ಕಾಯಂ ಸಂವಿಧಾನಿಕ ಪೀಠ: ಸುಪ್ರೀಂ ಕನಸು ನನಸು ಸನ್ನಿಹಿತ!

By Web DeskFirst Published Sep 22, 2019, 9:34 AM IST
Highlights

ಕಾಯಂ ಸಂವಿಧಾನಿಕ ಪೀಠ: ಸುಪ್ರೀಂ ಕನಸು ನನಸು ಸನ್ನಿಹಿತ| 70 ವರ್ಷಗಳಿಂದ ಇಂಥ ಪೀಠ ಕೋರ್ಟಲ್ಲಿ ಇಲ್ಲ

ನವದೆಹಲಿ[ಸೆ.22]: ದೇಶದ ಸರ್ವೋಚ್ಚ ನ್ಯಾಯಾಲಯ ಐವರು ಸದಸ್ಯರಿರುವ ಕಾಯಂ ಸಾಂವಿಧಾನಿಕ ಪೀಠ ಹೊಂದಬೇಕು ಎಂಬ ಸಂವಿಧಾನಶಿಲ್ಪಿಗಳ ಕನಸು ನನಸಾಗುವ ದಿನಗಳು ಹತ್ತಿರವಾಗಿವೆ. 70 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಯಂ ಸಾಂವಿಧಾನಿಕ ಪೀಠ ಸ್ಥಾಪಿಸುವ ಅವಕಾಶ ಸುಪ್ರೀಂಕೋರ್ಟ್‌ಗೆ ಲಭ್ಯವಾಗಿದೆ.

1950ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ 8 ನ್ಯಾಯಾಧೀಶರು ಇದ್ದರು. ಇದೀಗ ಕೇಂದ್ರ ಸರ್ಕಾರ ಕಾಯ್ದೆ ತಿದ್ದುಪಡಿ ಮಾಡಿರುವುದರಿಂದ ನ್ಯಾಯಾಧೀಶರ ಸಂಖ್ಯೆ 34ಕ್ಕೇರಿಕೆಯಾಗಿದೆ. ಆ ಹುದ್ದೆಗೆ ನ್ಯಾಯಮೂರ್ತಿಗಳ ನೇಮಕವೂ ಮುಕ್ತಾಯವಾಗಿದೆ. ಹೀಗಾಗಿ ಅ.1ರಿಂದ ಪಂಚಸದಸ್ಯರನ್ನು ಒಳಗೊಂಡ ಕಾಯಂ ಸಾಂವಿಧಾನಿಕ ಪೀಠ ಸ್ಥಾಪನೆ ಕುರಿತು ನಿರ್ಧಾರ ಕೈಗೊಳ್ಳುವ ಅವಕಾಶ ಮುಖ್ಯ ನ್ಯಾಯಮೂರ್ತಿಗಳಿಗೆ ಲಭಿಸಿದೆ.

ಈಗಿನ ಕಾರ್ಯವಿಧಾನಗಳ ಪ್ರಕಾರ, ದ್ವಿಸದಸ್ಯ ಪೀಠದ ವಿಚಾರಣೆ ವೇಳೆ ಕಾನೂನಿನ ಮಹತ್ವದ ಪ್ರಶ್ನೆಗಳು ಎದುರಾದರೆ ಅದನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಲಾಗುತ್ತದೆ. ತೀರಾ ಮಹತ್ವದ ಪ್ರಕರಣಗಳನ್ನು ತ್ರಿಸದಸ್ಯ ಪೀಠ ಪಂಚ ಸದಸ್ಯ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡುತ್ತದೆ. ಬಾಕಿ ಇರುವ ಪ್ರಕರಣಗಳು, ನ್ಯಾಯಮೂರ್ತಿಗಳ ಸಮಯಾವಕಾಶ ನೋಡಿಕೊಂಡು ಪಂಚ ಸದಸ್ಯ ಪೀಠಕ್ಕೆ ಮುಖ್ಯ ನ್ಯಾಯಮೂರ್ತಿಗಳು ನ್ಯಾಯಾಧೀಶರನ್ನು ನೇಮಕ ಮಾಡುತ್ತಾರೆ. ಈ ಪೀಠ ರಚನೆ ಎಂಬುದು ಯಾವುದೇ ಮುಖ್ಯ ನ್ಯಾಯಮೂರ್ತಿಗೆ ಸವಾಲಿನ ಕೆಲಸವಾಗಿದೆ.

click me!