ದೆಹಲಿಯಲ್ಲಿ ದೀಪಾವಳಿ ಪಟಾಕಿ ನಿಷೇಧ; ಪರಿಸರ ರಕ್ಷಣೆಯ ಕ್ರಮಕ್ಕೆ ಕೋಮು ಬಣ್ಣ ಯಾಕೆ?

Published : Oct 10, 2017, 10:17 PM ISTUpdated : Apr 11, 2018, 12:42 PM IST
ದೆಹಲಿಯಲ್ಲಿ ದೀಪಾವಳಿ ಪಟಾಕಿ ನಿಷೇಧ; ಪರಿಸರ ರಕ್ಷಣೆಯ ಕ್ರಮಕ್ಕೆ ಕೋಮು ಬಣ್ಣ ಯಾಕೆ?

ಸಾರಾಂಶ

ನವದೆಹಲಿಯಲ್ಲಿ  ದೀಪಾವಳಿ ಹಬ್ಬದ ಆಚರಣೆ ವೇಳೆ ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಸುಪ್ರೀಂ ಕೋರ್ಟ್​ ಆದೇಶ ನೀಡಿದೆ. ಸುಪ್ರೀಂ ಕೋರ್ಟ್​ ಆದೇಶ ಹೊರಡಿಸುತ್ತಿದ್ದಂತೆ ಲೇಖಕ ಚೇತನ್ ಭಗತ್ ಮಾಡಿದ ಸರಣಿ ಟ್ವೀಟ್​ಗಳು ವಿವಾದದ ಕಿಡಿಯನ್ನೇ ಹೊತ್ತಿಸಿವೆ. ಸುಪ್ರೀಂ ಕೋರ್ಟ್​ನ ಆದೇಶ ಕೋಮು ಬಣ್ಣ ಪಡೆದುಕೊಂಡು ಪರ ವಿರೋಧದ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು (ಅ.10): ನವದೆಹಲಿಯಲ್ಲಿ  ದೀಪಾವಳಿ ಹಬ್ಬದ ಆಚರಣೆ ವೇಳೆ ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಸುಪ್ರೀಂ ಕೋರ್ಟ್​ ಆದೇಶ ನೀಡಿದೆ. ಸುಪ್ರೀಂ ಕೋರ್ಟ್​ ಆದೇಶ ಹೊರಡಿಸುತ್ತಿದ್ದಂತೆ ಲೇಖಕ ಚೇತನ್ ಭಗತ್ ಮಾಡಿದ ಸರಣಿ ಟ್ವೀಟ್​ಗಳು ವಿವಾದದ ಕಿಡಿಯನ್ನೇ ಹೊತ್ತಿಸಿವೆ. ಸುಪ್ರೀಂ ಕೋರ್ಟ್​ನ ಆದೇಶ ಕೋಮು ಬಣ್ಣ ಪಡೆದುಕೊಂಡು ಪರ ವಿರೋಧದ ಚರ್ಚೆಗೆ ಕಾರಣವಾಗಿದೆ.

