
ಹೈದ್ರಾಬಾದ್[ಸೆ.22]: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಸಂಸತ್ತಿನ ಮುಂಭಾಗದಲ್ಲಿ ತಮ್ಮ ವಿಶೇಷ ರೀತಿಯ ಪ್ರತಿಭಟನೆ ಮೂಲಕ ಖ್ಯಾತರಾಗಿದ್ದ ತೆಲುಗು ದೇಶಂ ಪಕ್ಷ(ಟಿಡಿಪಿ)ದ ಮಾಜಿ ಸಂಸದ ನಾರಮಲ್ಲಿ ಶಿವಪ್ರಸಾದ್(68) ಅವರು ಶನಿವಾರ ಕಿಡ್ನಿ ವೈಫಲ್ಯದಿಂದ ಇಹಲೋಕ ತ್ಯಜಿಸಿದ್ದಾರೆ.
2013-14ರ ಆಂಧ್ರಪ್ರದೇಶ ವಿಭಜನೆ ಸಂದರ್ಭ ಹಾಗೂ 2018-19ನೇ ಸಾಲಿನಲ್ಲಿ ಆಂಧ್ರಪ್ರದೇಶದ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಟಿಡಿಪಿ ಪ್ರತಿಭಟನೆಯಲ್ಲಿ ವಿಶಿಷ್ಟ ರೀತಿಯ ಉಡುಗೆ-ತೊಡುಗೆಯೊಂದಿಗೆ ಆಗಮಿಸಿ ಗಮನ ಸೆಳೆದಿದ್ದರು.
ಟಾಲಿವುಡ್‌ನ ಖ್ಯಾತ ನಾಯಕ ಚಿರಂಜೀವಿ ಸೇರಿದಂತೆ ಇತರರ ಜೊತೆ ಶಿವಪ್ರಸಾದ್ ಅವರು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.