ಸಿ ವೋಟರ್ ಮೂಡ್ ಆಫ್ ದಿ ನೇಶನ್ : ಯಾರಿಗೆ ಎಷ್ಟು..?

By Web DeskFirst Published Jan 24, 2019, 11:12 PM IST
Highlights

2019 ರ ಲೋಕಸಭಾ ಚುನಾವಣೆಯಲ್ಲಿ ಏನಾಗಬಹುದು? ಸಮೀಕ್ಷೆ ಏನು ಹೇಳುತ್ತದೆ? ಮೋದಿ ಮತ್ತೆ ಪ್ರಧಾನಿ ಆಗುತ್ತಾರಾ। ರಾಹುಲ್ ಪಟ್ಟಕ್ಕೆ ಏರುತ್ತಾರಾ? ಚುನಾವಣಾ ಪೂರ್ವ ಸಿ-ವೋಟರ್ ಸಮೀಕ್ಷೆ ಏನು ಹೇಳುತ್ತದೆ?

ನವದೆಹಲಿ[ಜ.24] ಈ ಬಾರಿಯ ಲೋಕಸಭೆ ಚುನಾವಣಾ ಫಲಿತಾಂಶ ಅತಂತ್ರವಾಗಲಿದ್ದು, ಯಾವ ಕ್ಷೇತ್ರಕ್ಕೂ ನಿಚ್ಚಳ ಬಹುಮತ ಸಿಗುವುದಿಲ್ಲ ಎಂದು ಸಿ-ವೋಟರ್ ಸಮೀಕ್ಷೆ ಹೇಳಿದೆ. ಲೋಕಸಭೆ ಚುನಾವಣೆ 2019ರ ಚುನಾವಣಾ ಪೂರ್ವ ಸಮೀಕ್ಷೆಯನ್ನು ಸಿ ವೋಟರ್ ನಡೆಸಿದ್ದು, ಎಬಿಪಿ ಸುದ್ದಿ ವಾಹಿನಿ ಈ ಸಮೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು ಯಾರ್ಯಾರಿಗೆ ಎಷ್ಟೆಷ್ಟು ಇಲ್ಲಿದೆ ಲೆಕ್ಕ.

ಕರ್ನಾಟಕದಲ್ಲಿ ಬಿಜೆಪಿಗೆ 3 ಸ್ಥಾನ ಕಳೆದುಕೊಳ್ಳಲಿದೆ. 22,309 ಸಮೀಕ್ಷೆ ಮಾದರಿಗಳನ್ನು ಬಳಸಿಕೊಳ್ಳಲಾಗಿದ್ದು, 2018ರ ಡಿಸೆಂಬರ್‌ನಿಂದ ಜನವರಿ ಮೂರನೇ ವಾರದವರೆಗೆ ಸಮೀಕ್ಷೆ ನಡೆಸಲಾಗಿದೆ. ಎಲ್ಲ ರಾಜ್ಯಗಳಲ್ಲಿನ ಲೋಕಸಭೆ ಕ್ಷೇತ್ರಗಳಲ್ಲಿಯೂ ಸಮೀಕ್ಷೆ ನಡೆಸಲಾಗಿದೆ.

"

'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯ ಒಟ್ಟಾರೆ ಫಲಿತಾಂಶ ಇಲ್ಲಿದೆ. ಒಟ್ಟು 543 ಲೋಕಸಭೆ ಕ್ಷೇತ್ರಗಳಿದ್ದು, ಸರ್ಕಾರ ರಚನೆಗೆ 272 ಕ್ಷೇತ್ರಗಳಲ್ಲಿ ಜಯಗಳಿಸಬೇಕು. ಆದರೆ, ಯಾವ ಮೈತ್ರಿಕೂಟವೂ ಸ್ಪಷ್ಟ ಬಹುಮತ ಪಡೆದುಕೊಳ್ಳುವುದಿಲ್ಲ ಎನ್ನುತ್ತದೆ ಸಮೀಕ್ಷೆ. ಎನ್‌ಡಿಎ ಮೈತ್ರಿಕೂಟದ ಶಕ್ತಿ 233ಕ್ಕೆ ಕುಸಿಯಲಿದೆ. ಯುಪಿಎ 167 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಪಡೆಯಲಿದೆ. ಉಳಿದ 143 ಸ್ಥಾನಗಳಲ್ಲಿ ಇತರೆ ಪಕ್ಷಗಳು ಗೆಲುವು ಕಾಣಲಿದೆ. ಅಂದರೆ ಅತಂತ್ರ ಲೋಕಸಭೆ ಎದುರಾಗಲಿದೆ.

"

ಮೈತ್ರಿ ಪಕ್ಷಗಳನ್ನು ಹೊರತುಪಡಿಸಿ ಬಿಜೆಪಿ 203 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್ 109 ಕ್ಷೇತ್ರಗಳನ್ನು ಮಾತ್ರ ಪಡೆದುಕೊಳ್ಳಲಿದೆ. ಇನ್ನು 231 ಕ್ಷೇತ್ರಗಳು ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳನ್ನು ಹೊರತುಪಡಿಸಿ ಉಳಿದ ಪಕ್ಷಗಳ ಪಾಲಾಗಲಿದ್ದು ಸದ್ಯದ ವಾಸ್ತವಿಕ ಸ್ಥಿತಿ ಹೀಗಿದೆ ಎಂದು ಸಮೀಕ್ಷೆ ತಿಳಿಸಿದೆ.

"

 

"

 

 

 

 

click me!