ಸುರಪುರ ಮತ್ತು ಶಹಾಪುರ ತಾಲೂಕು ಮಕ್ಕಳಿಗೆ ಕ್ಷೀರ 'ಭ್ಯಾಗ್ಯ'ವಿಲ್ಲ!

By Suvarna Web DeskFirst Published Dec 20, 2016, 7:09 AM IST
Highlights

 ಅಪೌಷ್ಠಿಕತೆ ನೀಗಿಸಲು ರಾಜ್ಯ ಸರ್ಕಾರ ಶಾಲಾ ಮಕ್ಕಳಿಗಾಗಿ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ. ಆದರೆ ಯಾದಗಿರಿ ಜಿಲ್ಲೆಯ ಸುರಪುರ ಮತ್ತು ಶಹಾಪುರ ತಾಲೂಕುಗಳಲ್ಲಿ ಮಕ್ಕಳಿಗೆ ಕ್ಷೀರ ಭ್ಯಾಗ್ಯದ ಸೌಭಾಗ್ಯ ಸಿಗದಂತಾಗಿದೆ.

ಯಾದಗಿರಿ (ಡಿ. 20): ಅಪೌಷ್ಠಿಕತೆ ನೀಗಿಸಲು ರಾಜ್ಯ ಸರ್ಕಾರ ಶಾಲಾ ಮಕ್ಕಳಿಗಾಗಿ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ. ಆದರೆ ಯಾದಗಿರಿ ಜಿಲ್ಲೆಯ ಸುರಪುರ ಮತ್ತು ಶಹಾಪುರ ತಾಲೂಕುಗಳಲ್ಲಿ ಮಕ್ಕಳಿಗೆ ಕ್ಷೀರ ಭ್ಯಾಗ್ಯದ ಸೌಭಾಗ್ಯ ಸಿಗದಂತಾಗಿದೆ.

ಅಧಿಕಾರಿಗಳ ನಿಷ್ಕಾಳಜಿಯಿಂದ ಬಡ ಮಕ್ಕಳಿಗೆ ಹಾಲಿನ ಭಾಗ್ಯ ಇಲ್ಲದಂತಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗಾಗಿ ತಲುಪಬೇಕಿದ್ದ ಕೆನೆಭರಿತ ಹಾಲಿನ ಪುಡಿಯ ಚೀಲಗಳು ಕಳೆದ ಎರಡು ತಿಂಗಳಿಂದ ಗೋದಾಮಿನಲ್ಲಿಯೇ ಕೊಳೆಯುತ್ತಾ ಬಿದ್ದಿವೆ. ಜಿಲ್ಲೆಯಲ್ಲಿ ಒಟ್ಟು 1,102 ಶಾಲೆಗಳಿದ್ದು, ಒಟ್ಟು 1,72,452 ಕ್ಷೀರ ಭಾಗ್ಯ ಫಲಾನುಭವಿಗಳಿದ್ದಾರೆ. ಈ ಎಲ್ಲಾ ಶಾಲೆಗಳಿಗೆ ಕೆಎಂಎಫ್ ಮೂಲಕ ಹಾಲಿನ ಪುಡಿ ಪೂರೈಸುವ ಜೊತೆ ಶಾಲೆಗಳಿಗೆ ಸಾಗಣೆ ಮಾಡುತ್ತಿತ್ತು. ಆದರೆ ಸರ್ಕಾರ ಅಕ್ಷರ ದಾಸೋಹ ಯೋಜನೆಯ ಬಿಸಿಯೂಟದ ಆಹಾರ ಸಾಮಗ್ರಿಯ ಜೊತೆ ಹಾಲಿನ ಪೌಡರ್ ಕೂಡಾ ಶಾಲೆಗಳಿಗೆ ಸರಬರಾಜು ಮಾಡಬೇಕೆಂಬ ನಿಯಮ ತಂದ ಕಾರಣ, ಅಕ್ಷರ ದಾಸೋಹ ಆಹಾರ ಸರಬರಾಜು ಮಾಡುತ್ತಿದ್ದ ಖಾಸಗಿ ಗುತ್ತಿಗೆದಾರರಿಗೆ ನುಂಗಲಾಗದ ತುತ್ತಾಗಿದೆ. ಅಧಿಕಾರಿಗಳ ಮತ್ತು ಆಹಾರ ಸಾಮಗ್ರಿ ಸಾಗಣೆ ಗುತ್ತಿಗೆದಾರರ ಈ ಹಗ್ಗ ಜಗ್ಗಾಟದಲ್ಲಿ ಬಡ ಮಕ್ಕಳಿಗೆ 2 ತಿಂಗಳಿಂದ ಕ್ಷೀರ ಭಾಗ್ಯ ಸಿಗದಂತಾಗಿದೆ.

 

click me!