ರಾಷ್ಟ್ರಧ್ವಜ ಮಾದರಿಯ ಕಾಲು ಒರೆಸುವ ಡೋರ್ ಮ್ಯಾಟ್ ಅಮೆಜಾನ್'ನಲ್ಲಿ ಮಾರಾಟ: ದೇಶಾದ್ಯಂತ ಆಕ್ರೋಶ

By Suvarna Web DeskFirst Published Jan 11, 2017, 4:47 PM IST
Highlights

ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಮೇಜಾನ್ ಕಂಪನಿಯ ದೇಶದ್ರೋಹದ ಕ್ರಮವನ್ನು ಖಂಡಿಸಿದ್ದು, ಈ ರೀತಿಯ ಎಲ್ಲ ಉತ್ಪನ್ನಗಳನ್ನು ವಾಪಸ್ ಪಡೆಯುವುದರ ಜೊತೆ ತಕ್ಷಣವೇ ಕ್ಷಮೆ ಕೇಳಬೇಕೆಂದು ಕಂಪನಿಯನ್ನು ಒತ್ತಾಯಿಸಿದ್ದಾರೆ.

ನವದೆಹಲಿ(ಜ.11): ಕಾಲನ್ನು ಒರೆಸುವ ಡೋರ್ ಮ್ಯಾಟನ್ನು ಭಾರತದ ರಾಷ್ಟ್ರಧ್ವಜ ಮಾದರಿಯಲ್ಲಿ ವಿನ್ಯಾಸಿಸಿ ಆನ್'ಲೈನ್'ನಲ್ಲಿ ಮಾರಾಟಕ್ಕಿಟ್ಟ ಇ-ಕಾಮರ್ಸ್ ಕಂಪನಿಯ ವಿರುದ್ಧ ದೇಶಾದ್ಯಂತ  ಆಕ್ರೋಶ, ಪ್ರತಿಭಟನೆಗಳು ವ್ಯಕ್ತವಾಗಿವೆ.

ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಮೇಜಾನ್ ಕಂಪನಿಯ ದೇಶದ್ರೋಹದ ಕ್ರಮವನ್ನು ಖಂಡಿಸಿದ್ದು, ಈ ರೀತಿಯ ಎಲ್ಲ ಉತ್ಪನ್ನಗಳನ್ನು ವಾಪಸ್ ಪಡೆಯುವುದರ ಜೊತೆ ತಕ್ಷಣವೇ ಕ್ಷಮೆ ಕೇಳಬೇಕೆಂದು ಕಂಪನಿಯನ್ನು ಒತ್ತಾಯಿಸಿದ್ದಾರೆ. ಒಂದು ವೇಳೆ ಉತ್ಪನ್ನಗಳನ್ನು ವಾಪಸ್ ಪಡೆದು ಕ್ಷಮೆ ಕೇಳದಿದ್ದರೆ ಅಮೆಜಾನ್ ಅಧಿಕಾರಿಗಳಿಗೆ ವಿಸಾಗಳನ್ನು ನೀಡಲಾಗುವುದಿಲ್ಲ ಎಂದು ಕಂಪನಿಗೆ ಖಡಕ್ ಸಂದೇಶ ನೀಡಿದ್ದಾರೆ.

ಕಾನೂನಿನ ಪ್ರಕಾರ ಭಾರತದ ರಾಷ್ಟ್ರಧ್ವಜವನ್ನು ಯಾವುದೇ ಉತ್ಪನ್ನದಲ್ಲಿ ಬಳಸುವಂತಿಲ್ಲ. ಒಂದು ವೇಳೆ ಬಳಸಿದರೆ ಅದು ಕಾನೂನಿನ ಉಲ್ಲಂಘನೆಯಾಗಲಿದ್ದು, 3 ವರ್ಷ ಜೈಲು, ದಂಡ ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸಬಹುದು. ಅಮೇಜಾನ್ ಕಂಪನಿಯು ಕೆನಡಾ ಹಾಗೂ ಇಂಗ್ಲೆಂಡ್ ದೇಶಗಳಲ್ಲಿ ಭಾರತದ ರಾಷ್ಟ್ರಧ್ವಜ ಮಾದರಿಯ ಡೋರ್'ಮ್ಯಾಟ್ ಅನ್ನು 21.99 ಕೆನಡಿಯನ್ ಡಾಲರ್'ಗೆ(1491 ಭಾರತದ ರೂಪಾಯಿಗಳು) ಮಾರಾಟಕ್ಕಿಟ್ಟಿದೆ.

click me!