದನ್ನು ಈಗಲೇ ನಿಲ್ಲಿಸಿ, ಜಿಲ್ಲಾಡಳಿತಕ್ಕೆ ಸಿಎಂ ಖಡಕ್ ಆದೇಶ| ಇದು ಸುವರ್ಣ ನ್ಯೂಸ್ ಇಂಪ್ಯಾಕ್ಟ್

ಕೊಡಗು[ಜೂ.07]: ಕಳೆದ ವರ್ಷವಷ್ಟೇ ಸುರಿದಿದ್ದ ಭಾರೀ ಮಳೆಯಿಂದ ಪ್ರವಾಹಕ್ಕೀಡಗಿದ್ದ ಕೊಡಗು ಹಲವಾರು ಸಮಸ್ಯೆಗಳನ್ನೆದುರಿಸಿತ್ತು. ನೀರಿನ ರಭಸಕ್ಕೆ ಭೂಕುಸಿತ ಸಂಭವಿಸಿದ್ದು, ಕಟ್ಟಡಗಳೂ ಕೊಚ್ಚಿ ಹೋಗಿದ್ದವು. ಬಹುತೇಕರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದರು. ಬಳಿಕ ನಡೆದ ಅಧ್ಯಯನಗಳಲ್ಲಿ ಕೊಡಗಿನಲ್ಲಿ ಮರಗಳ ನಾಶ, ರೆಸಾರ್ಟ್ ನಿರ್ಮಾಣದಿಂದಾಗಿ ಈ ಪರಿಸ್ಥಿತಿ ಎದುರಾಗಿತ್ತೆಂಬ ಅಂಶ ಬಯಲಾಗಿತ್ತು. ಈ ಭೀಕರ ಘಟನೆ ನಡೆದು ಇನ್ನೂ ಒಂದು ವರ್ಷ ಕಳೆದಿಲ್ಲ, ಅಷ್ಟರಲ್ಲಾಗಲೇ ಕೊಡಗು ಜಿಲ್ಲಾಡಳಿತ ಇಂತಹ ದುರಂತಗಳು ಸಂಭವಿಸದಂತೆ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುವ ಬದಲಾಗಿ ಇನ್ನಷ್ಟು ಮರಗಳನ್ನು ಕಡಿಯಲು ಅನುಮತಿ ನೀಡಿತ್ತು.

"

ಹೌದು ಈ ದುರಂತದಿಂದ ಪಾಠ ಕಲಿಯದ ಕೊಡಗು ಜಿಲ್ಲಾಡಳಿತ ಇಲ್ಲಿನ 68 ಎಕರೆ ಪ್ರದೇಶವನ್ನು ಆಂಧ್ರ ಮೂಲದ ಉದ್ಯಮಿಗೆ ನೀಡಿತ್ತು. ಅತ್ತ ಅರಣ್ಯ ಇಲಾಖೆ 890 ಮರಗಳಿಗೆ ಕೊಡಲಿ ಹಾಕಲು ಅನುಮತಿ ನೀಡುವ ಮೂಲಕ ಮತ್ತೊಂದು ದುರಂತಕ್ಕೆ ಹಾದಿ ಮಾಡಿ ಕೊಡಲು ತಯಾರಾಗಿತ್ತು. 

"

ಈ ಕುರಿತಾಗಿ ಸುವರ್ಣ ನ್ಯೂಸ್ ವರದಿ ಮಾಡಿದ್ದು, ಮರಗಳ ಮಾರಣಹೋಮ ತಡೆಯಲು ಯತ್ನಿಸಿತ್ತು. ಈ ಪ್ರಯತ್ನಕ್ಕೆ ಫಲ ಲಭಿಸಿದ್ದು, ಮರಗಳ ನಾಶಕ್ಕೆ ಸಿಎಂ ಕುಮಾರಸ್ವಾಮಿ ಬ್ರೇಕ್ ಹಾಕಿದ್ದಾರೆ. 890 ಮರಗಳನ್ನು ಕಡಿಯುವ ಆದೇಶವನ್ನು ಹಿಂಪಡೆದಿದ್ದು, ಮರಗಳ ಮಾರಣ ಹೋಮವನ್ನು ಕೂಡಲೇ ನಿಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಖಡಕ್ ಆದೇಶ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದ್ವೇಷ ಭಾಷಣ ಶಾಸನ ಕಾಂಗ್ರೆಸ್ ಕ್ರೂರ ಸಂಪ್ರದಾಯದ ಪ್ರತಿಬಿಂಬ: ಪ್ರಲ್ಹಾದ್ ಜೋಶಿ ಕಿಡಿ
ಪ್ರೀತಿಯಿಂದ ಊಟಕ್ಕೆ ಕರೀತಾರೆ ಬೇಡ ಅನ್ನೋಕಾಗುತ್ತಾ: ಡಿ.ಕೆ.ಶಿವಕುಮಾರ್