ಏರ್'ಟೆಲ್, ವೊಡಾಫೋನ್, ಐಡಿಯಾಗಿಂತ ಜಿಯೋ ವೇಗ ಈಗ ಹೆಚ್ಚಾಗಿದೆ: ಟ್ರಾಯ್ ನೀಡಿದ ವರದಿ

By Suvarna Web DeskFirst Published Jan 11, 2017, 4:08 PM IST
Highlights

ಇಂಟರ್'ನೆಟ್ ಉಚಿತ ಸೇವೆ ಆಗಿರುವ ಕಾರಣ ಮೊದಮೊದಲು ಹಾಗೂ ಹೆಚ್ಚು ಗ್ರಾಹಕರಿರುವ ಕ್ಷೇತ್ರದಲ್ಲಿ ಅಂತರ್ಜಾಲದ ವೇಗದ ಮಿತಿ ಕಡಿಮೆಯಿರುತ್ತಿತ್ತು. ಒಮ್ಮೊಮ್ಮೆ 2ಜಿ ವೇಗ ಸಹ ಇರುತ್ತಿರಲಿಲ್ಲ.

ನವದೆಹಲಿ(ಜ.11): ಭಾರತದ ಮೊಬೈಲ್ ಅಂತರ್ಜಾಲ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿ 6 ತಿಂಗಳು ಸಿಮ್ ಪಡೆದುಕೊಂಡ ಎಲ್ಲ ಗ್ರಾಹಕರಿಗೆ ಉಚಿತ 4ಜಿ ಇಂಟರ್'ನೆಟ್, ಕರೆ, ಎಸ್'ಎಂಎಸ್ ಸೇವೆಗಳನ್ನು ಅನಿಮಿಯತವಾಗಿ ಉಚಿತವಾಗಿ ನೀಡುತ್ತಿರುವ ಕಂಪನಿ ರಿಲಯನ್ಸ್ ಜಿಯೋ.

ಇಂಟರ್'ನೆಟ್ ಉಚಿತ ಸೇವೆ ಆಗಿರುವ ಕಾರಣ ಮೊದಮೊದಲು ಹಾಗೂ ಹೆಚ್ಚು ಗ್ರಾಹಕರಿರುವ ಕ್ಷೇತ್ರದಲ್ಲಿ ಅಂತರ್ಜಾಲದ ವೇಗದ ಮಿತಿ ಕಡಿಮೆಯಿರುತ್ತಿತ್ತು. ಒಮ್ಮೊಮ್ಮೆ 2ಜಿ ವೇಗ ಸಹ ಇರುತ್ತಿರಲಿಲ್ಲ. ಆದರೆ ಕಳೆದ ಒಂದು (2016 ಡಿಸೆಂಬರ್'ನಿಂದ)ತಿಂಗಳಿಂದ ಜಿಯೋ ಡೌನ್'ಲೋಡ್ ವೇಗ ಸಾಕಷ್ಟು ಸುಧಾರಿಸಿದ್ದು, ಏರ್'ಟೆಲ್, ವೊಡಾಫೋನ್, ಐಡಿಯಾ ಕಂಪನಿಗಳಿಗಿಂತ ವೇಗದ ಪರಿಮಿತಿ ಹೆಚ್ಚಾಗಿದೆ ಎಂದು ಭಾರತದ ದೂರವಾಣಿ ನಿಯಂತ್ರಣ ಪ್ರಾಧಿಕಾರ ವರದಿ ನೀಡಿದೆ.

ಜಿಯೋ 4ಜಿ ವೇಗ ಡಿಸೆಂಬರ್'ನಲ್ಲಿ ಪ್ರತಿ ಸೆಕೆಂಡ್'ಗೆ 18.16 ಮೆಗಾಬಿಟ್ಸ್ ಇದ್ದರೆ, ಏರ್'ಟೆಲ್'ನ ಸ್ಪೀಡ್ 4.68, ವೊಡಾಫೋನ್'ನದ್ದು 6.7, ಐಡಿಯಾ ಕಂಪನಿಯದ್ದು 5.03, ಬಿಎಸ್'ಎನ್'ಎಲ್ 3.42,ಏರ್'ಸೆಲ್ 3.00 ಇದೆ. ಇವೆಲ್ಲವನ್ನು ಗಮನಿಸಿದರೆ ಜಿಯೋ ಸ್ಪೀಡ್ ಅತ್ಯುತ್ತಮವಾಗಿದೆ. 2016 ನವೆಂಬರ್'ನಲ್ಲಿ ಜಿಯೋದ ಡೌನ್'ಲೋಡ್ ವೇಗ 5.85, ಸೆಪ್ಟಂಬರ್'ನಲ್ಲಿ 7.26 ಇತ್ತು ಎಂದು ಟ್ರಾಯ್ ಅಂಕಿಅಂಶಗಳಲ್ಲಿ ತಿಳಿಸಿದೆ.

click me!