
ಬೆಂಗಳೂರು (ಜ.04): ಬಡವರು, ಶ್ರಮಿಕರು ಹಾಗೂ ನಿರ್ಗತಿಕರಿಗಾಗಿ ಜಾರಿಗೊಳಿಸಿದ ಸಿದ್ದರಾಮಯ್ಯ ಸರ್ಕಾರದ ಮಹತ್ತರ ಇಂದಿರಾ ಕ್ಯಾಂಟೀನ್ ಹಳ್ಳ ಹಿಡಿದಿದೆ. ಶಾಂತಿನಗರದ ಇಂದೀರಾ ಕ್ಯಾಂಟಿನ್ನಲ್ಲಿ ಅಧಿಕಾರಿಗಳು ಕೋಟಿ ಕೋಟಿ ಗುಳುಂ ಮಾಡುತ್ತಿರುವ ಬಗ್ಗೆ ಸುವರ್ಣನ್ಯೂಸ್ ವರದಿ ಪ್ರಸಾರ ಮಾಡಿತ್ತು. ಇದಾಖಲೆಗಳನ್ನು ಕಲೆ ಹಾಕಿದ್ದ ಕರ್ನಾಟಕ ಕಾರ್ಮಿಕ ವೇದಿಕೆ ಅಧ್ಯಕ್ಷ ನಾಗೇಶ್ ಇಂದು ಎಸಿಬಿಗೆ ದೂರು ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರದ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್ ಈಗ ಅಧಿಕಾರಿಗಳ ಪಾಲಿನ ಭಾಗ್ಯದ ಯೋಜನೆಯಾಗಿದೆ. ಬಡವರ ಹೊಟ್ಟೆ ಸೇರಬೇಕಿದ್ದ ಅನ್ನಕ್ಕೆ ಖದೀಮರು ಕನ್ನ ಹಾಕಿ ತಮ್ಮ ಜೇಬಿಗೆ ಕೋಟಿ ಕೋಟಿ ಇಳಿಸಿದ್ದಾರೆ. ಈ ಕರ್ಮಕಾಂಡದ ಬಗ್ಗೆ ಸುವರ್ಣನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಶಾಂತಿನಗರ ಇಂದೀರಾ ಕ್ಯಾಂಟೀನ್ಗೆ ಮೇಯರ್ ಸಂಪತ್ ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಸುವರ್ಣನ್ಯೂಸ್ಗೆ ವರದಿಗೆ ಅಭಿನಂದಿಸಿದರು.
ಇನ್ನು ಅನ್ನಭಾಗ್ಯ ಭ್ರಷ್ಟಾಚಾರವನ್ನು ಬಯಲಿಗೆಳೆದ ಸುವರ್ಣ ನ್ಯೂಸ್ ವರದಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಂದಿರಾ ಕ್ಯಾಂಟೀನ್ ಗೋಲ್ಮಾಲ್ ಬಗ್ಗೆ ಇವಯತ್ತು ಎಸಿಬಿಯಲ್ಲಿ ದೂರು ದಾಖಲಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.