
ಸ್ಟೀಲ್ ಫ್ಲೈ ಓವರ್ ವಿರೋಧಿಸಿ ಹಲವು ಸಂಘಟನೆಗಳು ಪ್ರತಿಭಟಿಸುತ್ತಿದ್ದು, ಇಂದು ಫ್ಯಾಶನ್ ಡಿಸೈನ್ ಕಾಲೇಜು ವಿದ್ಯಾರ್ಥಿಗಳು ಸ್ಟೀಲ್ ಫ್ಲೈ ಓವರ್ ವಿರೋಧ ವ್ಯಕ್ತಪಡಿಸಿದರು. ಅನಾವಶ್ಯಕ ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮವನ್ನು ಪೆಂಟಿಂಗ್ ಮೂಲಕ ಜಾಗೃತಿ ಮೂಡಿಸಿದರು.
ಈಗಾಗಲೇ ನಮ್ಮ ಬೆಂಗಳೂರು ಪ್ರತಿಷ್ಠಾನ ಸೇರಿದಂತೆ ಹಲವು ಸಂಘಟನೆಗಳು, ಸಾರ್ವಜನಿಕರು ವಿರೋಧಿಸುತ್ತಲೆ ಬಂದಿದ್ದಾರೆ. ಇಂದು ಕೋರಮಂಗಲದ ಲಿಸಾ ಫ್ಯಾಷನ್ ಡಿಸೈನ್ ವಿದ್ಯಾರ್ಥಿಗಳು ಸ್ಟೀಲ್ ಫ್ಲೈ ಓವರ್ ಬೇಡ ಇದರಿಂದ ಮರಗಳ ಮಾರಣಹೋಮದ ಜೊತೆಗೆ ಪರಿಸರ ವಿನಾಶದ ಅಂಚಿನತ್ತ ಹೋಗುತ್ತೆ ಎಂದು ಪೆಂಟಿಂಗ್ ಹಾಗೂ ಚಿತ್ರಗಳನ್ನು ಬಿಡಿಸೋ ಮೂಲಕ ಜಾಗೃತಿ ಮೂಡಿಸಿದರು. ಫ್ಯಾಷನ್ ವಿದ್ಯಾರ್ಥಿಗಳ ಕಾಳಜಿಗೆ ಸಿಟಿಜನ್ ಫಾರ್ ಬೆಂಗಳೂರು ಕೈ ಜೋಡಿಸಿದ್ದು ಸ್ಟೀಲ್ ಫ್ಲೈ ಓವರ್ ಬೇಡ ಚುಕು ಬುಕು ರೈಲು ಬೇಕು ಅಂತಾ ಕ್ಯಾಂಪೇನ್ ಮಾಡಿದರು.
ಈ ಸಂದರ್ಭದಲ್ಲಿ ಫ್ಯಾಷನ್ ವಿದ್ಯಾರ್ಥಿಗಳು ಇದೇ ವೇಳೆ ತಾವೇ ತಯಾರಿಸಿದ ನಾನಾ ಡಿಸೈನ್ ಬಟ್ಟೆಗಳನ್ನು ಪ್ರದರ್ಶಿಸಿದರು. ವೇಸ್ಟ್ ಬಟ್ಟೆ, ವೇಸ್ಟ್ ಪೇಪರ್ ಬಳಸಿ ಡಿಸೈನ್ ಮಾಡಿದ್ದು ಎಲ್ಲರ ಗಮನ ಸೆಳೆಯಿತು.
ಸಿಟಿಜನ್ ಫಾರ್ ಬೆಂಗಳೂರು ಸಂಸ್ಥೆ ಡಿ. 17 ರಂದು ಸ್ಟೀಲ್ ಫ್ಲೈ ಓವರ್ ಬೇಡ ಚುಕು ಬುಕು ರೈಲು ಬೇಕು ಎಂದು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ವೈಟ್ ಫೀಲ್ಡ್ ವರೆಗೂ ರೈಲು ಜಾಥಾ ನಡೆಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.