
ಬೆಂಗಳೂರು (ಜೂ.19): ರಾಜ್ಯದಲ್ಲಿ ಚಿಕ್ಕಮಕ್ಕಳನ್ನು ಹೇಗೆ ಮಾಫಿಯಾದವರು ಹೇಗೆಲ್ಲಾ ಹಿಂಸಿಸಿ ಭಿಕ್ಷಾಟನೆ ಮಾಡಿಸ್ತಾರೆ ಎಂದು ಸುವರ್ಣ ನ್ಯೂಸ್ ಕವರ್ ಸ್ಟೋರಿ ವರದಿ ಮಾಡಿತ್ತು. ಆ ವರದಿ ಇಂದು ಮೇಲ್ಮನೆಯಲ್ಲಿ ಗಂಭೀರವಾಗಿ ಚರ್ಚೆ ಆಯಿತು. ಮಾತ್ರವಲ್ಲದೇ ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಸುವರ್ಣ ನ್ಯೂಸ್ ವರದಿಯನ್ನು ಸದನದಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟರು.
ರಾಜ್ಯದಲ್ಲಿ ಮಕ್ಕಳ ಮೇಲೆ ನಿರಂತರ ಹಲ್ಲೆ, ಕಿಡ್ನಾಪ್ ಸುದ್ದಿ ಆಗಾಗ ಬರ್ತಾನೆ ಇದೆ. ಈ ಕುರಿತು ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಮಕ್ಕಳನ್ನ ಹೇಗೆ ಭಿಕ್ಷಾಟನೆಗೆ ತಳ್ಳುತ್ತಾರೆ, ಅವರಿಗೆ ಹೇಗೆ ಹಿಂಸೆ ನೀಡುತ್ತಾರೆ ಅನ್ನೋದನ್ನು ವಿಡಿಯೋ ಸಹಿತ ಜನರ ಮುಂದಿಟ್ಟಿತ್ತು. ಈ ವಿಚಾರವನ್ನು ಇಂದು ಮೇಲ್ಮನೆಯಲ್ಲಿ ಸಚಿವೆ ಉಮಾಶ್ರೀ ಪ್ರಸ್ತಾಪಿಸಿದರು.
ಮೇಲ್ಮನೆಯಲ್ಲಿಂದು ಮಕ್ಕಳ ಹಕ್ಕು ಮತ್ತು ರಕ್ಷಣೆ ಮೇಲಿನ ಚರ್ಚೆಯಲ್ಲಿ ಸಚಿವೆ ಉಮಾಶ್ರೀ ಸದನದಲ್ಲಿ ವಿಸ್ತ್ರೃತವಾಗಿ ಮಾತನಾಡುತ್ತಾ, ಮಕ್ಕಳನ್ನ ಹೇಗೆ ಕಿಡ್ನಾಪ್ ಮಾಡ್ತಾರೆ. ಬೇರೆ ಜಾಲಗಳಲ್ಲಿ ದುಡ್ಡಿನ ಆಸೆ ಹುಟ್ಟಿಸಿ ಮಕ್ಕಳನ್ನ ಯಾಮಾರಿಸ್ತಾರೆ ಎನ್ನುವ ಬಗ್ಗೆ ಸದನದಲ್ಲಿ ವಿವರಿಸಿದರು. ಈ ವೇಳೆ ಬಿಜೆಪಿ ಸದಸ್ಯ ಗಣೇಶ್ ಕಾರ್ಣಿಕ್ ಎದ್ದು ನಿಂತು ಮಕ್ಕಳಿಗೆ ಡ್ರಗ್ಸ್ ನೀಡಿ ಇಂತಹ ಚಟುವಟಿಕೆಗಳಲ್ಲಿ ಬಲವಂತವಾಗಿ ನೂಕ್ತಾರಲ್ಲವೇ ಎಂದು ಪ್ರಶ್ನೆ ಇಟ್ಟರು. ಆಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಸುವರ್ಣ ನ್ಯೂಸ್ ವರದಿ ಪ್ರಸ್ತಾಪಿಸಿದರು. ಮಕ್ಕಳನ್ನ ಹೇಗೆ ದುರ್ಬಳಕೆ ಮಾಡ್ಕೊತಾ ಇದ್ದಾರೆ ಅನ್ನೋದನ್ನ ಸುವರ್ಣ ನ್ಯೂಸ್ ಜನರಿಗೆ ತೋರಿಸಿದೆ ಎಂದು ಸದನಕ್ಕೆ ಹೇಳಿದರು. ಸಮಾಜ ಕಲ್ಯಾಣ ಇಲಾಖೆಯ ಮೇಲೂ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ರು. ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನ ರಕ್ಷಿಸಿ ಕೇವಲ ಎರಡು ದಿನದಲ್ಲೇ ಬಿಟ್ಟು ಬಿಡುತ್ತಾರೆ. ಆದರೆ ಸದನದಲ್ಲಿ ಈ ಬಗ್ಗೆ ಕೇವಲ ಚರ್ಚೆ ಆದ್ರೆ ಮಾತ್ರ ಸಾಲದು. ಕಂದಮ್ಮಗಳನ್ನು ಮಾಫಿಯಾ ಜಾಲದಿಂದ ರಕ್ಷಿಸುವ, ಅವರಿಗೆ ಸಹಜ ಬದುಕು ಕಲ್ಪಿಸಿಕೊಡುವ ಕೆಲಸವನ್ನ ಸರ್ಕಾರ ಶೀಘ್ರವಾಗಿ ಮಾಡಬೇಕಿದೆ ಎಂಬುದು ಸುವರ್ಣ ನ್ಯೂಸ್ ಆಶಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.