
ತುಮಕೂರು(ಅ.8): ನಿನ್ನೆ ತುಮಕೂರಿನ ತಿಪಟೂರು ತಾಲೂಕಿನ ಸಾರ್ಥಹಳ್ಳಿಯಲ್ಲಿನ ಗೃಹಬಂಧನ ಪ್ರಕರಣದ ಬಗ್ಗೆ ಸುವರ್ಣನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿಗೆ ಸ್ಪಂದಿಸಿದ ಗ್ರಾಮಸ್ಥರು ಯುವತಿ ಶ್ರೀಲಕ್ಷ್ಮಿಯನ್ನ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸದ್ಯ ಯುವತಿ ಶ್ರೀಲಕ್ಷ್ಮಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಲಕ್ಷ್ಮೀ ತೀವ್ರತರವಾದ ಮಾನಸಿಕ ಖಾಯಿಲೆಯಿಂದ ನರಳುತಿದ್ದು 6 ವಾರಗಳ ಚಿಕಿತ್ಸೆ ಅಗತ್ಯವಿದೆ ಅಂತಾ ಜಿಲ್ಲಾಸ್ಪತ್ರೆಯ ಮನೋವೈದ್ಯೆ ಡಾ. ಮಾಲಿನಿ ಸುವರ್ಣ ನ್ಯೂಸ್ ಗೆ ಹೇಳಿದ್ದಾರೆ. ಜೊತೆಗೆ ಸತತ 13 ವರ್ಷಗಳಿಂದ ಬಂಧನದಲ್ಲಿರುವುದರಿಂದ ಆಕೆ ನಿತ್ರಾಣಗೊಂಡಿದ್ದು ದೈಹಿಕವಾಗಿಯೂ ಸದೃಢವಾಗಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.