ಪ್ರತೀ ಬಾರಿ ದೀಪಾವಳಿ ಆಚರಣೆ ವೇಳೆ ಪರಿಸರ ಸ್ನೇಹೀ ದೀಪಾವಳಿ ಆಚರಿಸಬೇಕು ಅನ್ನೋ ವಾದಗಳು ಹುಟ್ಟಿಕೊಳ್ಳುತ್ತಿದ್ದವು. ಪಟಾಕಿಗಳನ್ನು ನಿಷೇಧಿಸಬೇಕು ಅನ್ನೋ ಒತ್ತಾಯ ಇಂದೂ ನಿನ್ನೆಯದಲ್ಲ. ಆದರೆ ದೆಹಲಿಯಲ್ಲಿನ ವಾಯು ಮಾಲಿನ್ಯದ ಮಟ್ಟ ಅತೀ ಹೆಚ್ಚಾಗಿರುವುದರಿಂದ  ಸುಪ್ರೀಂಕೋರ್ಟ್​ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ ದೀಪಾವಳಿ ವೇಳೆ ಪಟಾಕಿ ಸಿಡಿಸುವುದನ್ನು ನಿಷೇಧಿಸಿದೆ. ಆದೇಶ ಹೊರಬೀಳುತ್ತಿದ್ದಂತೆ ಕೋಮು ಬಣ್ಣ ಪಡೆದುಕೊಂಡು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಹಿಂದೂ ಹಬ್ಬಗಳ ಮೇಲೆ ಇಂತಹ ನಿರ್ಧಾರ ಕೈಗೊಳ್ಳಲಾಗುತ್ತದೆ. ಇತರೆ ಕೋಮುಗಳ ಹಬ್ಬದ ವಿಚಾರದಲ್ಲಿ ಯಾರೂ ಪ್ರಶ್ನೆ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಪ್ರತಿ ನಿತ್ಯ ಆಗುವ ಮಾಲಿನ್ಯವನ್ನು ತಡೆಯುವ ಮನಸ್ಸು ಯಾರೂ ಮಾಡುವುದಿಲ್ಲ. ಆದರೆ ದೀಪಾವಳಿ ಹಬ್ಬದ ದಿನ ಉಂಟಾಗುವ ವಾಯು ಮಾಲಿನ್ಯವನ್ನೇ ಏಕೆ ಪ್ರಶ್ನಿಸಲಾಗುತ್ತಿದೆ ಎಂದು ಲೇಖಕ ಚೇತನ್ ಭಗತ್ ದ್ವನಿ ಎತ್ತಿದ್ದಾರೆ. ಪಟಾಕಿಯನ್ನು ಮಾತ್ರ ಏಕೆ ನಿಷೇಧಿಸುತ್ತೀರಾ..? ಬಕ್ರೀದ್​ ದಿನ ಕುರಿ ಕಡಿಯುವುದನ್ನು ನಿಷೇಧಿಸಿ. ಕ್ರಿಸ್​ ಮಸ್ ಹಬ್ಬದ ದಿನ ಕ್ರಿಸ್ ಮಸ್ ಟ್ರೀ ಬಳಸುವುದನ್ನು ನಿಷೇಧಿಸಬೇಕು ಎಂದು ಚೇತನ್ ಭಗತ್ ಟ್ವೀಟ್ ಮಾಡಿದ್ದಾರೆ..

ಚೇತನ್ ಭಗತ್ ಟ್ವೀಟ್​ ಮಾಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.  ಪಟಾಕಿ ನಿಷೇಧ ಮಾಡಿರುವುದು ಸರಿಆಯದ ನಿರ್ಧಾರ. ಬಕ್ರೀದ್​ಗೆ ಕುರಿ ಕಡಿಯುವುದನ್ನು, ಕ್ರಿಸ್ ಮಸ್ ಟ್ರೀ ನಿಷೇಧಿಸಬೇಕು ಎಂದು ಈ ಆದೇಶವನ್ನು ಹೋಲಿಕೆ ಮಾಡುವುದು ತಪ್ಪು. ದೀಪಾವಳಿ ಆಚರಣೆಗೆ ದೀಪಗಳನ್ನು ನಿಷೇಧ ಮಾಡಿದ್ದರೆ ಮಾತ್ರ ಅದು ತಪ್ಪು ನಿರ್ದಾರವಾಗುತ್ತಿತ್ತು ಎಂದು ಕೇಂದ್ರದ ಮಾಜಿ ಸಚಿವ ಶಶಿತರೂರ್ ಸುಪ್ರೀಂ ಆದೇಶವನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು ಮಾಜಿ ಕ್ರಕೆಟ್ ಆಟಗಾರ ವಿರೇಂದ್ರ ಸೆಹ್ವಾಗ್ ದೀಪಾವಳಿಯನ್ನು ಧಾಮ್​ ದೂಮ್​ ಆಗಿ ಆಚರಿಸುವವರು ನನ್ನ ಟ್ವೀಟ್​ ಅನ್ನು ರೀಟ್ವೀಟ್ ಮಾಡಿ ಎಂದು ಪಟಾಕಿ ಸಿಡಿಸುವುದನ್ನು ಸಮರ್ಥಿಸಿಕೊಂಡಿದ್ದಾರೆ. ಆದ್ರೆ ಕ್ರಿಕೆಟಿಗ ಯುವರಾಜ್​ ಸಿಂಗ್ ಪರಿಸರ ಸ್ನೇಹಿ ದೀಪಾವಳಿಗೆ ನನ್ನ ಬೆಂಬಲ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬರ್ಲಿನ್‌ನಲ್ಲಿ ಟಿವಿಎಸ್‌ ಬೈಕ್ : ರಾಹುಲ್‌ ಗಾಂಧಿ ಭಾರಿ ಮೆಚ್ಚುಗೆ
ಇಂದು ಭಾರತ-ಒಮಾನ್‌ ಮುಕ್ತ ವ್ಯಾಪಾರ ಒಪ್ಪಂದ