ಸುವರ್ಣ ನ್ಯೂಸ್ ಮಹಾ ಸಮೀಕ್ಷೆಯಲ್ಲಿ ಬಯಲಾಯ್ತು ರಾಜ್ಯದ ಮುಂದಿನ ಚುನಾವಣಾ ಫಲಿತಾಂಶದ ಚಿತ್ರಣ

Published : Dec 07, 2017, 08:36 PM ISTUpdated : Apr 11, 2018, 12:48 PM IST
ಸುವರ್ಣ ನ್ಯೂಸ್ ಮಹಾ ಸಮೀಕ್ಷೆಯಲ್ಲಿ ಬಯಲಾಯ್ತು ರಾಜ್ಯದ ಮುಂದಿನ ಚುನಾವಣಾ ಫಲಿತಾಂಶದ ಚಿತ್ರಣ

ಸಾರಾಂಶ

ಒಟ್ಟು 224 ವಿದಾನಸಭಾ ಕ್ಷೇತ್ರಗಳಲ್ಲಿ  ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ, ಮೈಸೂರು ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಬೆಂಗಳೂರು ಒಳಗೊಂಡು ಸಮೀಕ್ಷೆ ನಡೆಸಲಾಗಿತ್ತು.

ಬೆಂಗಳೂರು(ಡಿ.07): ಸುವರ್ಣ ನ್ಯೂಸ್ ಹಾಗೂ ಸಮೀಕ್ಷಾ ಸಂಸ್ಥೆ ಸಿ'ಝೆಡ್  ಜಂಟಿ ಸಹಯೋಗದಲ್ಲಿ ನಡೆಸಿದ ಮುಂದಿನ 2018ರ ವಿದಾನಸಭಾ ಚುನಾವಣೆಯ ಸಮೀಕ್ಷೆಯಲ್ಲಿ ರಾಜ್ಯದ ಮತದಾರ ಯಾವೊಂದು ಪಕ್ಷಕ್ಕೂ ಬಹುಮತ ನೀಡಿಲ್ಲ.

ಸಮೀಕ್ಷೆಯಂತೆ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳಿಗೂ ಅಧಿಕಾರ ರಚಿಸುವ ಅವಕಾಶವಿದೆ. ಒಟ್ಟು 224 ವಿದಾನಸಭಾ ಕ್ಷೇತ್ರಗಳಲ್ಲಿ  ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ, ಮೈಸೂರು ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಬೆಂಗಳೂರು ಒಳಗೊಂಡು ಸಮೀಕ್ಷೆ ನಡೆಸಲಾಗಿತ್ತು.

ಸಮೀಕ್ಷೆಯ ಪ್ರಕಾರ 224 ಕ್ಷೇತ್ರಗಳಲ್ಲಿ  ಕಾಂಗ್ರೆಸ್ 88, ಬಿಜೆಪಿ 82, ಜೆಡಿಎಸ್ 43 ಹಾಗೂ ಇತರೆ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಉತ್ತರ,ಮಧ್ಯ,ಕರಾವಳಿ ಭಾಗಗಳಲ್ಲಿ ಕಾಂಗ್ರೆಸ್, ಬಿಜೆಪಿ ಪ್ರಾಬಲ್ಯ ಮೆರೆದರೆ, ಮೈಸೂರು ಕರ್ನಾಟಕ, ಬೆಂಗಳೂರು ಕಡೆ ಜೆಡಿಎಸ್ ಹಾಗೂ ಕಾಂಗ್ರೆಸ್ ಜಯ ಪಡೆಯಲಿದೆ.

ಜೆಡಿಎಸ್ ಕಿಂಗ್ ಮೇಕರ್

ಮ್ಯಾಜಿಕ್ ಸಂಖ್ಯೆ 113 ಯಾವೊಂದು ಪಕ್ಷಕ್ಕೂ ಸಿಗದ ಕಾರಣ 40 ರಿಂದ 45 ಪಡೆಯುವ ಜೆಡಿಎಸ್  ಕಿಂಗ್ ಮೇಕರ್ ಆಗುವ ಸಾಧ್ಯತೆ ನಿಚ್ಚಳವಾಗಿದೆ. ಎರಡೂ ರಾಜಕೀಯ ಪಕ್ಷಗಳ ಜೊತೆಯಲ್ಲಿ ಅಧಿಕಾರ ಹಂಚಿಕೊಂಡು ಸರ್ಕಾರ ರಚಿಸುವ ಸಂಭವ ಹೆಚ್ಚಾಗಿದೆ.  ನೂತನ ಪಕ್ಷಗಳಾದ ಉಪೇಂದ್ರ ಅವರ ಕಪಿಜೆಪಿ, ಅಮ್ ಆದ್ಮಿ ಮುಂತಾದವು 11 ಸ್ಥಾನಗಳಿಗೆ ತೃಪ್ತಿ ಹೊಂದಲಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಜಯಪುರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 5 ಎಕರೆ ಕಬ್ಬು, ಟ್ರೈಲರ್ ಬೆಂಕಿಗಾಹುತಿ! ರೈತ ಕಣ್ಣೀರು
ಜನವರಿ 1, 2026 ರಿಂದ 10 ನಿಯಮಗಳಲ್ಲಿ ಬದಲಾವಣೆ, ಸಂಬಳ-ಪಡಿತರ ಮೇಲೆ ನೇರ ಪರಿಣಾಮ