56 ಟನ್ ತೂಕದ ಬ್ರಿಡ್ಜ್ ಮಾಯ: ಕಳ್ಳರ ಕಾಟವಂತೆ ಮಾರಾಯ!

By Web DeskFirst Published Jun 7, 2019, 2:54 PM IST
Highlights

ಕಬ್ಬಿಣದ ಸೇತುವೆಯನ್ನೇ ಕದ್ದೊಯ್ದ ಖದೀಮರು| ಕಬ್ಬಿಣಕ್ಕಾಗಿ ಸೇತುವೆಯನ್ನೇ ಮುರಿದ ಕಳ್ಳರು| ಉಂಬಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆಯ ಮಧ್ಯದ ಭಾಗ ಮಾಯ| ಇದು ಕಳ್ಳರ ಕೈಚಳಕ ಅಂತಾರೆ ರಷ್ಯಾದ ಮುರ್ಮಾನಸ್ಕ್ ಗ್ರಾಮದ ಜನತೆ| 56 ಟನ್ ತೂಕದ ಬ್ರಿಡ್ಜ್ ಏಕಾಏಕಿ ಮಾಯವಾಗಿದ್ದು ಹೇಗೆ?|

ಮುರ್ಮಾನಸ್ಕ್(ಜೂ.07): ಏನೋ ರಸ್ತೆ ಬದಿ ಬಿದ್ದ ಇಷ್ಟುದ್ದದ ಕಬ್ಬಣದ ತುಂಡನ್ನು ಹೊತ್ತೊಯ್ದರು ಎಂದರೆ ನಂಬಬಹುದು. ರೈಲು ಹಳಿಗಳ ಮಧ್ಯೆ ಬಿದ್ದಿರುವ ಕಬ್ಬಿಣದ ಕಂಬಿಯನ್ನು ಕದ್ದರು ಎಂದರೆ ಹೌದೆನ್ನಬಹುದು. ಆದರೆ ಬರೋಬ್ಬರಿ 56 ಟನ್ ತೂಕದ ಕಬ್ಬಿಣದ ಸೇತುವೆಯನ್ನೇ ಕಳ್ಳರು ಕದ್ದೊಯ್ದರು ಎಂದರೆ ನಂಬಲು ಸಾಧ್ಯವೇ?.

ಹೌದು ಎನ್ನುತ್ತಾರೆ ರಷ್ಯಾದ ಮುರ್ಮಾನಸ್ಕ್ ಎಂಬ ಗ್ರಾಮದ ಜನರು. ಇಲ್ಲಿ ನಿರ್ಮಿಸಲಾಗಿರುವ 56 ಟನ್ ತೂಕದ ಕಬ್ಬಿಣದ ಸೇತುವೆಯ ಮಧ್ಯದ ಭಾಗ ಮುರಿದಿದ್ದು, ಕಬ್ಬಿಣ ಕಳ್ಳರು ಈ ಸೇತುವೆಯನ್ನು ಮುರಿದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಕುರಿತು ರಷ್ಯಾದ ಸಾಮಾಜಿಕ ಜಾಲತಾಣ VK-a ವರದಿ ಮಾಡಿದ್ದು, 75 ಅಡಿ ಉದ್ದದ ಸೇತುವೆಯ ಮಧ್ಯಭಾಗವನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ ಎಂದು ಹೇಳಿದೆ.

ಮೊದಲು ಸೇತುವೆಯ ಮಧ್ಯಭಾಗವನ್ನು ಕತ್ತರಿಸಿ ಅದನ್ನು ಉಂಬಾ ನದಿಯಲ್ಲಿ ಬಿಟ್ಟು, ಬಳಿಕ ಅದನ್ನು ನದಿಯಿಂದ ಹೊರತೆಗೆದು ಕದ್ದೊಯ್ದಿದ್ದಾರೆ ಎಂದು ಹೇಳಲಾಗಿದೆ.

click me!