ವನ್ಯಜೀವಿ ಸಂರಕ್ಷಣಾ ಅಭಿಯಾನದಲ್ಲಿ ಸ್ವಯಂ ಸೇವಕರಿಂದ ಸಾರ್ವಜನಿಕರಿಗೆ ಅರಿವು

By Suvarna Web DeskFirst Published May 4, 2017, 11:30 AM IST
Highlights

ಇಂದು ಮೈಸೂರಿನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಸ್ವಯಂಸೇವಕರು, ವಿದ್ಯಾರ್ಥಿಗಳು ಹುಲಿ ರಕ್ಷಣೆ ಹಾಗೂ ವನ್ಯಜೀವಿ ಸಂರಕ್ಷಣೆಯ ಬಗ್ಗೆ ವಿವಿಧ ಗ್ರಾಮಗಳಿಗೆ ತೆರಳಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಮೈಸೂರು (ಮೇ.04):  ಪ್ರವಾಸೋದ್ಯಮ ಇಲಾಖೆ, ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ವನ್ಯಜೀವಿ ಸಂರಕ್ಷಣಾ ಅಭಿಯಾನಕ್ಕೆ ಸಾರವಜನಿಕರು ಸೇರಿದಂತೆ ವಿವಿಧ ವಲಯಗಳಿಂದ ಅತ್ಯತ್ತಮ ಬೆಂಬಲ ಹಾಗೂ ಪ್ರೋತ್ಸಾಹ ದೊರಕಿದೆ.

ಇಂದು ಮೈಸೂರಿನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಸ್ವಯಂಸೇವಕರು, ವಿದ್ಯಾರ್ಥಿಗಳು ಹುಲಿ ರಕ್ಷಣೆ ಹಾಗೂ ವನ್ಯಜೀವಿ ಸಂರಕ್ಷಣೆಯ ಬಗ್ಗೆ ವಿವಿಧ ಗ್ರಾಮಗಳಿಗೆ ತೆರಳಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಈ ಅಭಿಯಾನದ ಅಂಗವಾಗಿ ಘೋಷಣಾ ವಾಕ್ಯ ಹಾಗೂ ಚಿತ್ರಕಲೆ ರಚಿಸುವಿಕೆ ಸೇರಿದಂತೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅತ್ಯುತ್ತಮ ಘೋಷಣಾ ವಾಕ್ಯ ರಚಿಸುವವರಿಗೆ ಅಭಿಯಾನದ ರಾಯಭಾರಿಯಾಗಿರುವ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಅವರ ಜೊತೆ ಪಾಲ್ಗೊಳ್ಳುವ ಅವಕಾಶವಿದೆ.

2 ತಿಂಗಳ ಕಾಲ ನಡೆಯಲಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನದಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಮತ್ತು ಶಾಲಾ-ಕಾಲೇಜುಗಳಲ್ಲಿ ಅಧ್ಯಯನ ಮತ್ತು ಜಾಗೃತಿ ಅಭಿಯಾನ ನಡೆಯಲಿದೆ.

click me!