ಸುವರ್ಣ ನ್ಯೂಸ್ ಇಂಪ್ಯಾಕ್ಟ್ : ಅನ್ನಭಾಗ್ಯದ ರೇಷನ್ ಸರ್ಕಾರದ ವಶಕ್ಕೆ

Published : Dec 10, 2016, 02:42 PM ISTUpdated : Apr 11, 2018, 12:41 PM IST
ಸುವರ್ಣ ನ್ಯೂಸ್ ಇಂಪ್ಯಾಕ್ಟ್ : ಅನ್ನಭಾಗ್ಯದ ರೇಷನ್ ಸರ್ಕಾರದ ವಶಕ್ಕೆ

ಸಾರಾಂಶ

ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಬಡವರ ಅನ್ನ ಭಾಗ್ಯಕ್ಕೆ ಕನ್ನ ಹಾಕುತ್ತಿದ್ದ ಖದೀಮರನ್ನ ಚೇಸ್​ ಮಾಡಿ ಹಿಡಿದು ದಾವಣಗೆರೆಯ ರೇಷನ್​ ಮಾಫಿಯಾದ ಕಿಂಗ್​ಪಿನ್​ಗಳಾದ ಜಯಣ್ಣ ಹಾಗೂ ಉಮಾಪತಿ ನಡೆಸುತ್ತಿದ್ದ ಕರಾಳ ದಂಧೆಯನ್ನು ಬಟಾಬಯಲು ಮಾಡಿತ್ತು.  

ಬಡವರ ಅನ್ನದ ಬಟ್ಟಲು ಸೇರಬೇಕಾದ ಅನ್ನಭಾಗ್ಯದ ಸೌಭಾಗ್ಯವನ್ನ ರೇಷನ್​ ಅಂಗಡಿಯಿಂದಲೇ ಕದ್ದು ಮಾರುತ್ತಿದ್ದ ಭ್ರಷ್ಟರ ಬಣ್ಣ ಬಯಲು ಮಾಡಿತ್ತು ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ. ಈ ಕಾರ್ಯಾಚರಣೆಗೆ ಕೈಜೋಡಿಸಿರೋ ಆಹಾರ ಇಲಾಖೆ ಅನ್ನಕ್ಕೆ ಕನ್ನ ಹಾಕುತ್ತಿದ್ದವರಿಗೆ ಭರ್ಜರಿ ಗುನ್ನ ಕೊಟ್ಟಿದೆ.

ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಬಡವರ ಅನ್ನ ಭಾಗ್ಯಕ್ಕೆ ಕನ್ನ ಹಾಕುತ್ತಿದ್ದ ಖದೀಮರನ್ನ ಚೇಸ್​ ಮಾಡಿ ಹಿಡಿದು ದಾವಣಗೆರೆಯ ರೇಷನ್​ ಮಾಫಿಯಾದ ಕಿಂಗ್​ಪಿನ್​ಗಳಾದ ಜಯಣ್ಣ ಹಾಗೂ ಉಮಾಪತಿ ನಡೆಸುತ್ತಿದ್ದ ಕರಾಳ ದಂಧೆಯನ್ನು ಬಟಾಬಯಲು ಮಾಡಿತ್ತು.  ಜೊತೆಗೆ ಈ ಖದೀಮರಿಗೆ ಸಾಥ್​ ಕೊಟ್ಟು ಅವರ ದಂಧೆಗೆ ಸಹಕರಿಸುತ್ತಿದ್ದ, ದಾವಣಗೆರೆ ಜಿಲ್ಲೆಯ ಪ್ರಭಾವಿ ಶಾಸಕರೊಬ್ಬರ ಅಕ್ಕಿ ಮಿಲ್​ ಶಂಕರ್​ ರೈಸ್​ ಮಿಲ್​ನ ಕರಾಳ ಮುಖವನ್ನು ಕಳಚಿತ್ತು.

ಕವರ್​ಸ್ಟೋರಿ ಕಾರ್ಯಾಚರಣೆಗೆ ಆಹಾರ ಇಲಾಖೆ ಅಧಿಕಾರಿಗಳು ಸಾಥ್​ ನೀಡಿ ದಾವಣಗೆರೆ ಹರಿಹರ ಮಧ್ಯೆ ಇರೋ ಉಮಾಪತಿಯ ಗೋಡೌನ್​ ಮೇಲೆ ದಾಳಿ ಮಾಡಿ, ಅಲ್ಲಿನ ಆಹಾರ ಇಲಾಖೆಯ ಚೀಲದ ಜೊತೆ ತುಂಬಿಸಿಟ್ಟಿದ್ದ 115 ಅಕ್ಕಿ ಹಾಗೂ 4 ಕ್ವಿಂಟಾಲ್​ ರಾಗಿ ವಶ ಪಡಿಸಿಕೊಂಡು ಗೋಡೌನ್​ ಮಾಲೀಕ ಉಮಾಪತಿ ಮೇಲೆ ಕೇಸ್​ ದಾಖಲಿಸಿದ್ದಾರೆ.

ಸುವರ್ಣ ನ್ಯೂಸ್​ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತಪಡಿಸಿದ ಆಹಾರ ಸಚಿವ ಯು.ಟಿ ಖಾದರ್​ ರೇಷನ್​ ಕಳ್ಳರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಜೊತೆಗೆ ರಾಜ್ಯದಲ್ಲಿರೋ ಇನ್ನಷ್ಟು ರೇಷನ್​ ಕಳ್ಳರ ಮಾಫಿಯಾಕ್ಕೆ ಬ್ರೇಕ್​ ಹಾಕಲು ಸರ್ಕಾರ ಮುಂದಾಗಬೇಕು.

ವರದಿ:  ವರದ್​ರಾಜ್​ ಹಾಗೂ ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್​

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನೇಕಲ್‌ನಲ್ಲಿ ಭೀಕರ ಅಪಘಾತ; 20 ವಾಹನಕ್ಕೆ ಕಂಟೈನರ್ ಡಿಕ್ಕಿ, 2ಕ್ಕೂ ಹೆಚ್ಚು ಸಾವು, ಹಲವರು ಗಂಭೀರ
ಅಪ್ರಾಪ್ತರಿಂದ 8ನೇ ಕ್ಲಾಸ್ ಬಾಲಕಿಗೆ ಕಿರುಕುಳ: ನಾಲ್ವರು ಬಾಲಕರ ತಾಯಂದಿರನ್ನು ಬಂಧಿಸಿದ ಪೊಲೀಸರು